NEWSನಮ್ಮಜಿಲ್ಲೆನಮ್ಮರಾಜ್ಯರಾಜಕೀಯ

ಅಪ್ಪ ಮಕ್ಕಳ ಸಿಡಿ ಅವರ ಬಳಿ ಇವೆ: ಅವುಗಳು ಹೊರ ಬರುತ್ತವೆ: ಶಾಸಕ ಯತ್ನಾಳ್ ಬಾಂಬ್‌

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಈಗ ಏನಿದ್ದರೂ ಸಿಡಿದ್ದೆ ಸದ್ದು, ಒಂದಲ್ಲ-ಎರಡಲ್ಲ ಇನ್ನು 23 ಸಿಡಿ ಗಳಿವೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತೊಂದು ಸಿಡಿ ಬಾಂಬ್‌ ಸಿಡಿಸಿದ್ದಾರೆ.

ವಿಧಾನಸೌಧದ ಮೊಗಸಾಲೆಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್ ಸದ್ಯಕ್ಕೆ ಈಗ ಸಿಡಿ ರಾಜಕಾರಣ ಹೊರಬಂದಿರುವ ಸಿಡಿಯ ಬಗ್ಗೆ ನಾನು ಹೇಳಿಲ್ಲ. ಅದಕ್ಕೂ ನಾನು ಹೇಳುತ್ತಿರುವುದಕ್ಕೂ ಯಾವುದೇ ಸಂಬಂಧವಿಲ್ಲ, ಎರಡು ಬೇರೆಬೇರೆಯಾಗಿವೆ ಎಂದು ಹೇಳಿದರು.

ಅಂದರೆ, ನಾನು ಸಿಡಿ ಇವೆ ಎಂದು ಹೇಳಿದ್ದೆ. ಆದರೆ ನಾನು ಹೇಳಿದ್ದು ಬೇರೆ ಸಿಡಿಗಳ ಬಗ್ಗೆ. ಆದರೆ ಈಗ ಬಿಡುಗಡೆಯಾಗಿರುವುದು ಬೇರೆ ಸಿಡಿ. ನೋಡ್ತಾ ಇರಿ ಉಳಿದ ಆ ‘ಸಿಡಿ’ಗಳು ಹೊರ ಬರುತ್ತವೆ ಎಂದು ಮತ್ತೊಂದು ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಬೆಕ್ಕಿಗೆ ಆಟ, ಇಲಿಗೆ ಪ್ರಾಣ ಸಂಕಟ ಎಂಬಂತಾಗಿದೆ. ಜತೆಗೆ ಯಾಕೆ ಸಿಡಿಗಳು ಬಿಡುಗಡೆ ಆಗುತ್ತವೆ ಎಂಬುದನ್ನೂ ಅವರು ವಿವರಿಸಿದ್ದಾರೆ.

ರಮೇಶ್ ಜಾರಕಿಹೊಳಿ ಅವರ ‘ಸಿಡಿ’ಯನ್ನು ಇವರು ಬಿಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ಸುಮ್ಮನಿರ್ತಾರಾ? ಅವರ ಬಳಿಯೂ ಕೆಲವು ‘ಸಿಡಿ’ಗಳು ಇರುತ್ತವೆ. ಅಪ್ಪ ಮಕ್ಕಳ ಸಿಡಿ ಅವರ ಬಳಿ ಇವೆ. ಅವರೂ ಆ ‘ಸಿಡಿ’ಗಳನ್ನು ಇಷ್ಟರಲ್ಲೇ ಬಿಡ್ತಾರೆ ನೋಡಿ. ‘ಸಿಡಿ’ ಇಟ್ಕೊಂಡೇ ಬ್ಲ್ಯಾಕ್‌ಮೇಲ್ ಮಾಡೋ ಎರಡು ಪಕ್ಷಗಳಿವೆ. ಜೊತೆಗೆ ಕೆಲ ರಾಜಕೀಯ ನಾಯಕರು ರಾಜ್ಯದಲ್ಲಿದ್ದಾರೆ ಎಂದು ‘ಸಿಡಿ’ ರಾಜಕೀಯಕ್ಕೆ ಮತ್ತೊಂದು ಸ್ಪೋಟಕ ತಿರುವು ಕೊಟ್ಟಿದ್ದಾರೆ.

ಇನ್ನು ನನಗಿರುವ ಮಾಹಿತಿ ಪ್ರಕಾರ ಇನ್ನೂ 23 ಸಿಡಿಗಳು ಇವೆಯಂತೆ. ನೋಡ್ತಾ ಇರಿ ಅವು ಒಂದೊಂದಾಗಿ ಬಿಡುಗಡೆ ಆಗುತ್ತವೆ. ಯಾವುದೂ ಉಳಿಯೋದಿಲ್ಲ, ಎಲ್ಲವೂ ಬಿಡುಗಡೆಯಾಗುತ್ತವೆ.

ನಾನು ‘ಸತ್ಯದರ್ಶನ ಬಿಡುಗಡೆ’ ಎಂದಿದ್ದೆ. ಅದರಂತೆ ಎಲ್ಲವೂ ಬಿಡುಗಡೆ ಆಗುತ್ತವೆ. ನನ್ನ ಬಳಿ ಯಾವ ‘ಸಿಡಿ’ಗಳೂ ಇಲ್ಲ. ಸತ್ಯ ಯಾವತ್ತಿದ್ದರೂ ಹೊರಗೆ ಬರಬೇಕಲ್ವೇನ್ರೀ? ನೋಡ್ತಾ ಇರಿ ಇನ್ನು ಏನೇನು ಬಿಡುಗಡೆಯಾಗುತ್ತವೆಯೋ? ಎಂದು ಮತ್ತಷ್ಟು ಗಂಭೀರ ವಿಚಾರಗಳನ್ನು ತಮ್ಮ ಹೇಳಿಕೆಯಲ್ಲಿ ಯತ್ನಾಳ್ ತಿಳಿಸಿದ್ದಾರೆ.

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...