NEWSಆರೋಗ್ಯನಮ್ಮರಾಜ್ಯಲೇಖನಗಳು

ಸ್ತನಪಾನದಿಂದ ಕೊರೊನಾ ಬರುವುದೇ ?

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸ್ತ್ರೀ ಕಾಳಜಿ
ಬೆಂಗಳೂರು: ಮಾರಕ ಸೋಂಕು ಕೊರೊನಾ ಸೋಂಕು ಈಗಾಗಲೇ ವಿಶ್ವದೆಲ್ಲೆಡೆ ಲಕ್ಷಾಂತರ ಜನರ ಪ್ರಾಣ ಬಲಿ ತೆಗೆದುಕೊಂಡಿದೆ. ಕೋಟ್ಯಂತರ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಭಾರತದಲ್ಲಿ ಕೂಡ ಸೋಂಕಿತರ ಸಂಖ್ಯೆಯು ಹೆಚ್ಚಾಗುತ್ತಲೇ ಇದೆ.

ನಿಖರ ಔಷಧ ಇಲ್ಲದೆ ಇರುವಂತಹ ಸೋಂಕು ಇದಾಗಿರುವ ಕಾರಣದಿಂದಾಗಿ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅದು ಇಂದಿನ ಅಗತ್ಯವೂ ಆಗಿದೆ.

ಇನ್ನು ಕೊರೊನಾ ಗರ್ಭಿಣಿಯರಿಗೆ ತಗುಲಿರುವ ಬಗ್ಗೆ ಹೆಚ್ಚಿನ ಅಂಕಿಅಂಶಗಳು ಇದುವರೆಗೂ ಲಭ್ಯವಾಗಿಲ್ಲ. ಕಾಯಿಲೆ ತಡೆ ಹಾಗೂ ನಿಯಂತ್ರಣ ಕೇಂದ್ರ(ಸಿಡಿಸಿ) ಹೇಳುವ ಪ್ರಕಾರ, ಗರ್ಭಿಣಿಯರು ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿರುವಂತಹ ಯಾವುದೇ ರೀತಿಯ ವೈಜ್ಞಾನಿಕ ವರದಿಗಳು ಇದುವರೆಗೆ ಲಭ್ಯವಾಗಿಲ್ಲ. ಆದರೆ, ಗರ್ಭಿಣಿಯರಲ್ಲಿ ಪ್ರತಿರಕ್ಷಕ ಮತ್ತು ಶಾರೀರಿಕ ಬದಲಾವಣೆಗಳು ಕಂಡುಬರುವ ಹಿನ್ನೆಲೆಯಲ್ಲಿ ಅವರು ಕೊವಿಡ್-19ನಂತಹ ಶ್ವಾಸಕೋಶದ ವೈರಲ್ ನಂತಹ ಸೋಂಕಿಗೆ ತುತ್ತಾಗುವಂತಹ ಸಾಧ್ಯತೆಯು ಹೆಚ್ಚಾಗಿರುತ್ತದೆ.

ಸಿಡಿಸಿ ಹೇಳುವ ಪ್ರಕಾರ ಕೊರೊನಾ ಸೋಂಕಿತ ವ್ಯಕ್ತಿ ಗರ್ಭಿಣಿಯರ ತುಂಬಾ ಹತ್ತಿರದಲ್ಲಿದ್ದು ಹೆಚ್ಚಾಗಿ ಉಸಿರಾಡಿದರೆ ಇದು ಹರಡುವ ಸಾಧ್ಯತೆ ಹೆಚ್ಚಿದೆ. ಆದರೆ ಇದರಿಂದ ಗರ್ಭದಲ್ಲಿರುವ ಮಗುವಿಗೆ ಸೋಂಕು ತಗುಲಿರುವ ಸಾಧ್ಯತೆ ಇದುವರೆಗೂ ಕಂಡುಬಂದಿಲ್ಲ ಮತ್ತು ಶಿಶುವಿನಲ್ಲಿ ಕೊವಿಡ್-19 ಪಾಸಿಟಿವ್ ಕೂಡ ಕಂಡುಬಂದಿಲ್ಲ.

ಕೊವಿಡ್ -19 ಸೋಂಕು ಸ್ತನಪಾನದಿಂದ ಬರುವುದೇ ? ಕೊರೊನಾ ಸೋಂಕು ಇರುವ ಮಹಿಳೆಯರು ಮಗುವಿಗೆ ಹಾಲುಣಿಸುವುದರಿಂದ ಸೋಂಕು ತಗುಲುತ್ತದೆ ಎಂಬ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ. ಈ ಬಗ್ಗೆ ಯಾವುದೇ ದಾಖಲೆಗಳು ಇಲ್ಲ ಎಂದು ಸಿಡಿಸಿ ತಿಳಿಸಿದೆ.

    • ಗರ್ಭಿಣಿಯರು ಮುನ್ನೆಚ್ಚರಿಕೆ ಕ್ರಮ ಹೇಗೆ ?
    • ಕೆಮ್ಮು, ಶೀನು ಅಥವಾ ಶೌಚಾಲಯ ಬಳಸಿದ ಬಳಿಕ 20 ಸೆಕೆಂಡ್‌ ಸಾಬೂನು ಹಾಕಿ ಕೈಗಳನ್ನು ತೊಳೆಯಿರಿ.
    • ಕೆಮ್ಮುವವರು ಅಥವಾ ಶೀನುವವರಿಂದ ನೀವು ಸಾಮಾನ್ಯವಾಗಿ ಮೂರು ಅಡಿ ದೂರ ಅಂತರ ಕಾಯ್ದುಕೊಳ್ಳಿ.
    • ಅಸ್ವಸ್ಥತೆ ಕಾಣಿಸಿಕೊಂಡರೆ ಆಗ ಮನೆಯಲ್ಲಿ ಕುಳಿತುಕೊಳ್ಳಿ.
    • ಶೀನುವಾಗ ಮತ್ತು ಕೆಮ್ಮುವಾಗ ಮೊಣಕೈ ಅಡ್ಡ ಹಿಡಿದುಕೊಳ್ಳಿ ಮತ್ತು ಇದನ್ನು ಬಳಸುವ ಮೊದಲು ನೀವು ಸರಿಯಾಗಿ ಕೈ ತೊಳೆಯಿರಿ.
    • ಇದರಿಂದ ಕೊರೊನಾ ಸೋಂಕು ತಗಲುವುದನ್ನು ನಿಯಂತ್ರಿಸಲು ಸಾಧ್ಯವಿದೆ.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ