NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರ ಪ್ರಕರಣ: ಮತ್ತೆ ನಾವು ವಾಪಸ್‌ ಹೋಗಲ್ಲ, ಗೊಂದಲ ಬೇಡ ಎಂದ ವಕೀಲ ಶಿವರಾಜು

ಕರ್ನಾಟಕ ಹೈ ಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ವಕೀಲ ಎಚ್‌.ಬಿ.ಶಿವರಾಜು.
Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ನೌಕರರ ಪರವಾಗಿ ರಾಜ್ಯ ಹೈ ಕೋರ್ಟ್‌ ನಲ್ಲಿ PIL ರಿಟ್‌ಪಿಟಿಷನ್‌ ನಂ.8012/2021 ಈ ಪ್ರಕರಣದಲ್ಲಿ ಜಂಟಿಯಾಗಿ ವಕಾಲತ್ತು ವಹಿಸಿದ್ದ ಸುಪ್ರೀಂ ಕೋರ್ಟ್‌ ಹಾಗೂ ಕರ್ನಾಟಕ ಹೈ ಕೋರ್ಟ್‌ ವಕೀಲ ಎಚ್‌.ಬಿ.ಶಿವರಾಜು ಅವರು ಪ್ರಕರಣದಿಂದ ನಿವೃತ್ತರಾಗಿದ್ದು ಮತ್ತೆ ಪ್ರಕರಣದ ವಕಾಲತ್ತು ವಹಿಸುವುದಿಲ್ಲ. ಈ ಬಗ್ಗೆ ನೌಕರರು ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಕೆಲವು ಸಾರಿಗೆ ನೌಕರರು ರಾಜ್ಯ ಹೈ ಕೋರ್ಟ್‌ ನಲ್ಲಿ ಇರುವ ನಮ್ಮ ಪ್ರಕರಣ ಸಂಬಂಧ ಶಿವರಾಜು ಅವರೇ ವಕಾಲತ್ತು ವಹಿಸುತ್ತಾರೆ ಎಂದು ಹೇಳಿಕೆ ನೀಡುತ್ತಿದ್ದು, ಇದರಿಂದ ಹಲವು ನೌಕರರಲ್ಲಿ ಗೊಂದಲ ಉಂಟಾಗಿದೆ. ಹೀಗಾಗಿ ಈ ಸಂಬಂಧ ವಿಜಯಪಥ ವಕೀಲರಾದ ಶಿವರಾಜ್‌ ಅವರನ್ನು ಸಂಪರ್ಕಿಸಿದಾಗ ಅವರು ನಾವು ಈಗಾಗಲೇ ಈ ಪ್ರಕರಣದಿಂದ ಹೊರಬಂದಿದ್ದು, ಎನ್‌ಓಸಿಯನ್ನು ಕೊಟ್ಟಾಗಿದೆ. ಹೀಗಾಗಿ ಮತ್ತೆ ಒಳಹೋಗುವುದಿಲ್ಲ ಎಂದು ತಿಳಿಸಿದರು.

ಇನ್ನು ಈ ಸಂಬಂಧ ಯಾವ ನೌಕರರು ಗೊಂದಲಕ್ಕೆ ಒಳಗಾಗುವುದು ಬೇಡ. ಯಾವುದೇ ಕಾರಣಕ್ಕೂ ನಾವು ಈ ಪ್ರಕರಣದಲ್ಲಿ ಭಾಗಿಯಾಗುವುದಿಲ್ಲ. ಹೀಗಾಗಿ ಈಗಾಗಲೇ ಈ ಪ್ರಕರಣ ಸಂಬಂಧ ವಕೀಲರಾದ ಅಮೃತೇಶ್‌ ಅವರು ವಕಾಲತ್ತು ವಹಿಸಿದ್ದಾರೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ನೌಕರರ ಕೂಟದಿಂದ  ಯಾವುದೇ ಪ್ರಕರಣವನ್ನು ನಾವು ತೆಗೆದುಕೊಳ್ಳುವುದಿಲ್ಲ. ಜತೆಗೆ ಒಂದುವೇಳೆ ಸುಪ್ರೀಂ ಕೋರ್ಟ್‌ನಲ್ಲಿ ನಿಮ್ಮ ಪ್ರಕರಣ ಬಂದರೆ ಹಿರಿಯ ನೌಕರರ ಜತೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು. ಹೀಗಾಗಿ ನಮಗೂ ನೌಕರರ ಕೂಟಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿಸಿದರು.

ಇನ್ನು ಸುಪ್ರೀಂ ಕೋರ್ಟ್‌ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧದ ಪ್ರಕರಣಗಳ ವಕಾಲತ್ತು ವಹಿಸಿದ್ದು ಜತೆಗೆ ಕೆಲ ಮಾಜಿ ಶಾಸಕರು ಮತ್ತು ಸಚಿವರಿಗೆ ಸಂಬಂಧಿಸಿದ  ಪ್ರಕರಣಗಳು ನಮ್ಮ ಕಚೇರಿಗೆ  ಹೆಚ್ಚಾಗಿ ಬಂದಿರುವುದದಿಂದ ಈ ಪ್ರಕರಣಗಳಲ್ಲಿ ಸುದೀರ್ಘವಾದ ವಿಚಾರಣೆ  ಮುಂದಿನ ದಿನಗಳಲ್ಲಿ ಬರುತ್ತಿರುವುದರಿಂದ  ಹೆಚ್ಚಿನ ಸಮಯ ದೆಹಲಿಯಲ್ಲೇ ಕಳೆಯಬೇಕಿದೆ. ಹೀಗಾಗಿ ನೌಕರರ ಪ್ರಕರಣದಿಂದ ಹೊರಬರಬೇಕಾಯಿತು ಎಂದು ಶೀವರಾಜು ತಿಳಿಸಿದರು.

ಇನ್ನು PIL ರಿಟ್‌ಪಿಟಿಷನ್‌ ನಂ.8012/2021ರ ಈ ಪ್ರಕರಣಕ್ಕೂ ವಕೀಲ ಶಿವರಾಜು ಅವರಿಗೂ ಯಾವುದೇ ಸಂಬಂಧವಿರುವುದಿಲ್ಲ. ಹೀಗಾಗಿ ನೌಕರರು ಮುಂದಿನ ಪ್ರಕರಣ ವಿಚಾರಣೆಗೆ ಸಂಬಂಧಿಸಿದ್ದನ್ನು ಸಂಬಂಧಪಟ್ಟ ವಕೀಲರ ಮೂಲಕ ತಿಳಿದುಕೊಳ್ಳಬೇಕು ನಮ್ಮ ಕಚೇರಿಗೆ ಬಂದು ನಿಮ್ಮ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.

ಇನ್ನು ಒಂದುವೇಳೆ  ಮುಂದಿನ ದಿನಗಳಲ್ಲಿ ಸಾರಿಗೆ ನೌಕರರ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಕಾಲತ್ತು ವಹಿಸಿಕೊಳ್ಳುವ ಸಂದರ್ಭ ಬಂದರೆ ನೌಕರರ ಪರ ಉಚಿತವಾಗಿ  ವಾದಮಂಡಿಸುತ್ತೇವೆ. ಇದಕ್ಕಿಂತಲು ಮುಖ್ಯವಾಗಿ ನೌಕರರಿಗೆ ಒಳ್ಳೆಯದನ್ನು ಮಾಡುವ ನಿಟ್ಟಿನಲ್ಲಿ ಆಲೋಚನೆ ನಡೆಸುತ್ತಿದ್ದು, ಈ ಸಂಬಂಧ ಸಂಸ್ಥೆಯ 10 ಮಂದಿ ನಿವೃತ್ತ ಅಧಿಕಾರಿಗಳನ್ನೊಳಗೊಂಡು ಒಂದು ಟೀಂ ಮಾಡಬೇಕಿದೆ.

ಈ ಟೀಂ ಮೂಲಕ ನಾಲ್ಕೂ ನಿಗಮಗಳ ನೌಕರರಿಗೆ ಕಾನೂನು ಬದ್ಧವಾದ ಎಲ್ಲ ಸೌಲಭ್ಯಗಳನ್ನು ದೊರೆಕಿಸಿಕೊಡುವ ಪ್ರಯತ್ನ ಮಾಡಲಾಗುವುದು ಎಂದು ಸೂಕ್ಷ್ಮವಾಗಿ ವಿವರಿಸಿದರು.

ಸಾರಿಗೆ ನೌಕರರ ಜಂಟಿ ವಕಾಲತ್ತಿಗೆ ವಿದಾಯ ಹೇಳಿದ ವಕೀಲ ಶಿವರಾಜು: ಮತ್ತೆ ನೌಕರರ ಪರ ನಿಲ್ಲವರೇ ಸುಪ್ರೀಂ ಕೋರ್ಟ್‌ ವಕೀಲರು?

ಆ.27ರಂದು ಸಾರಿಗೆ ನೌಕರರಿಗೆ ನ್ಯಾಯಾಲಯದಲ್ಲಿ ಒಳ್ಳೆಯದಾಗುವ ವಿಶ್ವಾಸವಿದೆ: ವಕೀಲ ಅಮೃತೇಶ್‌

ಭಿಕ್ಷೆ ಬೇಡುತ್ತಿದ್ದ ಬಿಎಂಟಿಸಿ ಚಾಲಕ ಇಸ್ಮೈಲ್‌ಗೆ ವಕೀಲ ಶಿವರಾಜುರಿಂದ ದೊಡ್ಡಮಟ್ಟದಲ್ಲಿಆರ್ಥಿಕ ಸಹಾಯ

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ