ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ನಿರೀಕ್ಷೆಯಂತೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೋವಿಡ್ ನಿಯಂತ್ರಣಕ್ಕೆ ಹೇರಲಾಗಿದ್ದ ಲಾಕ್‌ಡೌನ್‌ಅನ್ನು ಜೂನ್ 14ರವರೆಗೆ ಮುಂದುವರಿಸಿದ್ದಾರೆ.
ಇಂದು ಸಂಜೆ ವಿಧಾನಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತ್ತೆ 500 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಿಸಿದರು. ಜತೆಗೆ ಕೆಲವು ಲಾಕ್‌ಡೌನ್ ನಿಯಮಗಳನ್ನು ಸಡಿಲಿ, ಲಾಕ್‌ಡೌನ್ ವಿಸ್ತರಣೆಯ ಅನಿವಾರ್ಯತೆಯನ್ನು ತಿಳಿಸಿದರು.
ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕೈಮಗ್ಗ ಕಾರ್ಮಿಕರಿಗೆ 3000 ರೂ. ಚಲನಚಿತ್ರ ಕಲಾವಿದರಿಗೆ 3000 ರೂ. ಮೀನುಗಾರರಿಗೆ 3000 ರೂ. ಮುಜುರಾಯಿ ದೇವಸ್ಥಾನ ಅರ್ಚಕರು ಅಡುಗೆಯವರು ಸಿ ಗ್ರೂಪ್ ನೌಕರರಿಗೆ 3000 ರೂ.
ಆಶಾ ಕಾರ್ಯಕರ್ತರಿಗೆ 3000 ರೂ. ಅಂಗನವಾಡಿ ಕಾರ್ಯಕರ್ತರು ಸಹಾಯಕರಿಗೆ 2000 ರೂ. ಅನುದಾನರಹಿತ ಶಾಲಾ ಶಿಕ್ಷಕರಿಗೆ 5000 ರೂ. ಇದಲ್ಲದೆ ಎಂಎಸ್ ಎಂಇ ಕೈಗಾರಿಕೆಗಳ ವಿದ್ಯುತ್ ಶುಲ್ಕ ವಿನಾಯಿತಿ, ಇತರ ಕೈಗಾರಿಕೆಗಳು ಮೇ, ಜೂನ್ ಶುಲ್ಕ ವಿನಾಯಿತಿ, ರಫ್ತು ಓರಿಯಂಟ್ ಕೈಗಾರಿಕೆಗೆ ಅನುಮತಿ. ಹೋಟೆಲ್ಗಳು ಇಡೀ ದಿನ ತೆರೆದಿರಲಿದ್ದು, ಪಾರ್ಸಲ್ಗೆ ಮಾತ್ರ ಅನುಮತಿ ನೀಡಲಾಗಿದೆ” ಎಂದು ತಿಳಿಸಿದರು.
ರಾಜ್ಯ ಸರ್ಕಾರ ಇಂದು 500 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಈ ಘೋಷಣೆಯಲ್ಲಿ ಅನುದಾನ ರಹಿತ ಶಾಲಾ ಶಿಕ್ಷಕರಿಗೆ 5,000ರೂ. ಪರಿಹಾರ ಘೋಷಣೆ ಮಾಡಿದೆ. ಆದರೆ, ಇದರ ವಿರುದ್ಧ ಕಿಡಿಕಾರಿರುವ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, “ಕೇವಲ ಐದು ಸಾವಿರ ಘೋಷಣೆ ತುಂಬ ನಿರಾಸೆ ತಂದಿದೆ. ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಅನುದಾನವಿದೆ. ಶಿಕ್ಷಕರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ಸಹಾಯ ಮಾಡಬೇಕು. ಕನಿಷ್ಠ ಹತ್ತು ಸಾವಿರ ಆದರೂ ಪರಿಹಾರ ಘೋಷಣೆ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.