NEWSನಮ್ಮಜಿಲ್ಲೆನಮ್ಮರಾಜ್ಯರಾಜಕೀಯ

ಯಾರೂ ಸತ್ಯಹರಿಶ್ಚಂದ್ರರಲ್ಲ- ಮಾಡಿದ ತಪ್ಪು ಒಪ್ಪಿಕೊಂಡು ಮರ್ಯಾದೆ ಉಳಿಸಿಕೊಳ್ಳಿ: ಸುಧಾಕರ್‌ಗೆ ಎಚ್‌ಡಿಕೆ ಗುದ್ದು

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಯಾರೂ ಕೂಡ ಸತ್ಯಹರಿಶ್ಚಂದ್ರರಲ್ಲ. ಇನ್ನು ಎಲ್ಲರ ಮನೆ ದೋಸೆನೂ ತೂತೇ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಸಚಿವ ಸುಧಾಕರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್‌ಡಿಕೆ, ಭೂಮಿ ಮೇಲೆ ಜನ್ಮ ತಳೆದಿರುವ ಪ್ರತಿಯೊಂದು ಜೀವಿಗೂ ಸಹಜ ಪ್ರಕ್ರಿಯೆ ಇದೆ, ಈ ಹಿಂದೆ ನಾನು ಎಡವಿದ್ದ ಬಗ್ಗೆ ಅಧಿವೇಶನದಲ್ಲಿ ಹೇಳಿ ತಪ್ಪಿಕೊಂಡಿದ್ದೆ.

ಇಲ್ಲಿ ಯಾರು ಹರಿಶ್ಚಂದ್ರರಲ್ಲ, ಸುಖಸುಮ್ಮನೆ ಏಕೆ ರಾಡಿ ಎರಚಿಕೊಳ್ಳುತ್ತೀರಿ. ನೀವು ಸತ್ಯವಂತರಾದರೇ ಕೋರ್ಟ್ ಗೆ ಹೋಗಿ ಏಕೆ ತಡೆಯಾಜ್ಞೆ ತಂದಿರಿ ಎಂದು ಮಾತಿನಲ್ಲೇ ಚಾಟಿ ಬೀಸಿದ ಅವರು, ಈ ಮಾತು ಇರಲಿ ಮಾಡಿರುವ ತಪ್ಪು ಒಪ್ಪಿಕೊಂಡಿರುವಾಗ ನನ್ನ ಹೆಸರನ್ನು ಏಕೆ ಈಗ ಎಳೆದು ತರುತ್ತೀರಿ ಎಂದು ಖಾರವಾಗಿ ಪ್ರಶ್ನಿಸಿದರು.

ನೀವೇ ಸಮಸ್ಯೆ ತಂದು ಬೇರೆಯವರ ಮೇಲೆ ಏಕೆ ಕೆಸರು ಎರಚುತ್ತಿದೀರಿ. ಇದು ನಿಮಗೆ ಶೋಭೆ ತರುತ್ತದ. ಹೇಡಿಗಳ ರೀತಿ ನಡೆದುಕೊಳ್ಳುವುದನ್ನು ಬಿಟ್ಟು ಮೊದಲು ಮಾಡಿದ ತಪ್ಪಿಗೆ ಕ್ಷೆಮೆ ಕೇಳಿ ಎಲ್ಲರ ಮುಂದೆ ನೈತಿಕತೆ ಉಳಿಸಿಕೊಳ್ಳಿ ಎಂದು ಹೇಳಿದರು.

ಗಂಟೆಗೊಂದು ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಬೀದಿಯಲ್ಲಿ ನಿಂತು ನಗೆಪಾಟಲಿಗೀಡಾಗುತ್ತಿದ್ದೀರಿ. ಅದಲು ಅದರಿಂದ ಹೊರ ಬನ್ನಿ ಎಂದ ಕುಮಾರ ಸ್ವಾಮಿ, ಜನರ ಸಮಸ್ಯೆಯನ್ನು ಬಗೆಹರಿಸುವುದನ್ನು ಬಿಟ್ಟು, ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಸಮಯ ವ್ಯರ್ಥ ಮಾಡುವುದು ಎಷ್ಟು ಸರಿ ಎಂದು ಕಿಡಿಕಾರಿದರು.

Leave a Reply

error: Content is protected !!
LATEST
ನ.3ರಂದುಇಪಿಎಸ್ ಪಿಂಚಿಣಿದಾರರ ಮಾಸಿಕ ಸಭೆ: ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTCಯ ಸಮಸ್ತ ನೌಕರರ ಸಮಸ್ಯೆ, ಅಸಮಾಧಾನದ ನಡುವೆಯೂ ಕನ್ನಡ ರಾಜ್ಯೋತ್ಸವ ಆಚರಣೆ ತುಂಬಾ ವಿಜೃಂಭಣೆ ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ