Vijayapatha – ವಿಜಯಪಥ
Friday, November 1, 2024
Breaking NewsNEWSರಾಜಕೀಯಲೇಖನಗಳು

ಕುಕೃತ್ಯಗಳ ಮುಖೇನ ಜನರ ಜೀವಗಳಿಗೆ ಯಮನಾದ ಕಾಂಗ್ರೆಸ್ ಪಕ್ಷ “ಮನೆಗೆ ಮಗನೂ ಆಗಲಿಲ್ಲ, ಸ್ಮಶಾನಕ್ಕೆ ಹೆಣವೂ ಆಗಲಿಲ್ಲ” : ಸಿಟಿ ರವಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ದೇಶದಲ್ಲಿ ಹೆಚ್ಚಾಗುತ್ತಿರುವ ಕೋವಿಡ್‌ನಿಂದ ಜನ ಸಂಕಷ್ಟಕ್ಕೆ ಸಿಲುಕಿರುವ ಈ ಹೊತ್ತಿನಲ್ಲಿ ಕೊರೊನಾ ಸೋಂಕು ನಿವಾರಣೆ ವಿಚಾರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ದೇಶದ ಹೆಸರು ಕೆಡಿಸಲು ಕಾಂಗ್ರೆಸ್‌ ಟೂಲ್‌ಕಿಟ್‌ ಮೂಲಕ ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಈ ಸಂಬಂಧ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ಪಕ್ಷ ಮನೆಗೆ ಮಗನೂ ಆಗಲಿಲ್ಲ, ಸ್ಮಶಾನಕ್ಕೆ ಹೆಣವೂ ಆಗಲಿಲ್ಲ ಎಂದು ಆಕ್ರೋಶದಿಂದ ಹೇಳಿದ್ದಾರೆ.

ಸಿ.ಟಿ.ರವಿ ಅವರ ಫೇಸ್‌ಬುಕ್‌ ಪೇಜ್‌ನಲ್ಲಿ ಬರೆದುಕೊಂಡಿರುವುದು
“ಮನೆಗೆ ಮಗನೂ ಆಗಲಿಲ್ಲ ಸ್ಮಶಾನಕ್ಕೆ ಹೆಣವೂ ಆಗಲಿಲ್ಲ” ಎನ್ನುವಂತಹ ಒಂದು ರಾಜಕೀಯ ಪಕ್ಷ ನಮ್ಮ ದೇಶದಲ್ಲಿ ಇದ್ದರೆ ಅದು Indian National Congress . ಜನ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಮೂಲೆಗುಂಪು ಮಾಡಿದ್ದರೂ ಅವರಿಗಿನ್ನು ಬುದ್ಧಿ ಬಂದಿಲ್ಲ. ಕಾಂಗ್ರೆಸ್ ಭಾರತ ದೇಶಕ್ಕೆ, ದೇಶದ ಜನರಿಗೆ ದೇಶ ವಿದೇಶದಲ್ಲಿ ಅಪಪ್ರಚಾರ ಮಾಡಲು ತಯಾರಿಸಿದ ಟೂಲ್ ಕಿಟ್ ಇಲ್ಲಿದೆ ನೋಡಿ. ತನ್ನ ಸ್ವ ಸಾಮರ್ಥ್ಯದಿಂದ ಏನನ್ನೂ ಮಾಡಲಾಗದ ಈ ಪಕ್ಷ ದೇಶ ವಿದೇಶಗಳಲ್ಲಿ ಹೆಚ್ಚುತ್ತಿರುವ ಭಾರತದ ಲೋಕಪ್ರಿಯತೆ ಹಾಗೂ ಶಕ್ತಿಯನ್ನು ಕುಂದಿಸುವ ನಿಟ್ಟಿನಲ್ಲಿ ಮತ್ತು ನರೇಂದ್ರ ಮೋದಿ ಹಾಗೂ ಬಿಜೆಪಿಯ ಜನಪ್ರಿಯತೆಗೆ ಕುಂದು ತರಲು ಹೇಗೆ ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂಬುದನ್ನು ನಾವೆಲ್ಲರೂ ಗಮನಿಸಬೇಕು.

ಕೊರೊನಾ ಸಂಕಷ್ಟದ ಸಮಯದಲ್ಲಿ ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಮೋದಿಜಿಯವರ ನೇತೃತ್ವದ ಸರಕಾರದ ವಿರುದ್ಧ ಜನರಲ್ಲಿ ಅವಿಶ್ವಾಸ ಮೂಡಿಸಿ, ದೇಶದಾದ್ಯಂತ ದಂಗೆ ಎಬ್ಬಿಸುವ ಉದ್ದೇಶದಿಂದ ಮಾಡಿದ ಈ ಟೂಲ್ ಕಿಟ್ ದೇಶದ ಅಮಾಯಕ ಜನರ ಪ್ರಾಣದ ಜೋತೆ ಚೆಲ್ಲಾಟ ಆಡಿದೆ. ಈ ಕೋವಿಡ್ ಸಂದರ್ಭದಲ್ಲಿ ಜನರ ಪ್ರಾಣ ರಕ್ಷಣೆ ಮಾಡುವಲ್ಲಿ ಸರ್ಕಾರದ ಜೊತೆ ಇರಬೇಕಾದ ವಿರೋಧ ಪಕ್ಷ, ತನ್ನ ಕುಕೃತ್ಯಗಳ ಮುಖೇನ ಜನರ ಜೀವಗಳಿಗೆ ಯಮನಾಗಿದ್ದು ದೌರ್ಭಾಗ್ಯವೇ ಹೊರತು ಬೇರೆ ಏನಲ್ಲ.

ಲಸಿಕೆ ನಾವೇ ಕೊಡುತ್ತೇವೆ ಎಂಬ ಕಾಂಗ್ರೆಸ್ ರಾಜ್ಯಾಧ್ಯಕ್ಷನ ಹೇಳಿಕೆ, ಅತ್ತೆಯ ಹಣವನ್ನು ಅಳಿಯ ದಾನ ಮಾಡಿದ ಅನ್ನುವ ಹಾಗೆ ಸರಕಾರದ ನೂರು ಕೋಟಿ ಹಣವನ್ನು ಸರಕಾರಕ್ಕೆ ಕೊಡುತ್ತೇವೆ ಎಂಬ ಸಿದ್ದರಾಮಯ್ಯ ಅವರ ಹಗಲು ನಾಟಕ, ಬೆಡ್ ಗಳನ್ನು ಬ್ಲಾಕ್ ಮಾಡಿ ತಮ್ಮ ಕಾಲು ಹಿಡಿದವರಿಗೆ ನೀಡುವ ಯೋಜನೆಗಳು, ದೆಹಲಿಯಲ್ಲಿ ಶ್ರೀನಿವಾಸನೆಂಬ ಯೂತ್ ಕಾಂಗ್ರೆಸ್ ಅಧ್ಯಕ್ಷ ಆಕ್ಸಿಜನ್ ಸಿಲಿಂಡರ್ ಹಿಡಿದು ಸುತ್ತಾಡಿದ್ದು, ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷನ ನೇತ್ರತ್ವದಲ್ಲಿ ಸ್ಟಿರಾಯ್ದ್ ಮಾತ್ರೆಗಳನ್ನು ಕೊರೊನಾ ಕಿಟ್ ಎಂದು ಹಂಚಿದ್ದು, ವಿಧಾನ ಸೌಧದ ಮುಂದೆ ನಲಪಾಡ್‌ ಎಂಬ ಯೂತ್ ಕಾಂಗ್ರೆಸ್ ನಾಯಕನೊಬ್ಬ ಆಂಬ್ಯುಲೆನ್ಸ್ ಸ್ಟಂಟ್ ಮಾಡಿದ್ದು ಇವೆಲ್ಲವೂ ಈ ಟೂಲ್ ಕಿಟ್ ಎಂಬ ಮಹಾ ನಾಟಕದ ಭಾಗವೇ ಹೊರತಾಗಿ ಬೇರೆ ಏನೂ ಅಲ್ಲ.

ಮಧ್ಯಪ್ರಾಚ್ಯದಲ್ಲೊಂದು ಇಸ್ರೇಲ್ ಎನ್ನುವ ಪುಟ್ಟ ರಾಷ್ಟ್ರವಿದೆ, ಆ ರಾಷ್ಟ್ರದ ವಿರೋಧ ಪಕ್ಷ ತನ್ನ ರಾಷ್ಟ್ರಕ್ಕಾಗಿ, ತನ್ನ ರಾಷ್ಟ್ರದ ಮಾನ, ಸಮ್ಮಾನದ ರಕ್ಷಣೆಗಾಗಿ ಸರಕಾರದ ಜೊತೆ ನಿಂತು ಕೆಲಸ ಮಾಡುವುದನ್ನು ನೋಡಿದಾಗ ಈ ಮೇಲೆ ಹೇಳಿದ ಮಾತು ನಿಜ ಎನ್ನಿಸುತ್ತದೆ.

ಕಾಂಗ್ರೆಸ್ ಪಕ್ಷ “ಮನೆಗೆ ಮಗನೂ ಆಗಲಿಲ್ಲ, ಸ್ಮಶಾನಕ್ಕೆ ಹೆಣವೂ ಆಗಲಿಲ್ಲ” ಎಂದು ಬರೆದುಕೊಂಡಿದ್ದಾರೆ.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ