NEWSಕೃಷಿನಮ್ಮರಾಜ್ಯ

ಮುಸುಕಿನ ಜೋಳಕ್ಕೆ ಸೈನಿಕ ಹುಳು ಕಾಟ- ಸಂಕಷ್ಟದಲ್ಲಿ ರೈತರು

ವಿಜಯಪಥ ಸಮಗ್ರ ಸುದ್ದಿ

ಪಿರಿಯಾಪಟ್ಟಣ: ತಾಲೂಕಿನಾದ್ಯಂತ ಮುಂಗಾರಿನಲ್ಲಿ ಬಿತ್ತನೆಗೊಂಡಿರುವ ಮುಸುಕಿನ ಜೋಳದ ಬೆಳೆಯನ್ನು ಕೀಟಬಾಧೆ (ಸೈನಿಕ ಹುಳು) ಕಾಡುತ್ತಿದ್ದು, ಉತ್ತಮ ಫಸಲು ಹಾಗೂ ಇಳುವರಿ ನಿರೀಕ್ಷೆಯಲ್ಲಿದ್ದ ರೈತ ದಿಕ್ಕು ತೋಚದೆ ಕಂಗಾಲಾಗಿದ್ದಾನೆ.

ಕಳೆದ ಮೇ ತಿಂಗಳಲ್ಲಿ ಮಾನ್ಸೂನ್ ಮಳೆ ಆರಂಭಕ್ಕೂ ಮೊದಲು ಅಂದರೆ ಭರಣಿ ಮಳೆಗೆ ತಾಲೂಕಿನಾದ್ಯಂತ ಸುಮಾರು 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳವನ್ನು ಬಿತ್ತನೆ ಮಾಡಲಾಗಿದೆ.

ಮುಸುಕಿನ ಜೋಳಕ್ಕೆ ಆರಂಭದಲ್ಲಿ ಮಳೆಯ ಕೊರತೆ ಕಾಡುತ್ತಿದ್ದು, ಇದರ ನಡುವೆ ಸೈನಿಕ ಹುಳುವಿನ ಕಾಟ ಹೆಚ್ಚಾಗಿರುವುದು ರೈತರನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಜೋಳ ಬಿತ್ತನೆ ಮಾಡಿ ಈಗಾಗಲೇ 50 ರಿಂದ 60 ದಿನಗಳು ಕಳೆದಿರುವ ಮುಸುಕಿನ ಜೋಳ ಫಸಲು ಕಚ್ಚುವ ಹಂತದಲ್ಲಿರುವಾಗ ಸೈನಿಕ ಹುಳುವಿನ ದಾಳಿಗೆ ಸಿಲುಕಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

ಈಗಾಗಲೇ ಮುಸುಕಿನ ಜೋಳ ತೆನೆ ಮೂಡುವ ಹಂತದಲ್ಲಿದ್ದು, ಈ ಹಂತದಲ್ಲಿ ಸೈನಿಕ ಹುಳುಗಳು ಬೆಳೆಗೆ ಲಗ್ಗೆ ಇಟ್ಟಿವೆ. ಹಗಲಿನಲ್ಲಿ ಸುಳಿ ಹಾಗೂ ಬುಡದ ಮಣ್ಣಿನ ಒಳಭಾಗ ಸೇರಿಕೊಳ್ಳುವ ಹುಳುಗಳು, ರಾತ್ರಿ ವೇಳೆ ಹೊರಬಂದು ಗರಿಗಳನ್ನು ತಿನ್ನುತ್ತಿವೆ. ಜತೆಗೆ ಗರಿಗಳ ಮೇಲೆ ಹಿಕ್ಕೆ ವಿಸರ್ಜಿಸಿ ರೈತರ ನಿದ್ರೆಗೆಡಿಸಿವೆ.

ಕೀಟಬಾದೆ ತೀವ್ರಗೊಂಡು ಮುಸುಕಿನ ಜೋಳದ ಗರಿಗಳು ಹಾಳಾಗಿರುವ ಪರಿಣಾಮ ಬೆಳವಣಿಗೆಯಲ್ಲಿ ಕುಂಠಿತವಾಗಿದ್ದು, ಇದರಿಂದ ಜೋಳದ ತೆನೆ ಹುಲುಸಾಗಿ ಬರುವುದಿಲ್ಲ. ತೆನೆ ಬಂದರೂ ನಿರೀಕ್ಷೆಯಂತೆ ಫಸಲು ಹಿಡಿಯುವುದು ಅನುಮಾನವಾಗಿದೆ ಎಂದು ರೈತ ಹೆಚ್,ಬಿ.ಶಿವರುದ್ರ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕಳೆದ 2 ವಾರದಿಂದ ಮೋಡಕವಿದ ವಾತಾವರಣ ಹಾಗೂ ಶೀತಮಿಶ್ರಿತ ಗಾಳಿ ಕೀಟಬಾಧೆ ಕಾರಣ ಎನ್ನಲಾಗಿದೆ. ರೈತರು ಹೋಬಳಿಯ ರೈತ ಸಂಪರ್ಕ ಕೇಂದ್ರ ಹಾಗೂ ಖಾಸಗಿ ಔಷಧ ಅಂಗಡಿಗಳಲ್ಲಿ ಲಭ್ಯವಿರುವ ಕೀಟನಾಶಕಗಳನ್ನು ತಂದು ಬೆಳೆಗೆ ಸಿಂಪಡಿಸಿದರೂ ಕೀಟಬಾಧೆ ನಿಯಂತ್ರಣಕ್ಕೆ ಬಂದಿಲ್ಲ.

ಕೆಲವರು ಬೆಳೆಗೆ ತಕ್ಷಣ ಕೀಟನಾಶಕ ಸಿಂಪಡಿಸಿದರೆ, ಇನ್ನೂ ಕೆಲವರು ಕೀಟನಾಶಕ ಸಂಪಡಿಸದೆ ಕೈಚೆಲ್ಲಿರುವ ಕಾರಣ ಹುಳುಗಳ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಒಂದು ಎಕರೆ ಜಮೀನಿನಲ್ಲಿ ಮುಸುಕಿನ ಜೋಳ ಬೆಳೆಯಲು ಬಿತ್ತನೆಯಿಂದ ಕಟಾವಿನ ಹಂತದವರೆಗೆ ಸುಮಾರು 8 ರಿಂದ 9 ಸಾವಿರ ರೂ. ನಿರ್ವಹಣೆ ವೆಚ್ಚ ತಗುಲಲಿದೆ. ಕೀಟಬಾಧೆಗೆ ತುತ್ತಾಗಿರುವ ಮುಸುಕಿನ ಜೋಳದ ಬೆಳೆ ಜಾನುವಾರುಗಳ ಮೇವಿಗೂ ಬಳಕೆಯಾಗದ ಸ್ಥಿತಿ ತಲುಪಿದ್ದು, ರೈತರು ದಿಕ್ಕು ತೋಚದ ಪರಿಸ್ಥಿತಿಯಲ್ಲಿದ್ದಾರೆ.

ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಮುಸುಕಿನ ಜೋಳ ಮಳೆಯ ತೀವ್ರ ಕೊರತೆಯಿಂದ ಒಣಗಿಹೋಗಿರುವುದು, ರೈತರಿಗೆ ಆರ್ಥಿಕವಾಗಿ ಸಂಕಷ್ಟ ಎದುರಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ರೋಗಬಾಧೆ ತಡೆ, ಬೆಳೆ ಪರಿಹಾರಕ್ಕೆ ಕ್ರಮ ವಹಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.

ರೈತ ಬೆಳೆದ ಬೆಳೆಗೆ ಕೃಷಿ ಅಧಿಕಾರಿಗಳ ಶಿಫಾರಸು ಹಾಗೂ ಮಾರ್ಗದರ್ಶನ ಅತ್ಯಗತ್ಯ. ಇಲಾಖೆಯ ಅಧಿಕಾರಿಗಳು ಬಿತ್ತನೆಯಿಂದ ಫಸಲಿನ ಹಂತದವರೆಗೂ ರೈತರೊಂದಿಗೆ ಸಂಪರ್ಕದಲ್ಲಿದ್ದು, ಆಗಾಗ್ಗೆ ಜಮೀನಿಗೆ ಭೇಟಿನೀಡಿ ಬೆಳೆ ವೀಕ್ಷಿಸಿ ಮಾಹಿತಿ ನೀಡಿದರೆ ಹೆಚ್ಚಿನ ಅನುಕೂಲವಾಗಲಿದೆ. ಜೊತೆಗೆ ರೋಗಬಾಧೆ ನಿಯಂತ್ರಣಕ್ಕೆ ಸೂಕ್ತ ಸಲಹೆ ನೀಡಬೇಕಿದೆ.
l ಈರೇಗೌಡ ಈಚೂರು ರೈತ

ಪಿರಿಯಾಪಟ್ಟಣ ತಾಲೂಕಿನಾದ್ಯಂತ ಬಿತ್ತನೆಗೊಂಡಿರುವ ಮುಸುಕಿನ ಜೋಳದ ಬೆಳೆ ಈ ಬಾರಿ ನಿರೀಕ್ಷೆಗೂ ಮೀರಿ ಬೆಳೆದಿದದರೂ ಕೀಟಬಾಧೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರೈತರು ಆತಂಕಕ್ಕೆ ಬದಲು ರೈತ ಸಂಪರ್ಕ ಕೇಂದ್ರಕ್ಕೆ ಆಗಮಿಸಿ ಲಭ್ಯವಿರುವ ಇಮಾಮೆಕ್ಸನ್ ಬೆಂಜವೇಟ್ ಎಂಬ ಕೀಟನಾಶಕ ಹಾಗೂ ಅಧಿಕಾರಿಗಳ ಸಲಹೆ ಅನುಸರಿಸಿ ಬೆಳೆಗೆ ಕೀಟನಾಶಕ ಸಿಂಪಡಿಸಿದರೆ ಹುಳುಗಳ ಕಾಟಕ್ಕೆ ಮುಕ್ತಿ ನೀಡಬಹುದು.
l ಪ್ರಸಾದ್ ಕೃಷಿ ಇಲಾಖೆ ಸಹಾಯಕ ನಿರ್ದೇಶಕ

ಮುಸುಕಿನ ಜೋಳಕ್ಕೆ ಒಂದೆಡೆ ಕೀಟಬಾಧೆ ಮತ್ತೊಂದೆಡೆ ಮಳೆಯ ಅಭಾವ. ಇಂಥ ಸಂದೀಗ್ದ ಸಮಯದಲ್ಲಿ ಸರ್ಕಾರಗಳು ರೈತನ ನೆರವಿಗೆ ಬಾರದಿದ್ದರೆ ಆತ ಆತ್ಮಹತ್ಯೆ ಹಾದಿ ಹಿಡಿಯದೆ ಮತ್ತೇನೂ ಮಾಡಲು ಸಾಧ್ಯ.
l ಶಿವರಾಮ್ ಕಗ್ಗುಂಡಿ ರೈತ

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...