ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ಪೊಲೀಸರು ಬಿಗಿ ಕಾನೂನಿಗೆ ಮುಂದಾಗಿದ್ದಾರೆ. ಅನವಶ್ಯಕ ಓಡಾಟ ನಡೆಸಿದರೆ ವಾಹನ ಸೀಜ್ ಮಾಡುವ ಜತೆಗೆ ಸವಾರರನ್ನು ಬಂಧಿಸಿ ಕೇಸ್ ಹಾಕಲಾಗುತ್ತಿದೆ.
ನಿನ್ನೆ ರಾಜ್ಯದಲ್ಲಿ 2000 ವಾಹನ ಸೀಜ್ ಮಾಡಿ 100ಕ್ಕೂ ಹೆಚ್ಚು ಮಂದಿ ಬಂಧನಕ್ಕೆ ಒಳಗಾಗಿದ್ದಾರೆ. ಇಂದು ಮುಂಜಾನೆಯಿಂದಲೇ ರಸ್ತೆಗಿಳಿದಿರುವ ಪೊಲೀಸರು ಈಗಾಗಲೇ ನಾರಾರು ವಾಹನಗಳನ್ನು ಸೀಜ್ ಮಾಡಿದ್ದು, ಹಲವರನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ಕೊರೊನಾ ಪಾಸಿಟಿವ್ ಬಂದವರು ಹೊರಗೆ ಓಡಾಡಿದರೆ ಪೊಲೀಸರು ಅವರ ಮೇಲೆ ಕೇಸು ಹಾಕಲಾಗುತ್ತಿದೆ. ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ನಾಕಾಬಂಧಿ ನಿರ್ಮಿಸಿದ್ದು ಅನಾವಶ್ಯವಾಗಿ ಹೊರಗೆ ಬಂದವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.