NEWSನಮ್ಮರಾಜ್ಯಲೇಖನಗಳು

ಸಾರಿಗೆ ನೌಕರರ  ಸಮಸ್ಯೆಗೆ ಸ್ಪಂದಿಸದ ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಎಚ್‌ಡಿಕೆ, ಡಿಕೆಶಿ ! ಆಡಳಿತ ಪಕ್ಷಕ್ಕೆ ಏಕೀದ್ವೇಷ..?

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಅರೆ ಹೊಟ್ಟೆಯಲ್ಲಿ ಹಗಲಿರುಳು ಎನ್ನದೆ ದುಡಿಯುತ್ತಿರುವ ಸಾರಿಗೆ ನೌಕರರು ಕನಿಷ್ಠಪಕ್ಷ ಹೊಟ್ಟೆ ತುಂಬವಾದರೂ ಅನ್ನಕೊಡಿ ಎಂದು ಸರ್ಕಾರದ ಮುಂದೆ ಅಂಗಲಾಚಿದರು. ಆದರೆ ಸರ್ಕಾರಕ್ಕೆ ಅವರ ಹಸಿವಿನ ಕೂಗು ಮುಟ್ಟಲೆ ಇಲ್ಲ.

ಇನ್ನು ರಾಜ್ಯದಲ್ಲಿ ವಿಪಕ್ಷ ಸ್ಥಾನದಲ್ಲಿ ಕುಳಿತಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಸಾರಿಗೆ ನೌಕರರ ಪಾಲಿಕೆ ಮೂರು ಕೋತಿಗಳಂತೆ ವರ್ತಿಸುತ್ತಿದ್ದು, ನೌಕರರ ಸಮಸ್ಯೆ ಇನ್ನಷ್ಟು ಜಟಿಲವಾಗುವಂತೆ ಮಾಡಿದೆ.

ವಿಪಕ್ಷ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಇನ್ನು ರಾಜ್ಯದ ನೊಂದವರ ಸಮಸ್ಯೆ ನಮ್ಮದೆ ಎಂದು ಹೇಳಿಕೊಳ್ಳುವ ಡಿ.ಕೆ.ಶಿವಕುಮಾರ್‌ ಅವರು ನೌಕರರು ಸಮಸ್ಯೆ ಹೊತ್ತು ತಮ್ಮಗಳ ಬಳಿಗೆ ಬಂದರೆ ನಾಮ್‌ ಕೇ ವಾಸ್ತೆ ಎಂಬಂತೆ ಕೆಎಸ್‌ಆರ್‌ಟಿ ಎಂಡಿಗೊ ಇಲ್ಲ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರಿಗೋ  ನೌಕರರ ಮುಂದೆಯೇ ಫೋನ್ ಮಾಡಿ ನಿಮ್ಮ ಸಮಸ್ಯೆ ಇನ್ನು ಮುಂದೆ ಇರೋದಿಲ್ಲ ನಾವು ನಿಮ್ಮ ಪರವಾಗಿ ಇರುತ್ತೇವೆ ಎಂದು ನಂಬಿಸಿ ಹೊರಹಾಕುತ್ತಾರೆ.

ಇನ್ನೇನು ನಮ್ಮ ಸಿದ್ದರಾಮಯ್ಯ, ಎಚ್‌ಡಿಕೆ ಮತ್ತು ಡಿಕೆಶಿ ಸಾಹೇಬರು ಭರವಸೆ ಕೊಟ್ಟು ಬುಟ್ರು ವಜಾ, ಅಮಾನತು ಮತ್ತು ವರ್ಗಾವಣೆ ಆಗಿರುವ ನಾವುಗಳು ಈ ಹಿಂದಿನಂತೆ ಯಥಾಸ್ಥಿತಿಯಲ್ಲಿ ಕರ್ತವ್ಯಕ್ಕೆ ಹಾಜರಾಗಬಹುದು ಎಂಬ ಹುಮ್ಮಸ್ಸಿನಲ್ಲೇ ಬರುತ್ತಾರೆ. ಆದರೆ, ಅವರು ಕೊಟ್ಟ ಮನವಿಯನ್ನು ಈ ವಿಪಕ್ಷ ನಾಯಕರು ತಮ್ಮ ಮನೆಯ ಕಸದ ಬುಟ್ಟಿಗೋ ಇಲ್ಲ ಯಾವುದಾದರೂ ಒಂದು ಮೂಲೆಗೋ ಬಿಸಾಕಿ ಸದ್ಯ ಮನೆಯಿಂದ ಹೊರಹೋದರಲ್ಲ ಎಂದು ಮನವಿ ಪತ್ರ ಸ್ವೀಕರಿಸಿದ್ದಕ್ಕೆ ಸೋಪ್‌ ಹಾಕಿಕೊಂಡು ಕೈ ತೊಳೆದು ಬಿಡುತ್ತಿದ್ದಾರೆ.

ಒಂದು ಕಿವಿಯಲ್ಲಿ ಸಮಸ್ಯೆ ಕೇಳಿ ಇನ್ನೊಂದು ಕಿವಿಯಲ್ಲಿ ಬಿಡುವ ಚಾಳಿ ಸಲ್ಲ
ಇದಕ್ಕಾಗಿಯೇನು ನಮ್ಮ ರಾಜ್ಯದ 224 ವಿಧಾನಸಭೆ ಮತ್ತು 28 ಸಂಸದರು, ಸ್ಥಳೀಯ ಸಂಸ್ಥೆಗಳಿಗೆ ನಾವು ಜನ ಪ್ರತಿನಿಧಿಗಳನ್ನು ಗೆಲ್ಲಿಸಿ ಕಳುಹಿಸಿರೋದು. ಅಲ್ಲ ಸ್ವಾಮಿ ರಾಜ್ಯಾದ್ಯಂತ ನಾಲ್ಕೂ ಸಾರಿಗೆ ಸಂಸ್ಥೆಗಳ 1.30 ಲಕ್ಷ ನೌಕರರು ತಮ್ಮ ಸಮಸ್ಯೆ ಹೇಳಿಕೊಂಡು ಎಲ್ಲಾ 224 ಕ್ಷೇತ್ರಗಳ ಶಾಸಕರು, 28 ಸಂಸದರ ಮನೆ ಬಾಗಿಲಿಗೆ ಅಲೆದು ಅಲೆದು ಚಪ್ಪಲಿಸವೆಸಿದರೂ ಅವರಿಗೆ ನೀವು ತೋರಿಸುವ ಗೌರವ ಇದೇನಾ? ಇದಕ್ಕೇನಾ ನೀವು ವಿಧಾನಸೌಧಕ್ಕೆ ಹೋಗಿರೋದು? ಸಾರಿಗೆ ನೌಕರರ ಸಮಸ್ಯೆಗೂ ನಿಮಗೂ ಸಂಬಂಧ ಇಲ್ಲವಾ? ಒಂದು ಕಿವಿಯಲ್ಲಿ ಸಮಸ್ಯೆ ಕೇಳಿ ಇನ್ನೊಂದು ಕಿವಿಯಲ್ಲಿ ಬಿಡುವ ಚಾಳಿ ಬಿಟ್ಟು ಪರಿಹರಿಸವ ನಿಟ್ಟಿನಲ್ಲಿ ಮುಂದಾಗಿ.

ಎಲ್ಲವೂ ನಿಮ್ಮ ಕೈಯಲ್ಲೇ ಇದೆ
ಇನ್ನು ಎಲ್ಲವೂ ನಿಮ್ಮ ಕೈಯಲ್ಲೇ ಇರುವ ಬಗೆಹರಿಸ ಬಹುದಾದ ಸಮಸ್ಯೆಯನ್ನು ಒಂದು ರೀತಿ ಪ್ರತಿಷ್ಠೆಯಾಗಿಯೋ ಇಲ್ಲ ಸಾರಿಗೆ ನೌಕರರ ಬಗ್ಗೆ ತಾತ್ಸಾರದಿಂದಲೋ ನೀವು ಈ ರೀತಿ ಉದಾಸೀನತೆಯಿಂದ ನಡೆದುಕೊಳ್ಳುವುದು ಸಂವಿಧಾನಕ್ಕೆ ಮಾಡುವ ಅಪಚಾರವಲ್ಲವಾ? ಇದು ನಿಮಗೆ ಶೋಭೆ ತರುವಂತದಲ್ಲ.

ಸಿಎಂ ಮತ್ತು ಸಚಿವರುಗಳ ಮಲತಾಯಿ ಧೋರಣೆ ಸಲ್ಲ
ಪಾಪ ಏನೋ ಮಾಡಬಾರದ ತಪ್ಪು ಮಾಡಿದ್ದಾರೆ ಎಂಬಂತೆ ರಾಜ್ಯ ಸರ್ಕಾರದ ಸಿಎಂ ಮತ್ತು ಸಚಿವರುಗಳು ಕೂಡ ಸಾರಿಗೆ ನೌಕರರನ್ನು ಮಲತಾಯಿ ಮಕ್ಕಳಂತೆ ನಡೆಸಿಕೊಳ್ಳುತ್ತಿದ್ದಾರೆ. ಏನು ಇದು ನಿಮ್ಮ ಮನೆಯ ಸಮಸ್ಯೆ ಅಲ್ಲವಾ? ಈಗ ನೀವು ಮನೆಯ ಮುಖ್ಯಸ್ಥರ ಸ್ಥಾನದಲ್ಲಿ ಕುಳಿತುಕೊಂಡಿದ್ದೀರಾ? ಒಂದೇ ಮನೆಯಲ್ಲಿ ಒಬ್ಬರಿಗೆ ಹೆಚ್ಚು ಮತ್ತೊಬ್ಬರಿಗೆ ಕಡಿಮೆ ಪ್ರೀತಿ ತೋರಿಸಿದರೆ ನಿಮ್ಮ ಮೇಲೆ ಮಕ್ಕಳು ಮುನಿಸಿಕೊಳ್ಳುವುದಿಲ್ಲ. ನಿಮ್ಮ ನಡೆಯನ್ನು ಖಂಡಿಸುವುದಿಲ್ಲ? ಅದೇ ರೀತಿ ಸಾರಿಗೆ ನೌಕರರು ತಮಗಾಗುತ್ತಿರುವ ವೇತನ ಸೇರಿದಂತೆ ಮತ್ತಿತರ ತಾರತಮ್ಯತೆ ಬಗ್ಗೆ ಧ್ವನಿ ಎತ್ತಿದರೆ ಅವರಿಗೆ ನೀವು ವಜಾ, ಅಮಾನತು, ವರ್ಗಾವಣೆಯಂತ ಶಿಕ್ಷೆ ನೀಡಿರುವುದು ಎಷ್ಟು ಸರಿ?

ವಕೀಲ ಎಚ್‌.ಬಿ.ಶಿವರಾಜು ಅವರ ನೇತೃತ್ವದಲ್ಲಿ ಒಂದು ಸಭೆ ಕರೆಯಬಹುದಲ್ಲ
ಏನೋ.. ಎಲ್ಲೋ ಸಾರಿಗೆ ನೌಕರರೋ ಇಲ್ಲ ಸರ್ಕಾರವೇ ಎಡವಿರಬಹುದು. ಅದನ್ನು ಒಂದೇಮನೆಯವರಾದ ನೀವು ಬೀದಿಗೆ ತರದೆ ಒಂದೆಡೆ ಸೇರಿಕೊಂಡು ಮಾತನಾಡಿದ್ದರೆ ಈ ರೀತಿ ಆಗುತ್ತಿತ್ತ? ನಿಮ್ಮ ಮನೆಯ ಗಲಾಟೆಗಳನ್ನು ಪಕ್ಕದ ಮನೆಯವರಿಗೆ ತಿಳಿಯುವಂತೆ ಮಾಡಿಕೊಂಡಿರುವುದು ಅಲ್ಲದೆ ಇನ್ನು ತಮ್ಮ ಮಕ್ಕಳ ಮೇಲೆ ನೀವು ದ್ವೇಷ ಸಾಧಿಸುತ್ತಿರುವುದು ಸರಿಯಲ್ಲ. ಈಗಲೂ ಕಾಲ ಮಿಂಚಿಲ್ಲ.

ಆದರೆ, ಮುಷ್ಕರದ ದಿನಗಳಲ್ಲಿ ನಡೆದಿರುವ ಪ್ರಕರಣಗಳು ಈಗ ಕೋರ್ಟ್‌ನಲ್ಲಿವೆ ಎಂಬ ಸಬೂಬು ಹೇಳದೆ ನೌಕರರ ಪರ ಕೋರ್ಟ್‌ನಲ್ಲಿ ವಕಾಲತು ವಹಿಸಿರುವ ಸುಪ್ರೀಂಕೋರ್ಟ್‌ ಹಾಗೂ ಕರ್ನಾಟಕ ಹೈ ಕೋರ್ಟ್‌ ವಕೀಲರಾದ ಎಚ್‌.ಬಿ.ಶಿವರಾಜು ಅವರ ನೇತೃತ್ವದಲ್ಲಿ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳನ್ನು ಕರೆದು ಒಂದು ಸುತ್ತಿನ ಮಾತುಕತೆ ಮಾಡುವ ಮೂಲಕ ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಸಮಸ್ಯೆ ಮಗೆ ಹರಿಸಬಹುದಲ್ಲವೇ?

ಇನ್ನು ರಾಜ್ಯ ಸರ್ಕಾರದ ಕಿವಿ ಹಿಂಡಿ ಈ ಸಮಸ್ಯೆ ಬಗೆಹರಿಸಬಹುದಿತ್ತು. ಆ ಒಂದು ಚಾನ್ಸ್‌ ಈಗಲೂ ಇದೆ. ಅದರ ಸದುಪಯೋಗ ಪಡೆದು ಈಗಲಾದರೂ ಆಡಳಿತ ವಿಪಕ್ಷಗಳು ಒಂದೆಡೆ ಸೇರಿ ನೌಕರರ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಬೇಕಿದೆ.

ನೀವೆ ಬಗೆ ಹರಿಸಬಹುದಾದ ಸಮಸ್ಯೆ ಇದು
ನಿಮ್ಮ ಕೈಯಲ್ಲೇ ಬಗೆ ಹರಿಸಬಹುದಾದ ಸಮಸ್ಯೆ ಇದು. ಹೀಗಾಗಿ ನ್ಯಾಯಾಲಯದ ಮೂಲಕ ಬಗೆ ಹರಿದರೆ ನಿಮ್ಮನ್ನು ಜನ ಯಾವರೀತಿ ನೋಡುತ್ತಾರೆ ಎಂಬುದನ್ನು ನೀವು ಯೋಚಿಸ ಬೇಕಿದೆ. ಕಾರಣ ಸದ್ಯದಲ್ಲಿಯೇ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ಬರುತ್ತಿದ್ದು, ಆ ವೇಳೆ ಮತ ಕೇಳಲು ನೀವು ಜನರ ಬಳಿಗೆ ಹೋಗಲೇ ಬೇಕಿದೆ.  ಈ ನಿಟ್ಟಿನಲ್ಲೂ ನೀವು ಯೋಚಿಸಿ ಏಕೆಂದರೆ ಸಾರಿಗೆ ಸಂಸ್ಥೆಯಲ್ಲಿರುವ 1.30 ನೌಕರರು ಮತ್ತು ಅವರ ಕುಟುಂಬ, ಸಂಬಂಧಿಕರು ಹೀಗೆ ಅವರ ಪಡೆಯು ದೊಡ್ಡದಿದೆ. ಜತೆಗೆ ಈಗಾಗಲೇ ರಾಜಕೀಯ ಎಂದರೆ ಜನರು ಅದು ಹೊಲಸು ಎಂಬ ಭಾವನೆ ಹೊಂದಿದ್ದಾರೆ. ಆದ್ದರಿಂದ ಅದನ್ನು ಹೋಗಲಾಡಿಸಲಾದರೂ ಸಮಸ್ಯೆ ಪರಿಹರಿಸಬೇಕಿದೆ.

Leave a Reply

error: Content is protected !!
LATEST
ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ ಕೃಷ್ಣರಾಜಪೇಟೆ ತ್ರಿವೇಣಿ ಸಂಗಮದಲ್ಲಿ ಕಾರ್ತಿಕ ಮಾಸದ ಮೊದಲ ಸೋಮವಾರ ಅದ್ದೂರಿಯಾಗಿ ಜರುಗಿದ ಹುಲಿ ವಾಹನ ಉತ್ಸವ ತಿ.ನರಸೀಪುರ: ಭತ್ತದ ಬೆಂಬಲ ಬೆಲೆ ಜತೆಗೆ ಕ್ವಿಂಟಾಲ್‌ಗೆ 500 ರೂ. ಪ್ರೋತ್ಸಾಹ ಧನ ನೀಡಿ - ರೈತ ಮುಖಂಡರ ಆಗ್ರಹ ಅಪಾರ್ಟ್‌ಮೆಂಟ್‌ನಲ್ಲಿ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಹಾಸನಾಂಬೆ ದರ್ಶನ ಅಂತ್ಯ-ಹರಿದು ಬಂತ್ತು ₹9 ಕೋಟಿಗೂ ಅಧಿಕ ಆದಾಯ ನ.3ರಂದುಇಪಿಎಸ್ ಪಿಂಚಿಣಿದಾರರ ಮಾಸಿಕ ಸಭೆ: ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTCಯ ಸಮಸ್ತ ನೌಕರರ ಸಮಸ್ಯೆ, ಅಸಮಾಧಾನದ ನಡುವೆಯೂ ಕನ್ನಡ ರಾಜ್ಯೋತ್ಸವ ಆಚರಣೆ ತುಂಬಾ ವಿಜೃಂಭಣೆ