ವಿಜಯಪಥ ಸಮಗ್ರ ಸುದ್ದಿ
ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಮದರಕಲ್ ಗ್ರಾಮದಲ್ಲಿ ಶಾಸಕ ಶಿವನಗೌಡ ನಾಯಕ್ ವಿತರಿಸಿದ ಆಹಾರದಲ್ಲಿ ಹುಳುಗಳು ಪತ್ತೆಯಾಗಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಹಟ್ಟಿಚಿನ್ನದಗಣಿ ಕಂಪನಿ ಬಡವರಿಗೆ ವಿತರಿಸಲು ನೀಡಿದ್ದ ಆಹಾರ ಪೊಟ್ಟಣಗಳು ಇವಾಗಿದ್ದು, ಹುಳು ಬಿದ್ದ ಮೇಲೆ ನಮಗೆ ಹಂಚಿಕೆ ಮಾಡಿದ್ದಾರೆ. ಇದು ಶಾಸಕರಿಗೆ ಶೋಭೆ ತರುವಂತದಲ್ಲ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.
ತಹಸೀಲ್ದಾರ್ ಮುಖಾಂತರ ಬಡವರಿಗೆ ಹಂಚಿಕೆ ಮಾಡಲು ಲಾಕ್ಡೌನ್ ಸಂದರ್ಭದಲ್ಲಿ ಕೊಟ್ಟಿದ್ದ ಕಿಟ್ಗಳನ್ನು ವಿತರಿಸದೆ ಶನಿವಾರ ದೇವದುರ್ಗ ಶಾಸಕ ಶಿವನಗೌಡ ನಾಯಕ ಗ್ರಾಮಸ್ಥರಿಗೆ ವಿತರಿಸಿದರು. ಆದರೆ ಆ ಕಿಟ್ಗಳನ್ನು ಮನೆಗೆ ತಂದು ಬಿಚ್ಚಿ ನೋಡಿದಾಗ ಉಪಯೋಗಿಸಲು ಯೋಗ್ಯವಾಗಿಲ್ಲ ಎಂದು ತಿಳಿದಿದ್ದಾಗಿ ಗ್ರಾಮಸ್ಥರು ಹೇಳಿದ್ದಾರೆ.
ಹಾಳಾಗಿರುವ ಪದಾರ್ಥಗಳನ್ನು ವಿತರಣೆ ಮಾಡಿರುವ ಶಾಕರು ಮತ್ತು ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಮತ್ತು ಅಸಮಾಧಾವನ್ನು ಹೊರಹಾಕಿದ್ದು, ಕೊಟ್ಟ ಆಹಾರ ಕಿಟ್ಗಳನ್ನು ತಪ್ಪೆಗೆ ಬೀಸಾಕಿ ಬಂದಿರುವುದಾಗಿ ತಿಳಿಸಿದ್ದಾರೆ.