NEWSಕೃಷಿನಮ್ಮರಾಜ್ಯರಾಜಕೀಯಸಿನಿಪಥ

ರೈತರ ಹೋರಾಟವನ್ನು ಸಿನಿಮಾ ನಟ ನಟಿಯರೂ ಬೆಂಬಲಿಸಿ: ಸಿದ್ದರಾಮಯ್ಯ ಕರೆ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ದೇಶಾದ್ಯಂತ ರೈತರು ನಡೆಸುತ್ತಿರುವ ಹೋರಾಟ ಕೇವಲ ರೈತ ಸಂಘಟನೆಗಳು ಇಲ್ಲವೇ ರಾಜಕೀಯ ಪಕ್ಷಗಳದ್ದಲ್ಲ. ಈ ಮಣ್ಣಿನ ಎಲ್ಲ ಸಾಹಿತಿಗಳು, ಕಲಾವಿದರು, ವಿಶೇಷವಾಗಿ ಸಿನಿಮಾ ನಟ-ನಟಿಯರು ಬೀದಿಗಿಳಿದು ಹೋರಾಟ ನಿರತ ರೈತರನ್ನು ಬೆಂಬಲಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಮೂರು ಕೃಷಿ ಮಸೂದೆಯಿಂದ ರೈತರಿಗೆ ತುಂಬ ತೊಂದರೆ ಇದೆ ಎಂಬುದನ್ನು ಅರಿತು ಅವರು ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ ಅವರ ಪ್ರತಿಭಟನರಯನ್ನು ನಾವು ಬೆಂಬಲಿಸೋಣ ಆದ್ದರಿಂದ ಎಲ್ಲರೂ ಒಂದಾಗಿ ಬನ್ನಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ಸುಮಾರು 80 ದಿನಗಳಿಂದ ದೆಹಲಿ ಸೇರಿದಂತೆ ವಿವಿಧೆಡೆ ರೈತರು ತೀವ್ರ ಪ್ರತಿಭಟನೆ  ನಡೆಸುತ್ತಿದ್ದ್ದಾದರು ಈ ಜೀವವಿಲ್ರೆಲ ಸರ್ಕಾರ ಅವರ ಮನವಿಯನ್ನು ಸ್ವೀಕರಿಸಿ ಪರಿಹರಿಸು ಸಾಧ್ಯವಿಲ್ಲ ಎಂಬಂತೆ ಉದ್ಧಟತನವನ್ನು ತೋರುತ್ತಿದೆ ಎಂದು ಕಿಡಿಕಾರಿದ್ದಾರೆ.

ಇನ್ನು ರೈತರ ಪ್ರತಿಭಟನರಗೆ ನಾಡಿನ ಮತ್ತು ದೇಶದ ಯಾವುದೇ ಸಿನಿಮಾ ನಟಿ ನಟರು ಮತ್ತು ಸಾಹಿತಿಗಳು ಕಲಾವಿದರು ಧ್ವನಿ ಎತ್ತದಿರುವುದು  ಒಂದು ರೀತಿಯ  ನೋವಿನ ಸಂಗತಿ ಆಗಿದೆ. ಇನ್ನಾದರೂ ಈ ಕಡೆ  ನೋಡಬೇಕು. ಕಾರಣ ನಾಔಉ ತಿನ್ನುತ್ತಿರುವುದು ಅನ್ನದಾತ ಬೆಳೆದಿರುವ ಫಸಲನ್ನು ಎಂದು ಸೂಕ್ಷ್ಮವಾಗಿ ತಿಳಿ ಹೇಳಿದ್ದಾರೆ.

ಗಣರಾಜ್ಯೋತ್ಸವ  ಗಲಭೆ ಬೆನ್ನಿಗೆ ಹರಿಯಾಣ, ಪಂಜಾಬ್ಮ ಮತ್ತು ಉತ್ತರಪ್ರದೇಶದಿಂದ ದೆಹಲಿಗೆ ಆಗಮಿಸಿರುವ  ರೈತರ ಸಂಖ್ಯೆ ದಿನಿದಿಂದ ದಿನಕ್ಕೆ ಅಧಿಕವಾಗಿದೆ.   ರೈತರು ಹಚ್ಚಾಗಿ ಪ್ರತಿಭಟನೆಯಲ್ಲಿ ಭಾಗವಹಿಸಬಾರದು ಎಂಬ ಕಾರಣಕ್ಕೆ ಅವರನ್ನು ತಡೆಯಲು ಕೇಂದ್ರ  ರಸ್ತೆಗಳನ್ಗನೇ ಅಗೆಸಿ ಮೊಳೆಗಳನ್ನು ಹಾಕಿಸಿದೆ. ಇದರಿಂದ ಸಾರ್ನೆವಜನಿಕರ ಹಣ ಕೂಡ ವ್ಯರ್ಥವಾಗುತ್ತಿದೆ. ಜತೆಗೆ ದೊಡ್ಡ ದೊಡ್ಡ ತಡೆ ಗೋಡೆಗಳು, ಮುಳ್ಳುಗಳನ್ನು ಹಾಕಿಸುತ್ತಿದೆ ಇನ್ನೂ  ಬ್ಯಾರಿಕೇಡ್‌ ಅಳವಡಿಸುವ ಕೆಲಸವು ನಿರಂತರವಾಗಿದೆ.

ಇಂಥ ನೀಚ ಸರ್ಕಾರವನ್ನು ನಾನು ನೋಡಿಯೇ ಇಲ್ಲ ಎಂದು ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಕೆಂಡಮಂಡಲರಾಗಿ ಗುಡುಗಿದ್ದಾರೆ.

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...