ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಅಧಿಕೃತವಾಗಿ ಕಾಂಗ್ರೆಸ್ ಸೇರಲು ತೀರ್ಮಾನ ಮಾಡಿದ್ದೇನೆ. ಇಂದಿನಿಂದಲೇ ಕೆಲಸ ಮಾಡಲು ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದ್ದಾರೆ.
ಗುರುವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಿರಿಯರು, ಅವರು ಸಿಎಂ ಆಗಿದ್ದವರು, ನಮ್ಮ ತಂದೆನೋ ಸಿಎಂ ಆಗಿದ್ದವರು. ಹೀಗಾಗಿ ಅವರನ್ನ ಭೇಟಿಯಾಗಿದ್ದೇನೆ. ನಾಳೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರನ್ನು ಭೇಟಿ ಮಾಡುತ್ತೇನೆ ಎಂದರು.
ಎಚ್.ಡಿ. ಕುಮಾರಸ್ವಾಮಿ ಅವರ ಆರೋಪ ವಿಚಾರದ ಬಗ್ಗೆ ಏನು ಹೇಳೋದಿಲ್ಲ, ನನಗೆ ಅವರ ಬಗ್ಗೆ ವೈಯಕ್ತಿಕ ಗೌರವವಿದೆ ಎಂದ ಅವರು ಈ ಸಂದರ್ಭದಲ್ಲಿ ದೇಶಕ್ಕೆ ಕಾಂಗ್ರೆಸ್ ಅಗತ್ಯತೆ ಇದೆ. ನನ್ನ, ಕುಮಾರಸ್ವಾಮಿ ನಡುವೆ ವೈಯಕ್ತಿಕ ಸಿಟ್ಟಿಲ್ಲ. ಈಗ ಯಾವುದೇ ಚರ್ಚೆ ಬೇಡ. ಇವತ್ತು ಮನಸಾರೆ ಕಾಂಗ್ರೆಸ್‌ಗೆ ಹೋಗಿದ್ದೇನೆ ಎಂದು ಹೇಳಿದರು.
ಇನ್ನು ಚುನಾವಣೆ ಅನ್ನೋದು ಪರೀಕ್ಷೆ ರೀತಿ, ಪಾಸ್ ಇಲ್ಲ ಫೇಲ್ ಎರಡೇ ಆಫ್ಶನ್. ಆದರೆ, ನಾಯಕತ್ವ ಎಂದೂ ಸೋಲುವುದಿಲ್ಲ. ನಾನು ಜೆಡಿಎಸ್‌ನಲ್ಲಿ ಎಂದೂ ಅಧಿಕಾರ ಅನುಭವಿಸಿಲ್ಲ. ಕಾಂಗ್ರೆಸ್‌ನಲ್ಲಿ ಬೆಳೆಯಲು ಅವಕಾಶವಿದೆ. ಅದಕ್ಕೆ ಇಂದು ಸೇರ್ಪಡೆ ಆಗುತ್ತಿದ್ದೇನೆ. ಏಪ್ರಿಲ್ ನಲ್ಲಿ ಸಮಾವೇಶ ಮಾಡುತ್ತೇವೆ. ಲಕ್ಷಾಂತರ ಜನರನ್ನ ಸೇರಿಸುತ್ತೇನೆ ಎಂದು ಮಧು ಬಂಗಾರಪ್ಪ ಹೇಳಿದರು.
ಇನ್ನು ಜೆಡಿಎಸ್‌ನಲ್ಲಿ ಇದ್ದಾಗ ನಾನು ಯಾವುದೇ ಅಧಿಕಾರ ಅನುಭವಿಸಿಲ್ಲ ಎಂದು ಹೇಳಿದ ಅವರು, ಕಾಂಗ್ರೆಸ್‌ನಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ಸೇರುತ್ತಿದ್ದೇನೆ. ಇನ್ನು ನಮ್ಮ ಕ್ಷೇತ್ರ ಸೇರಿದಂತೆ ರಾಜ್ಯಾದ್ಯಂತ ಪಕ್ಷ ಸಂಘಟಿಸಲು ಸಿದ್ದರಾಮಯ್ಯ ಅವರೊಂದಿಗೆ ನಾನು ಹೋಗುತ್ತೇನೆ ಎಂದು ಹೇಳಿದರು.