ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯದ ಗ್ರಾಮೀಣ ಹಾಗೂ ನಗರ ಮತ್ತು ಪಟ್ಟಣ ಪ್ರದೇಶಗಳ ಕೊಳಗೇರಿಗಳಲ್ಲಿ ಕೋವಿಡ್ ಸೋಂಕಿತರನ್ನು ಹೋಮ್ ಐಸೋಲೇಷನ್‌ನಲ್ಲಿ ಇಡದಿರಲು ನಿರ್ಧರಿಸಿರುವ ಸರಕಾರ, ಅಂಥ ಪ್ರದೇಶಗಳ ಎಲ್ಲ ಸೋಂಕಿತರನ್ನೂ ಕೋವಿಡ್ ಕೇರ್ ಕೇಂದ್ರಗಳಿಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡುವ ಮಹತ್ವದ ನಿರ್ಧಾರ ಕೈಗೊಂಡಿದೆ.
ಬೆಂಗಳೂರಿನಲ್ಲಿ ಶನಿವಾರ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ 4 ಗಂಟೆ ಕಾಲ ನಡೆದ ರಾಜ್ಯ ಕೋವಿಡ್ ಕಾರ್ಯಪಡೆ ಸಭೆಯಲ್ಲಿ ಸಚಿವರು, ಅಧಿಕಾರಿಗಳೊಂದಿಗೆ COVID-19 ನಿರ್ವಹಣೆ ಬಗ್ಗೆ ಸುದೀರ್ಘ ಚರ್ಚಿಸಲಾಯಿತು.
ಸಭೆಯ ಪ್ರಮುಖ ನಿರ್ಣಯಗಳು ಹಾಗೂ ಚರ್ಚಿತ ಅಂಶಗಳ ಬಗ್ಗೆ ಡಿಸಿಎಂ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದು, ತಾಲೂಕು ಆಸ್ಪತ್ರೆಗಳನ್ನು ಶೇ.100ರಷ್ಟು Oxygenated Beds ಆಸ್ಪತ್ರೆಗಳಾಗಿ ಪರಿವರ್ತನೆ ಮಾಡುವುದು. ಜಿಲ್ಲಾಕೇಂದ್ರ ಆಸ್ಪತ್ರೆಗಳಲ್ಲಿ ಕನಿಷ್ಠ 100 ICU Beds ಅಳವಡಿಕೆ. 44 ವರ್ಷ ಮೇಲ್ಪಟ್ಟ ನಾಗರಿಕರಿಗೆ Covishield ಮೊದಲ ಡೋಸ್ ಕೊಡಲು ಪ್ರಮುಖ ಆದ್ಯತೆ ನೀಡಲಾಗುವುದು ಎಂದರು.
4 ಬಾರಿಯಲ್ಲಿ 2 ಕೋಟಿ ಲಸಿಕೆ ತರಿಸಲು ಕ್ರಮ
Covaxin ಎರಡನೇ ಡೋಸ್ ಮಾತ್ರ ಪೂರೈಸಲು ಆದ್ಯತೆ. ಒಂದು ಬಾರಿ 50 ಲಕ್ಷದಂತೆ 4 ಬಾರಿಯಲ್ಲಿ 2 ಕೋಟಿ ಲಸಿಕೆ ತರಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅಥವಾ ಆಸ್ಪತ್ರೆಗಳ ಬದಲಾಗಿ ಶಾಲಾ- ಕಾಲೇಜುಗಳಲ್ಲಿ ಲಸಿಕೆ ನೀಡಲು ಕ್ರಮವಹಿಸಲಾಗಿದೆ ಎಂದರು.
ಚಿತಾಗಾರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ವಿಮೆ ನೀಡಲು ನಿರ್ಧಾರ. ಪ್ರತೀ ಬೆಡ್ ಗೆ 10 ರೂ. ನಂತೆ ಬಿಲ್ ನೀಡಿ ಕೋವಿಡ್ ಮೆಡಿಕಲ್ ತ್ಯಾಜ್ಯ ವಿಲೇವಾರಿಗೆ ಬಳಕೆ. ಗ್ರಾಮೀಣ ಭಾಗಗಳಲ್ಲಿ ಮನೆಯಲ್ಲೇ ಐಸೋಲೇಷನ್ ಮಾಡಿ ಚಿಕಿತ್ಸೆ ಮಾಡುವ ಬದಲಾಗಿ PHC ವ್ಯಾಪ್ತಿಯಲ್ಲೇ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಬ್ಲಾಕ್ ಫಂಗಸ್ ತಡೆಗೆ 20,000 ವಯಲ್ಸ್ ಗಳ ಬೇಡಿಕೆ ಸಲ್ಲಿಕೆ
ರೋಗಿಗಳಲ್ಲಿ Mucormycosis (ಬ್ಲಾಕ್ ಫಂಗಸ್) ತಡೆಗೆ ಬಳಕೆಗಾಗಿ ಕೇಂದ್ರ ಸರ್ಕಾರಕ್ಕೆ 20,000 ವಯಲ್ಸ್ ಗಳ ಬೇಡಿಕೆ ಸಲ್ಲಿಸಲಾಗಿದೆ. ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ Oxygen Generators ಹಾಗೂ Oxygen Concentrators ಅಳವಡಿಕೆಗೆ ನಿರ್ದೇಶನ ನೀಡಲಾಗಿದೆ ಎಂದರು.
ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಹಾಸಿಗೆ ಸಂಖ್ಯೆ ಹೆಚ್ಚಳದ ಜತೆಗೆ ಮೂಲಭೂತ ಸೌಕರ್ಯ, ಸಿಬ್ಬಂದಿಗಳ ಶಾಶ್ವತ ನೇಮಕಕ್ಕೆ ಕ್ರಮ. ರಾಜ್ಯದಲ್ಲಿ ಪ್ರಸ್ತುತ ಒಟ್ಟು 60,000 Oxygenated Beds ಇವೆ. ಇವುಗಳ ಹೆಚ್ಚಳ ಹಾಗೂ ಸಮರ್ಪಕ ನಿರ್ವಹಣೆ ಮಾಡಲು ಸರ್ಕಾರ ಮುಂದಾಗಿದೆ ಎಂದರು.
2 ಲಕ್ಷ ಪಲ್ಸ್ ಆಕ್ಸಿಮೀಟರ್ ಖರೀದಿಗೆ ನಿರ್ಧಾರ
Physical Triage, Tele Traige ಮಾಹಿತಿ ಸಂಗ್ರಹಣೆ, ಕ್ರೋಡೀಕರಣ ಹಾಗೂ ನಿರ್ವಹಣೆಗೆ ನಿರ್ದೇಶನ. 2 ಲಕ್ಷ ಪಲ್ಸ್ ಆಕ್ಸಿಮೀಟರ್ ಖರೀದಿಗೆ ನಿರ್ಧಾರ. 1 ಕೋಟಿ RT-PCR ಕಿಟ್ ಖರೀದಿಗೆ ಅನುಮತಿ ನೀಡಲಾಗಿದೆ ಎಂದರು.
Remdesivir – 5 ಲಕ್ಷ ಇಂಜೆಕ್ಷನ್ ಖರೀದಿಗೆ ಜಾಗತಿಕ ಟೆಂಡರ್. ಇದಕ್ಕೆ 75 ಕೋಟಿ ರೂ. ಮೀಸಲು. Vaccination – ಲಸಿಕೆ ಖರೀದಿಸಲು ಜಾಗತಿಕ ಟೆಂಡರ್ ಕರೆಯಲಾಗಿದೆ. ಇದಕ್ಕಾಗಿ 843 ಕೋಟಿ ರೂ. ಅನುದಾನದ ಅವಶ್ಯಕತೆ ಇದ್ದು ಇದಕ್ಕೆ ಕಾರ್ಯಪಡೆ ಒಪ್ಪಿಗೆ ನೀಡಿದೆ ಎMದ ತಿಳಿಸಿದರು.
ಮುಂದಿನ 90 ದಿನಗಳಿಗೆ ಅಗತ್ಯ ಇರುವ ಔಷಧ ಮತ್ತು ಪರಿಕರಗಳನ್ನು ಹಂತ ಹಂತವಾಗಿ 260 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಒಪ್ಪಿಗೆ. ವೈರಸ್ ನ Genetics ಬದಲಾವಣೆ ಬಗ್ಗೆ ಅಧ್ಯಯನ ನಡೆಸುವ Genome Lab ಗಳನ್ನು ರಾಜ್ಯದ 6 ಕಡೆ ಸ್ಥಾಪಿಸಲು ತೀರ್ಮಾನಿಸಲಾಯಿತು ಎಂದರು.
ಆರು ಕಡೆ ಆಮ್ಲಜನಕ ಬಾಟಲಿಂಗ್ ಪ್ಲ್ಯಾಂಟ್ಸ್ ವ್ಯವಸ್ಥೆ
ಆರು ಕಡೆ ಆಮ್ಲಜನಕ ಬಾಟಲಿಂಗ್ ಪ್ಲ್ಯಾಂಟ್ಸ್ ವ್ಯವಸ್ಥೆ. ಆಮ್ಲಜನಕ ಬಳಕೆ ನಿಯಂತ್ರಿಸುವ ದೃಷ್ಟಿಯಿಂದ DRDO ಅಭಿವೃದ್ಧಿಪಡಿಸಿರುವ 1,000 ಯಂತ್ರಗಳನ್ನು ಖರೀದಿಸಲಾಗುವುದು. 100 ಮ್ಯಾನುಯೆಲ್ ಮತ್ತು 900 ಆಟೋಮೆಟಿಕ್ ಯಂತ್ರ ಖರೀದಿಸಲಾಗುವುದು. ಕ್ರಮವಾಗಿ 6,000 ಮತ್ತು 10,000 ಬೆಲೆಯುಳ್ಳದ್ದಾಗಿದೆ ಎಂದು ತಿಳಿಸಿದರು.
ಬಿಬಿಎಂಪಿಯಡಿ ನಿರ್ವಹಣೆ ಆಗುತ್ತಿರುವ ಆರೋಗ್ಯ ಸೇವೆಯನ್ನು DHFWKA ಅಡಿ ತೆಗೆದುಕೊಂಡು ನಗರದಲ್ಲಿ ಆರೋಗ್ಯ ಸೇವೆಯನ್ನು ಬಲಪಡಿಸಲು ನಿರ್ಧರಿಸಲಾಗಿದೆ ಎಂದು ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಮಗ್ರವಾದ ಮಾಹಿತಿ ನೀಡಿದರು.