NEWSಸಂಸ್ಕೃತಿ

25 ವರ್ಷಗಳ ತಿಕ್ಕಾಟಕ್ಕೆ ಅಂತ್ಯ: ಮುಡಿ ತೆಗೆಯುವುದರ ಹಕ್ಕು, ಅದರ ಆದಾಯ ಶ್ರೀನಂಜುಡೇಶ್ವರ ಸ್ವಾಮಿ ದೇವಸ್ಥಾನಕ್ಕೆ ಸೇರಿದ್ದು- ತಿ.ನರಸೀಪುರ ನ್ಯಾಯಾಲಯದ ಮಹತ್ವದ ತೀರ್ಪು

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ನಂಜನಗೂಡು: ಇತಿಹಾಸಪ್ರಸಿದ್ದ ಶ್ರೀನಂಜುಡೇಶ್ವರ ಸ್ವಾಮಿ ( ಶ್ರೀಕಂಠೇಶ್ವರ) ದೇವಾಲಯದ ಕಪಿಲಾ ಸ್ನಾನಘಟ್ಟದಲ್ಲಿ ಮುಡಿ ತೆಗೆಯುವುದರ ಹಕ್ಕು ಹಾಗೂ ಅದರ ಆದಾಯ ಶ್ರೀಸ್ವಾಮಿಯ ದೇವಸ್ಥಾನದ್ದೇ ಎಂದು ತಿ.ನರಸೀಪುರದ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ಶ್ರೀ ನಂಜುಡೇಶ್ವರ ಸ್ವಾಮಿಗೆ ಹರಕೆ ಮಾಡಿಕೊಂಡವರು ಅರ್ಪಿಸುವ ಮುಡಿಯ ಆದಾಯ, ಅರ್ಪಿಸಿದ ಕೂದಲು ಯಾರಿಗೆ ಸೇರಬೇಕು ಎಂಬ ತಗಾದೆ ದೇವಾಲಯ ಹಾಗೂ ಮುಡಿ ತೆಗೆಯುತ್ತಿದ್ದ ನಯನಜ ಕ್ಷತ್ರೀಯರ ಸಂಘದ ನಡುವೆ ಆರಂಭವಾಗಿ ಸುಮಾರು 25 ವರ್ಷಗಳ ನಂತರ ಈ ತೀರ್ಪು ದೇವಾಲಯದ ಪರವಾಗಿ ಬಂದಿದೆ.

ಇದೇ ತಿಂಗಳು 3ರಂದು ತಿ.ನರಸೀಪುರ ನ್ಯಾಯಾಲಯದ ನ್ಯಾಯಾಧೀಶರಾದ ರವೀಂದ್ರ ಅವರಿದ್ದ ನ್ಯಾಯಪೀಠ ಈವರೆಗೆ ನಡೆದ ವಾದ ವಿವಾದಗಳ ಪರಾಮರ್ಶೆ ನಡೆಸಿ ಈ ಹಕ್ಕು ಸಂಘದ್ದಲ್ಲ, ಶ್ರೀ ನಂಜುಡೇಶ್ವರ ಸ್ವಾಮಿನದೇವಸ್ಥಾನದ ಹಕ್ಕು. ಅವರು ಯಾರಿಂದಲಾದರೂ ಮುಡಿ ತೆಗೆಸಬಹುದು ಎಂದು ತೀರ್ಪು ನೀಡಿದೆ.

ಸ್ಥಳೀಯ ನಯನಜ ಕ್ಷತ್ರೀಯ ಸಂಘ ಈ ಹಕ್ಕು ತಮ್ಮ ಸಂಘದ್ದು ಮಾತ್ರ ಎಂದು ಪ್ರತಿಪಾದಿಸುತ್ತ ಬಂದಿದ್ದು ಇದೇ ವಿಷಯ ನ್ಯಾಯಾಲಯದ ಮೆಟ್ಟೀಲೇರಿ ಸುಮಾರು 25 ವರ್ಷಗಳಾಗಿತ್ತು. ನಂಜನಗೂಡು ನ್ಯಾಯಾಲಯದಲ್ಲಿ ಆರಂಭಗೊಂಡ ಈ ವ್ಯಾಜ್ಯ ನಂತರ ಇಲ್ಲಿನ ನ್ಯಾಯಾಧೀಶರು ಶ್ರೀ ನಂಜುಡೇಶ್ವರ ಸ್ವಾಮಿ ದೇವಾಲಯಕ್ಕೆ ಹೋದಾಗ ಅಲ್ಲಿ ಅವರನ್ನು ಗೌರವಿಸಿದ್ದನ್ನೇ ಎದುರಿನ ವಕೀಲರು ಪ್ರಶ್ನಿಸಿದ ಪರಿಣಾಮ ಈ ಪ್ರಕರಣ ನಂಜನಗೂಡು ನ್ಯಾಯಾಲಯದಿಂದ ತಿ.ನರಸೀಪುರ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು.

ಈ ತೀರ್ಪಿನಿಂದಾಗಿ ಈಗ ಶ್ರೀ ನಂಜುಡೇಶ್ವರ ಸ್ವಾಮಿ ದೇವಾಲಯದವರು ಯಾರಿಂದಲಾದರೂ ಮುಡಿ ತೆಗೆಸಬಹುದು ಹಾಗೂ ಅದರ ಆದಾಯ ದೇವಾಲಯಕ್ಕೆ ಸೇರುವುದರಿಂದ ದೇವಾಲಯದ ಆದಾಯ ಮತ್ತಷ್ಟು ಹೆಚ್ಚಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ವಾರ್ಷಿಕ ಬಾಣ ಬಿರುಸಿನ ಪ್ರದರ್ಶನ ಇರಲ್ವ  ?
ಶ್ರೀ ನಂಜುಡೇಶ್ವರ ಸ್ವಾಮಿಗೆ ಹರಕೆ ಹೊತ್ತವರ ಮುಡಿ ತೆಗೆದ ಹಣದಲ್ಲಿ ಮುಡಿಕಟ್ಟೆ ಸಂಘದವರು ಒಂದಿಷ್ಟು ಹಣವನ್ನು ಶೇಖರಿಸಿ ಪ್ರತಿ ಕಾರ್ತಿಕ ಮಾಸದ ಕೊನೇ ಸೋಮವಾರ ನಂಜನಗೂಡಿನಲ್ಲಿ ಶ್ರೀ ಸ್ವಾಮಿ ಉತ್ಸವ ಏರ್ಪಡಿಸಿ ಸಂಜೆ ಲಕ್ಷಾಂತರ ರೂ. ಖರ್ಚು ಮಾಡಿ ಬಾಣ ಬಿರುಸಿನ ಆಕರ್ಷಕ ಪ್ರದರ್ಶನ ಏರ್ಪಡಿಸುತ್ತಿದ್ದರು.

ಈಗ ನ್ಯಾಯಾಲಯದ ತೀರ್ಪಿನಿಂದಾಗಿ ಆ ಹಕ್ಕು ಸಂಘದ ಕೈ ತಪ್ಪುವುದರಿಂದ ಬಾಣ ಬಿರುಸಿನ ವಿಹಂಗಮ ಪ್ರದರ್ಶನ ವೀಕ್ಷಣೆಯಿಂದ ನಂಜನಗೂಡಿಗರು ವಂಚಿತರಾಗುವರೇ ಎಂಬುದು ಈಗ ಸದ್ಯಕ್ಕಿರುವ ಪ್ರಶ್ನೆಯಾಗಿದೆ.

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...