ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ನೌಕರರಿಗೆ ಜುಲೈ 1ರಿಂದ ಅನ್ವಯವಾಗುವಂತೆ ತುಟ್ಟಿಭತ್ಯೆ ದರವನ್ನು ಶೇ.11.25ರಿಂದ ಶೇ.21.50ಕ್ಕೆ ಹೆಚ್ಚಿಸಿ ಅನುಷ್ಠಾನ ಗೊಳಿಸಲು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ರಾಜ್ಯ ಸರ್ಕಾರದ ಆದೇಶದಂತೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ರಾಜ್ಯ ಸಾರಿಗೆ ನಿಗಮಗಳಲ್ಲಿ ಪರಿಷ್ಕೃತ ತುಟ್ಟಿಭತ್ಯೆ ದರವನ್ನು ಅನುಷ್ಠಾನಗೊಳಿಸಿ ನಾಲ್ಕೂ ಸಾರಿಗೆ ನಿಗಮಗಳಲ್ಲಿ ಜುಲೈ 2021ರ ಮಾಹೆಯ ವೇತನದಲ್ಲಿ ಮತ್ತು ಮುಂದಕ್ಕೆ ತುಟ್ಟಿಭತ್ಯೆ ದರವನ್ನು ಶೇ.11.25 ರಿಂದ ಶೇ.21.50ಕ್ಕೆ ಹೆಚ್ಚಿಸಿ ಅನುಷ್ಠಾನಗೊಳಿಸಿ ಪಾವತಿಸುವಂತೆ ಆದೇಶ ಹೊರಡಿಸಿದ್ದಾರೆ.
ರಾಜ್ಯ ಸರ್ಕಾರ ತನ್ನ ಉದ್ಯೋಗಿಗಳಿಗೆ ಶೇ.10.25ರಷ್ಟು ತುಟ್ಟಿ ಭತ್ಯೆ (ಡಿಯರ್ ನೆಸ್ ಅಲೋಯನ್ಸ್) ಹಾಗೂ ಡಿಯರ್ ನೆಸ್ ರಿಲೀಫ್ ಹೆಚ್ಚಳ ಮಾಡಿದ್ದು ಜು.1 ರಿಂದ ಅನ್ವಯವಾಗುವಂತೆ ಜಾರಿಗೊಳಿಸಲು ಹಣಕಾಸು ಇಲಾಖೆಗೆ ಆದೇಶ ನೀಡಿದೆ.
ಹೊಸ ನಿರ್ಧಾರ ಜಾರಿಗೆ ಬರುವುದರಿಂದ ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಹಾಗೂ ಪಿಂಚಣಿದಾರರಿಗೆ ಈ ವರೆಗೂ ಇದ್ದ ಶೇ.17 ರಷ್ಟು ಡಿಎ, ಡಿ.ಆರ್ ಈಗ ಶೇ.28 ಕ್ಕೆ ಏರಿಕೆಯಾಗಲಿದ್ದು ಕೇಂದ್ರ ಸರ್ಕಾರದ 48 ಲಕ್ಷ ಉದ್ಯೋಗಿಗಳು ಹಾಗೂ 65 ಲಕ್ಷ ಪಿಂಚಣಿದಾರರಿಗೆ ಮೂಲ ವೇತನದ ಶೇ.28 ರಷ್ಟು ಡಿ.ಎ, ಡಿಆರ್ ಏರಿಕೆಯ ಲಾಭಪಡೆಯಲಿದ್ದಾರೆ.
2020 ರ ಜನವರಿ 1, 2020 ರ ಜುಲೈ 1 ಹಾಗೂ 2021 ರ ಜನವರಿ, 1 ರ ಕಂತುಗಳನ್ನೂ ಈ ಏರಿಕೆಯ ಮೊತ್ತ ಒಳಗೊಂಡಿರುತ್ತದೆ.
ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕಳೆದ ವರ್ಷ ಡಿಎ ಹೆಚ್ಚಳಕ್ಕೆ 2021 ರ ಜೂ.30 ರವರೆಗೂ ತಡೆಯೊಡ್ಡಿತ್ತು.
ಬಿಎಂಟಿಸಿಯಲ್ಲಿ ನಿತ್ಯ 17 ಲಕ್ಷ ಜನರ ಪ್ರಯಾಣ, 2.10 ಕೋಟಿ ರೂ. ಸರಾಸರಿ ಆದಾಯ ಗಳಿಕೆ