BMTC: ಜುಲೈ 6ರಂದು ನೌಕರರ Pay fixation ಸಂಬಂಧ ಕೇಂದ್ರ ಕಚೇರಿಯಲ್ಲಿ ಸಭೆ ನಿಗದಿ
ಸಂಸ್ಥೆಯ ಕೇಂದ್ರ ಕಚೇರಿ / ಕಾರ್ಯಾಗಾರ ಮತ್ತು ಘಟಕಗಳಲ್ಲಿ 01.07.2026 ರಂದು ಸೇವೆಯಲ್ಲಿ ಮುಂದುವರಿದ ಅಧಿಕಾರಿ / ನೌಕರರ ಪರಿಷ್ಕೃತ ಮೂಲ ವೇತನ ನಿಗದಿಯನ್ನು ಸುತ್ತೋಲೆಯನ್ವಯ ನಿಗದಿಪಡಿಸುವ ಬಗ್ಗೆ ಸ್ಪಷ್ಟೀಕರಣ / ಮಾಹಿತಿ ನೀಡುವ ಬಗ್ಗೆ ಸೂಚಿಸಿದ್ದು, 6.07.2026ರಂದು ಕೇಂದ್ರ ಕಚೇರಿಯ 4ನೇ ಮಹಡಿಯಲ್ಲಿರುವ ಮಿನಿ ಮೀಟಿಂಗ್ ಹಾಲ್ನಲ್ಲಿ ಸಭೆಯನ್ನು ಅಯೋಜಿಸಿದ್ದು, ಅದರಂತೆ ಸಿಬ್ಬಂದಿಗಳನ್ನು ನಿಗದಿತ ಸಮಯದೊಳಗೆ ಹಾಜರಾಗುವಂತೆ ಸೂಚಿಸಿ ನಿಯೋಜಿಸಲು ಈ ಮೂಲಕ ಸೂಚಿಸಲಾಗಿದೆ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಧಿಕಾರಿ/ ನೌಕರರಿಗೆ 01.04.2025 ರಿಂದ ಜಾರಿಗೆ ಬಂದಿರುವ ಪರಿಷ್ಕೃತ ಮೂಲ ವೇತನದಂತೆ Pay fixation ಸಂಬಂಧ ಇದೇ ಜುಲೈ 6 ಮತ್ತು 7ರಂದು ಹಮ್ಮಿಕೊಂಡಿದ್ದು ಈ ಸಭೆಗೆ ಸಿಬ್ಬಂದಿ ಇಲಾಖೆ ಮತ್ತು ಲೆಕ್ಕಪತ್ರ ಇಲಾಖೆಯ ಮೇಲ್ವಿಚಾರಕರು/ ಅಧೀಕ್ಷಕರು ಮತ್ತು ವಿಷಯ ನಿರ್ವಾಹಕರ ನಿಯೋಜಿಸುವಂತೆ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಕಚೇರಿ ಆದೇಶ ಹೊರಡಿಸಿದ್ದಾರೆ.
ಈ ಸಂಬಂಧ ಇಂದು ಆದೇಶ ಹೊರಡಿಸಲಾಗಿದ್ದು, ಜುಲೈ 6ರಂದು ಕೇಂದ್ರ ಕಚೇರಿಯ 4ನೇ ಮಹಡಿಯಲ್ಲಿರುವ ಮಿನಿ ಮೀಟಿಂಗ್ ಹಾಲ್ನಲ್ಲಿ ಸಭೆಯನ್ನು ಅಯೋಜಿಸಿಲಾಗಿದೆ. ಹೀಗಾಗಿ ಬೆಳಗ್ಗೆ 11 ಗಂಟೆಗೆ ಬಿಎಂಟಿಸಿಯ ಘಟಕ-2 ರಿಂದ ಘಟಕ- 26ರವರೆಗಿನ ಸಿಬ್ಬಂದಿ ಇಲಾಖೆ ಮತ್ತು ಲೆಕ್ಕಪತ್ರ ಇಲಾಖೆಯ ಮೇಲ್ವಿಚಾರಕರು/ ಅಧೀಕ್ಷಕರು ಮತ್ತು ವಿಷಯ ನಿರ್ವಾಹಕರ ನಿಯೋಜಿಸಬೇಕು.
ಅದರಂತೆ ಅಂದೇ ಮಧ್ಯಾಹ್ನ 2.30 ಗಂಟೆಗೆ ಇದೇ ಕೇಂದ್ರ ಕಚೇರಿಯ 4ನೇ ಮಹಡಿಯಲ್ಲಿರುವ ಮಿನಿ ಮೀಟಿಂಗ್ ಹಾಲ್ನಲ್ಲಿ ನಡೆಯುವ ಸಭೆಗೆ ಬಿಎಂಟಿಸಿಯ ಘಟಕ-27 ರಿಂದ ಘಟಕ- 52 ರವರೆಗಿನ ಸಿಬ್ಬಂದಿ ಇಲಾಖೆ ಮತ್ತು ಲೆಕ್ಕಪತ್ರ ಇಲಾಖೆಯ ಮೇಲ್ವಿಚಾರಕರು/ ಅಧೀಕ್ಷಕರು ಮತ್ತು ವಿಷಯ ನಿರ್ವಾಹಕರ ನಿಯೋಜಿಸಬೇಕು ಎಂದು ತಿಳಿಸಿದ್ದಾರೆ.
ಇನ್ನು ಈ ವಿಷಯಕ್ಕೆ ಸಂಬಂದಿಸಿದಂತೆ ರಾಜ್ಯ ಸರ್ಕಾರವು ನಾಲ್ಕೂ ರಸ್ತೆ ಸಾರಿಗೆ ನಿಗಮಗಳ ಅರ್ಹ ನೌಕರರ/ ಅಧಿಕಾರಿಗಳ (ಪೂರ್ವ ಕಿಂಕೋ ನೌಕರರು ಸೇರಿದಂತೆ) 31.03.2025 ರಂದು ಪಡೆಯುತ್ತಿದ್ದ ಮೂಲ ವೇತನವನ್ನು ಶೇ 12.50 ರಷ್ಟು ಹೆಚ್ಚಿಸಿ 01.04.2025 ರಿಂದ ಮೂಲ ವೇತನವನ್ನು ಪರಿಷ್ಕರಿಸಿ, ಅದರಂತೆ ಎಲ್ಲ ವೇತನ ಶ್ರೇಣಿಗಳನ್ನು ಜಾರಿಗೊಳಿಸಲು12.05.2026ರಲ್ಲಿ ಅನುಮೋದಿಸಿ ಆದೇಶ ಹೊರಡಿಸಿದೆ.
ಈ ಆದೇಶದಂತೆ 01.07.2026 ರಂದು ಸೇವೆಯಲ್ಲಿ ಮುಂದುವರಿದ ನೌಕರರು/ ಅಧಿಕಾರಿಗಳಿಗೆ ಪರಿಷ್ಕೃತ ಮೂಲ ವೇತನವನ್ನು 01.04.2025 ರಿಂದ ಜಾರಿಗೊಳಿಸಿ, ಜುಲೈ-2026 ರ ಮಾಹೆಯಿಂದ ಮತ್ತು ಮುಂದಕ್ಕೆ ವೇತನದಲ್ಲಿ ಅನುಷ್ಠಾನಗೊಳಿಸಿ ಪಾವತಿಸಲು KSRTC ನಿಗಮ ಕೇಂದ್ರ ಕಚೇರಿಯಿಂದ 01.07.2026 ರಂದು ಸುತ್ತೋಲೆ ಹೊರಡಿಸಲಾಗಿದೆ.
ಮುಂದುವರಿದು, ಈ ಸಂಬಂಧ ಕೇಂದ್ರ ಕಚೇರಿ / ಕಾರ್ಯಾಗಾರ ಮತ್ತು ಘಟಕಗಳಲ್ಲಿ 01.07.2026 ರಂದು ಸೇವೆಯಲ್ಲಿ ಮುಂದುವರಿದ ಅಧಿಕಾರಿ / ನೌಕರರ ಪರಿಷ್ಕೃತ ಮೂಲ ವೇತನ ನಿಗದಿಯನ್ನು ಸುತ್ತೋಲೆಯನ್ವಯ ನಿಗದಿಪಡಿಸುವ ಬಗ್ಗೆ ಸ್ಪಷ್ಟೀಕರಣ / ಮಾಹಿತಿ ನೀಡುವ ಬಗ್ಗೆ ಸೂಚಿಸಿದ್ದು, 6.07.2026ರಂದು ಕೇಂದ್ರ ಕಚೇರಿಯ 4ನೇ ಮಹಡಿಯಲ್ಲಿರುವ ಮಿನಿ ಮೀಟಿಂಗ್ ಹಾಲ್ನಲ್ಲಿ ಸಭೆಯನ್ನು ಅಯೋಜಿಸಿದ್ದು, ಅದರಂತೆ ಸಿಬ್ಬಂದಿಗಳನ್ನು ನಿಗದಿತ ಸಮಯದೊಳಗೆ ಹಾಜರಾಗುವಂತೆ ಸೂಚಿಸಿ ನಿಯೋಜಿಸಲು ಈ ಮೂಲಕ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.







