ನಮ್ಮಜಿಲ್ಲೆನಮ್ಮರಾಜ್ಯಶಿಕ್ಷಣ-ಸಂಸ್ಕೃತಿ

ಅಶಕ್ತರ, ನಿರ್ಲಕ್ಷಿತರ ಸೇವೆ ಮಾಡುವುದೇ ನಿಜವಾದ ಶಿವಪೂಜೆ : ಬನ್ನೂರು ರಾಜು

ಮೈಸೂರಿನ ಸರ್ ಎಂವಿ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಸಾರ್ಥಕ ಸೇವೆ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಮೈಸೂರು: ತಿಲಕ್ ನಗರದಲ್ಲಿರುವ ಅಂಧರ, ಕಿವುಡರ, ಮೂಗರ ಸರ್ಕಾರಿ ವಸತಿ ಶಾಲೆಯಲ್ಲಿ ದುಸ್ತಿತಿಯಲ್ಲಿದ್ದ ನಲ್ಲಿ ಮತ್ತು ಸೋಲಾರ್ ಹಾಗೂ ಒಳಚರಂಡಿ ಕೆಲಸಗಳನ್ನು ಸಾಮಗ್ರಿಗಳ ಸಹಿತ ಉಚಿತವಾಗಿ ದುರಸ್ತಿ ಮಾಡಿಕೊಡುವ ಮೂಲಕ ಮೈಸೂರಿನ ಸರ್. ಎಂ.ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಬಹಳ ಸಾರ್ಥಕವಾಗಿ ವಿಶ್ವ ನಲ್ಲಿ ಕೆಲಸಗಾರರ ದಿನಾಚರಣೆಯನ್ನು ಶಿವ ಮೆಚ್ಚುವಂತೆ ಶಿವರಾತ್ರಿಯಂದು ಆಚರಿಸಿತು.

ಈ ವೇಳೆ ಮಾತನಾಡಿದ ಸಾಹಿತಿ ಬನ್ನೂರು ಕೆ.ರಾಜು, ನಿಸ್ವಾರ್ಥ ವಾಗಿ ಅಶಕ್ತರ, ನಿರ್ಲಕ್ಷಿತರ, ಶೋಷಿತರ, ದೀನ ದಲಿತರ ಸೇವೆ ಮಾಡುವುದೇ ನಿಜವಾದ ಶಿವಪೂಜೆ. ಮನುಷ್ಯ ಪ್ರೇಮದಿಂದ, ಮಾನವೀಯ ಅಂತಃಕರಣದಿಂದ ಅವರಲ್ಲಿ ಸಂತಸ ಮೂಡಿಸುವುದೇ ಸತ್ಯ ವಾದ ಶಿವಾರಾಧನೆ. ಮನುಷ್ಯ ಮನುಷ್ಯತ್ವದಿಂದ ನಡೆದುಕೊಳ್ಳುವುದೇ ಮಾನವೀಯತೆಯ ಮಹಾಶಿವರಾತ್ರಿ ಎಂದು ತಿಳಿಸಿದರು.

ಸುಮಾರು 121 ವರ್ಷಗಳ ಇತಿಹಾಸವುಳ್ಳ ಏಷ್ಯಾದಲ್ಲೇ ಮೊಟ್ಟಮೊದಲ ಅಂಧರ, ಕಿವುಡರ, ಮೂಗರ ಶಾಲೆ ಎಂಬ ಖ್ಯಾತಿ ಹೊಂದಿರುವ ಈ ಶಾಲೆಯೇ ಒಂದು ದೇವಾಲಯವಿದಂತೆ. ಮುಗ್ದ ಮನಸ್ಸಿನ ಇಲ್ಲಿನ ವಿದ್ಯಾರ್ಥಿಗಳು ದೇವರಿದ್ದಂತೆ. ಇಂಥಾ ಪುಣ್ಯ ಸ್ಥಳದಲ್ಲಿ ಕಾರ್ಮಿಕರ ಬೆವರಿನ ಫಲದ ಹೃದಯವಂತಿಕೆಯಿಂದ ನಡೆದ ವಿಶ್ವ ನಲ್ಲಿ ಕೆಲಸಗಾರರ ದಿನಾಚರಣೆ ಅತ್ಯಂತ ಅರ್ಥಪೂರ್ಣವಾಗಿದೆ ಎಂದು ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಸಂಘಟನೆಯನ್ನು ಶ್ಲಾಘಿಸಿದರು.

ಕಿವಿ ಕೇಳದ,ಕಣ್ಣುಕಾಣದ, ಮಾತುಬಾರದವರ ಮಹಾದೇಗುಲವಾಗಿರುವ ಈ ಶಾಲೆ ವಿಶೇಷಚೇತನರಿಗೆ ಅಕ್ಷರಶಃ ಜ್ಞಾನದೇಗುಲ ವಾಗಿದೆ. ವಿಶೇಷ ಚೇತನರಾದ ಇವರಲ್ಲೊಂದು ಹೊರಗೆ ಕಾಣದಂತಹ ಒಳಗಣ್ಣಿದೆ, ಒಳಗಿವಿಯಿದೆ, ಒಳನುಡಿ ಯಿದೆ. ಒಟ್ಟಾರೆ ಇವರಲ್ಲಿ ಒಂದು ವಿಶಿಷ್ಟ ಶಕ್ತಿ ಇದೆ. ಅಂತಹ ಅಂತಃಶಕ್ತಿಯ ಮೂಲಕ ಎಲ್ಲವೂ ಸರಿ ಇರುವವರನ್ನೇ ಮೀರಿ ಸಾಧಕರಾದ ಬಲ್ಲರು ಎಂದರು.

ಶಿವ ಒಂದು ಕಿತ್ತುಕೊಂಡಿದ್ದರೆ ಮತ್ತೊಂದನ್ನು ಕೊಟ್ಟಿರುತ್ತಾನೆ. ಅಂಥಾ ಧೀಶಕ್ತಿ. ಇವರಿಗೆ ಸಿದ್ಧಿಸಿರುತ್ತದೆ. ಆದ್ದರಿಂದ ಇವರು ವಿಕಲಚೇತನರೆಂಬ ಕೀಳರಿಮೆ ಬಿಟ್ಟು ಆತ್ಮವಿಶ್ವಾಸ ಹೆಚ್ಚಿಸಿ ಕೊಳ್ಳಬೇಕು. ಅಂಧನಾದ ಗ್ರೀಕ್ ನ ಹೋಮರ್ ನ ಮಹಾಕಾವ್ಯ ಜಗತ್ತನ್ನೇ ಗೆದ್ದುಕೊಂಡದ್ದು, ನಮ್ಮ ಪಂಚಾಕ್ಷರಿ ಗವಾಯಿಗಳು ತಮ್ಮ ಗಾಯನದಿಂದ ವಿಶ್ವವನ್ನೇ ಮೆಚ್ಚಿ ಸಿದ್ದು, ಒಂದು ಚೂರೂ ಕಿವಿ ಕೇಳದ ಕಲಾವಿದ ಬಾಲಕೃಷ್ಣ ಸಾವಿರ ಸಿನಿಮಾಗಳಲ್ಲಿ ನಟಿಸಿ ವಿಶ್ವದಾಖಲೆ ಬರೆದದ್ದು ಎಲ್ಲರಿಗೂ ಮಾದರಿಯಾಗಬೇಕೆಂದು ಹೇಳಿದರು.

ಶಾಲೆಯ ಅಧೀಕ್ಷಕ ಸತೀಶ್ ಮಾತನಾಡಿ, ನೇಚರ್ ನಲ್ಲಿಯೇ ಡಿಫರೆಂಟ್ ಇದೆ. ಇನ್ನು ಮನುಷ್ಯರಲ್ಲಿ ಇಲ್ಲದಿದ್ದೀತೆ? ಕೆಲವರಿಗೆ ಉದ್ದಮೂಗು,ಕೆಲವರಿಗೆ ಸೊಟ್ಟ ಮೂಗು, ಮತ್ತೆ ಕೆಲವರಿಗೆ ಅಗಲ ಬಾಯಿ, ಇನ್ನೂ ಕೆಲವರಿಗೆ ಚಿಕ್ಕ ಬಾಯಿ, ಚಿಕ್ಕ ಕಿವಿ, ದೊಡ್ಡ ಕಿವಿ ಹೀಗೆ ಬೇರೆ ಬೇರೆ ತೆರನಾಗಿ ಇರುತ್ತದೆ. ಕಣ್ಣಿಲ್ಲದವರಾದರೇನು? ಕಿವಿ ಯಿಲ್ಲದವರಾದರೇನು? ಕೈಕಾಲು ಇಲ್ಲದವರಾ ದರೇನು ಎಲ್ಲರ ಮೇಲೂ ಸಮಾಜ ಬೆರಳು ತೋರಿಸುತ್ತದೆ.

ಯಾರೂ ಹೆಚ್ಚಲ್ಲ. ಯಾರೂ ಕಮ್ಮಿಯಲ್ಲ. ಒಟ್ಟಾರೆ ಯಾರೂ ಪರಿಪೂರ್ಣರಲ್ಲ ಎಂಬ ಸತ್ಯವನ್ನು ಅರಿತು ಆತ್ಮವಿಶ್ವಾಸವನ್ನು ಮೈಗೂಡಿಸಿಕೊಂಡು ನಿರ್ಭಯದಿಂದ ಮುನ್ನುಗ್ಗಬೇಕೆಂದು ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅವರು, ಇಲ್ಲಿ ಕಲಿತವರು ಐಎಎಸ್, ಐಪಿಎಸ್ ಅಧಿಕಾರಿಗಳಾಗಿದ್ದಾರೆ. ಬಹಳಷ್ಟು ಮಂದಿ ಪಿಎಚ್ ಡಿ ಪದವಿ ಗಳಿಸಿದ್ದಾರೆ ಎಂದು ತಮ್ಮ ಶಾಲೆಯ ಬಗ್ಗೆ ಹೆಮ್ಮೆಯಿಂದ ಹೇಳಿದರು.

ಇದಕ್ಕೂ ಮುನ್ನ ಮಹಾನಗರ ಪಾಲಿಕೆ ಸದಸ್ಯ ರಂಗಸ್ವಾಮಿ ದೀಪಬೆಳಗಿ ಕಾರ್ಯಕ್ರಮ ಉದ್ಘಾಟಿಸಿ ಶುಭ ನುಡಿಗಳನ್ನಾಡಿದರು. ಇದೇ ವೇಳೆ ವಿಶ್ವ ನಲ್ಲಿ ಕೆಲಸಗಾರರ ದಿನಾಚರಣೆಯ ನಿಮಿತ್ತ ಈ ಕ್ಷೇತ್ರದಲ್ಲಿ ಸಾಧಕರಾದ ರವಿಕುಮಾರ್ ,ಪ್ರಕಾಶ್, ಶ್ರೀನಿವಾಸ್, ಮುನಿರತ್ನ, ಲೋಕೇಶ್, ನಂಜುಂಡೇಗೌಡ ಅವರುಗಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಶಾಲೆಯ ಪ್ರಶಿಕ್ಷಣಾರ್ಥಿಗಳಾದ ಶ್ರೀಶೈಲ ಮತ್ತು ಮೌಲಾನಾ ಸಾಬ್ ಅವರ ಗುರು ಪಂಚಾಕ್ಷರಿ ಗವಾಯಿಗಳ ಪಾಪವ ಮಾಡಿ ಹುಳುವಾಗಿ ಹುಟ್ಟಿ ನರಕದಲ್ಲಿ ಬೀಳುವುದಕ್ಕಿಂತ ಪುಣ್ಯದ ಕೆಲಸವನ್ನೇ ಮಾಡು ಮಾನವ ಎಂಬ ಪ್ರಾರ್ಥನಾ ಗೀತೆಯೊಡನೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಎಸ್. ಮಹೇಶ್ ಜಯನಗರ ಅಧ್ಯಕ್ಷತೆ ವಹಿಸಿದ್ದರು.

ಆಶೀರ್ವಾದ್ ಕಂಪನಿಯ ಹೇಮಂತ್ ವರ್ಮ, ರುದ್ರನಾಥ, ನೇಮಿನಾಥ್ ಪೈಪ್ಸ್ ಮಾಲಿಕ ಗಿರಿಧರಲಾಲ್, ಅಕ್ಷಭ್ಯ ಬಿಲ್ಸ್ ಮಾಲೀಕ ಮಹಾಂತೇಶ್ ಹಾಗೂ ಜಯಕುಮಾರ್, ಚೇತನ್, ಬದ್ರಿ, ಸಂಘದ ಉಪಾಧ್ಯಕ್ಷ ಎಂ.ಎಸ್. ಸುರೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಕಾಳೇಗೌಡ,ಜಂಟಿ ಕಾರ್ಯದರ್ಶಿ ಎಸ್. ಪಳನಿ, ಖಜಾಂಚಿ ರವಿಕುಮಾರ್, ನಿರ್ದೇಶಕರಾದ ಚಂದ್ರೇಗೌಡ ,ಅನಿಲ್ ಕುಮಾರ್ , ಏಜಾಜ್ ಪಾಷ, ತಿಮ್ಮರಾಜು, ಎ.ಪ್ರಕಾಶ್, ಲಕ್ಷ್ಮಣ್, ಯೋಗೇಶ್ , ಸಂತೋಷ್ ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...