ವಿಜಯಪಥ ಸಮಗ್ರ ಸುದ್ದಿ
ಕೋಲಾರ: ಟೊಮೆಟೊ ಬೆಲೆ ಕುಸಿದಿದ್ದರಿಂದ, ಕೋಲಾರದ ರೈತರು ತಮ್ಮ ಉತ್ಪನ್ನಗಳನ್ನು ರಸ್ತೆಬದಿ ಎಸೆದು ಹೋಗುತ್ತಿದ್ದಾರೆ. 15 ಕೆಜಿ ಬಾಕ್ಸ್ ಟೊಮೆಟೊ ಕೇವಲ 30 ರೂ.ಗೆ ಮಾರಾಟವಾಗುತ್ತಿದೆ. ಇದರಿಂದ ಮಾರುಕಟ್ಟೆಗೆ ತರುವ ವಾಹನ ಬಾಡಿಗೆಯೂ ಸಿಗುತ್ತಿಲ್ಲ.
ಜತೆಗೆ ಫಸಲು ಕಟಾವು ಮಾಡುವವರಿಗೆ ಕೂಲಿಕೊಡಲು ಆಗುತ್ತಿಲ್ಲ. ಸಾವಿರಾರು ರೂ. ಖರ್ಚುಮಾಡಿ ಬೆಳೆದ ಫಲಸಲು ಬೆಲೆ ಕುಸಿತದಿಂದ ಕೈಯಿಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿಯಲ್ಲಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಇದಕ್ಕೆ ರಾಜ್ಯದಲ್ಲಿ ಕೊರೊನಾ ಮಹಾಮಾರಿಯಿಂದ ಲಾಕ್‌ಡೌನ್ ಇರುವುದು. ಜತೆಗೆ ವಿದೇಶಕ್ಕೆ ರಫ್ತಾಗುತ್ತಿದ್ದ ಟೊಮೆಟೊ ಇಲ್ಲಿ ಉಳಿಯುತ್ತಿರುವುದರಿಂದ ಈ ಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ತಮ್ಮ ಗೋಳು ತೋಡಿಕೊಳ್ಳುತ್ತಿದ್ದಾರೆ.
ಕೋಲಾರದಲ್ಲಿ ಕೆಂಪು ಹಣ್ಣು ಟೊಮೆಟೊ ಬೆಲೆ ಇತ್ತೀಚಿನ ದಿನಗಳಲ್ಲಿ ಕುಸಿತ ಕಾಣುತ್ತಿದ್ದು, ಬೆಳೆದ ಬೆಳೆಗಾರರಂತು ದಿಕ್ಕೇ ತೋಚದಂತೆ ಅಯೋಮಯ ಸ್ಥಿತಿಯಲ್ಲಿದ್ದಾರೆ.
ಸಾವಿರಾರು ರೂಪಾಯಿ ಬಂಡವಾಳ ಹಾಕಿ ಬೆಳೆ ಬೆಳೆದ ರೈತ ಬೆಲೆ ಇಲ್ಲದೆ ಕಂಗಾಲಾಗಿದ್ದಾನೆ . ಕೋಲಾರದ ಟೊಮೆಟೊ ಮಾರುಕಟ್ಟೆ ಏಷ್ಯಾದಲ್ಲಿಯೇ 2 ನೇ ಅತಿ ದೊಡ್ಡ ಮಾರುಕಟ್ಟೆ. ಜಿಲ್ಲೆಯ ಎಪಿಎಂಸಿ ಮಾರುಕಟ್ಟೆಗೆ ನಿತ್ಯ ಸಾವಿರಾರು ಕ್ವಿಂಟಾಲ್ ಟೊಮೆಟೊ ಬರುತ್ತೆ.
ನಮ್ಮ ರಾಜ್ಯದಿಂಲೇ ಅಲ್ಲದೆ ನೆರೆಯ ಆಂಧ್ರ, ತಮಿಳುನಾಡಿನಿಂದಲೂ ಟೊಮೆಟೊ ಆವಕವಿದೆ, ಆದರೆ ಕೆಲವು ದಿನದಿಂದ ಬೆಲೆ ಕುಸಿತ ಕಾಣುತ್ತಿದ್ದು ಈ ತ್ರೈಮಾಸಿಕದಲ್ಲಿ ಕೋಲಾರ ಎಪಿಎಮ್ ಸಿ ಯಿಂದ ಅತಿ ಹೆಚ್ಚು ಟೊಮೇಟೊ ವಿದೇಶಗಳೂ ಸೇರಿದಂತೆ ದೇಶದ ವಿವಿಧ ಕಡೆ ರಫ್ತಾಗುತ್ತಿತ್ತು, ಈಗ ರಫ್ತು ಪ್ರಮಾಣವು ಕಡಿಮೆಯಾಗಿರುವುದರಿಂದ ಬೆಲೆ ಕುಸಿದಿದೆ.
ರೈತರೂ ಸಹ ಈ ತ್ರೈಮಾಸಿಕದಲ್ಲಿ ಅತೀ ಹೆಚ್ಚು ಬಂಡವಾಳ ಹೂಡಿ ಬೆಳೆ ಬೆಳೆದ ಕಾರಣ ಮಾರುಕಟ್ಟೆಗೆ ಆವಕ ಸಹ ಹೆಚ್ಚಾಗಿದೆ. ಆದರೆ ಸೂಕ್ತ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಇದರಿಂದ ಬೇಸತ್ತು ಟ್ರ್ಯಾಕ್ಟರ್‌ನಲ್ಲಿ ತಂದು ರಸ್ತೆ ಬದಿ ಸುರಿದು ಹೋಗುತ್ತಿದ್ದಾರೆ.
ಹೀಗೆ ನೂರಾರು ಟನ್ ಟೊಮೆಟೊ ರಸ್ತೆಬದಿಯಲ್ಲಿ ಬಿದ್ದಿರುವ ದೃಶ್ಯ ಈಗ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ರೈತರ ಆರ್ಥಿಕ ಸ್ಥಿತಿ ಅಯೋಮಯವಾಗಿದೆ. ಆದ್ದರಿಂದ ಸರ್ಕಾರ ಟೊಮೆಟೊ ಬೆಳೆಗಾರ ರೈತರ ನೆರವಿಗೆ ಧಾವಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.
#Bengaluru: With #Tomato prices crashing, farmers in Kolar are forced to dump their produce by the roadside. A 15kg box of tomatoes is fetching only Rs 30 for the farmer.@krishnabgowda @hd_kumaraswamy @DKShivakumar @BYVijayendra @ShyamSPrasad @BLRrocKS @tinucherian pic.twitter.com/vBcbYyowHk
— Rakesh Prakash (@rakeshprakash1) May 14, 2021