ವಿಜಯಪಥ ಸಮಗ್ರ ಸುದ್ದಿ
ಕರ್ನೂಲ್ (ಆಂಧ್ರಪ್ರದೇಶ): ಟ್ರಕ್ ಮತ್ತು ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ14ಮಂದಿ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ವೆಲ್ದುರ್ಥಿ ಮಂಡಲ್‌ನ ಮಾದಾರ್‌ಪುರ ಗ್ರಾಮದಲ್ಲಿ ಭಾನುವಾರ ನಸುಕಿನ ಜಾವ ನಡೆದಿದೆ.
14ಜನ ಮೃತಪಟ್ಟಿದ್ದು, ನಾಲ್ಕುಜನ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿತ್ತೂರು ಜಿಲ್ಲೆಯ ಮದನಪಲ್ಲಿಯಿಂದ ಅಜ್ಮೀರ್ ದರ್ಗಾಕ್ಕೆ 18ಮಂದಿ ಮಿನಿ ಬಸ್ಸಿನಲ್ಲಿ ಯಾತ್ರೆ ಹೊರಟಿದ್ದರು. ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದು ಮತ್ತೊಂದು ಎದುರಿನಿಂದ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿಯಾಗಿ ನೆರಕ್ಕೆ ಉರುಳಿಬಿದ್ದಿದೆ.
ಅವಘಡದ ತೀವ್ರತೆ ಎಷ್ಟರ ಮಟ್ಟಿಗೆ ಇತ್ತೆಂದರೆ ಬಸ್ ಸಂಪೂರ್ಣ ಜಖಂ ಆಗಿದ್ದು ಬಸ್ನಲ್ಲಿ 18 ಮಂದಿಯಲ್ಲಿ 14ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್‌ನಲ್ಲಿ 8 ಮಹಿಳೆಯರು 9 ಪುರುಷರು ಮತ್ತು ಒಬ್ಬ ಬಾಲಕ ಇದ್ದ. ಮೃತರ ಹೆಸರು ಮತ್ತು ವಿಳಾಸ ಇನ್ನು ಸಿಕ್ಕಿಲ್ಲ.
ಮಾಹಿತಿ ತಿಳಿಸಿದ ತಕ್ಷಣ ಸ್ಥಳಕ್ಕೆ ಆ108 ತುರ್ತು ವಾಹನದೊಂದಿಗೆ ಪೊಲೀಸರು ಆಗಮಿಸಿ ಗಾಯಗೊಂಡವರನ್ನು ಕರ್ನೂಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಮಿನಿಬಸ್ ವೇಗವಾಗಿದ್ದು ಈ ವಳೆ ಚಾಲಕ ನಿದ್ದೆ ಮಂಪರಿನಲ್ಲಿದ್ದ ಕಾರಣ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಕರ್ನೂಲ್ ಜಿಲ್ಲಾಧಿಕಾರಿ ಜಿ. ವೀರಪಂಡಿಯನ್ ಮತ್ತು ಎಸ್ಪಿ ಪಕೀರಪ್ಪ ಅಪಘಾತ ಸಂಭವಿಸಿದ ಸ್ಥಳಕ್ಕೆ ಧಾವಿಸಿದ್ದು ಪರಿಸ್ಥಿತಿ ಅವಲೋಕಿಸಿದ್ದಾರೆ.
ಆಘಾತದ ವಿಷಯ ತಿಳಿದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಆಘಾತ ವ್ಯಕ್ತಪಡಿಸಿದ್ದಾರೆ. ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ಕೊಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.