ಬೆಂಗಳೂರು: ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ತನಿಖಾಧಿಕಾರಿಗಳು ವಾಹನವನ್ನು ತನಿಖೆ ಮಾಡಬೇಕಾದರೆ ಈ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂಬುದ ಬಗ್ಗೆ ತಿಳಿದುಕೊಂಡು ಅದೇ ರೀತಿ ತನಿಖಾಧಿಕಾರಿಗಳು ನಿಯಮ ಪಾಲಿಸಿದ್ದಾರೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳುವಂತೆ ಹಿರಿಯ ಕಾನೂನು ತಜ್ಞರು ತಿಳಿಸಿದ್ದಾರೆ.
ಹಿರಿಯ ಕಾನೂನು ತಜ್ಞರು ತಿಳಿಸಿರುವಂತೆ ಮೊದಲನೆಯದಾಗ ತನಿಖಾಧಿಕಾರಿಗಳು ಕಡ್ಡಾಯವಾಗಿ ಸಮವಸ್ತ್ರ ಧರಿಸಿರಬೇಕು. ಅಂದರೆ ಸಮವಸ್ತ್ರ ಇಲ್ಲದೇ ಅವರು ತನಿಖೆ ಮಾಡಲು ಸಂಸ್ಥೆಯಲ್ಲಿ ಅವಕಾಶವಿಲ್ಲ.
ಎರಡನೆಯದಾಗಿ ನಿಗದಿತ ಹಂತದಲ್ಲಿ ಮಾತ್ರ ತನಿಖೆ ಮಾಡಬೇಕು. ಎಲ್ಲೆಂದರಲ್ಲಿ ತನಿಖೆ ಮಾಡುವ ಹಾಗಿಲ್ಲ. ಎಲ್ಲೆಂದರಲ್ಲಿ ತನಿಖೆ ಮಾಡುವಂತೆ ಸ್ಥಂಸ್ಥೆಯ ನಿಯಮಾವಳಿಯಲ್ಲಿ ಅವಕಾಶ ನೀಡಿರುವುದಿಲ್ಲ ಎಂಬುದನ್ನು ನೌಕರರು ತಿಳಿದುಕೊಳ್ಳಬೇಕು.
ಇನ್ನು ಮೂರನೆಯದಾಗಿ ತನಿಖಾಧಿಕಾರಿಗಳು ಕಡ್ಡಾಯವಾಗಿ ಬಾಡಿ ಕ್ಯಾಮರಾ ಅಳವಡಿಸಿಕೊಂಡಿರಬೇಕು. ಬಾಡಿ ಕ್ಯಾಮರಾ ಅಳವಡಿಸಿಕೊಂಡಿರದ ಅಧಿಕಾರಿಯನ್ನು ಪ್ರಶ್ನಿಸುವ ಅಧಿಕಾರ ನೌಕರರಿಗಿದೆ.
ಅದರಂತೆ ನಾಲ್ಕನೆಯದಾಗಿ ತನಿಖಾಧಿಕಾರಿಗಳು ಕೈ ಹಾಕಿ ಬಸ್ ಹತ್ತಿದಾಗ ಈ ಬಸ್ ಈ ಹಂತದಲ್ಲಿ ತನಿಖೆ ಮಾಡಬೇಕೆಂದು ಕಡ್ಡಾಯವಾಗಿ ಕಚೇರಿಯಿಂದ ನೀಡಿರುವ ಪ್ರೋಗ್ರಾಮಿಂಗ್ ಲೆಟರ್ ನಿರ್ವಾಹಕರಿಗೆ ತೋರಿಸಿ ಇಟಿಎಂ ಯಂತ್ರ ಪಡೆದು ತನಿಖೆ ಮಾಡಬೇಕು.
ಈ ನಾಲ್ಕರಲ್ಲಿ ಯಾವುದಾದರೂ ಒಂದು ಸರಿ ಇಲ್ಲದಿದ್ದರೂ ತನಿಖೆ ಮಾಡಲು ಸಹಕಾರ ನೀಡಬಾರದೆಂದು ಹಿರಿಯ ಕಾನೂನು ತಜ್ಞರು ತಿಳಿಸಿದ್ದಾರೆ. ಈ ನಿಯಮಗಳನ್ನು ಮೀರಿ ತನಿಖಾಧಿಕಾರಿಗಳು ತನಿಖೆ ಮಾಡಲು ಮುಂದಾದರೆ ನೌಕರರು ಸಹ ಅವರ ವಿರುದ್ಧ ಕೇಂದ್ರ ಕಚೇರಿಗೆ ಅಥವಾ ಸಂಸ್ಥೆಯ ಎಂಡಿಗಳಿಗೇ ದೂರು ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇದರ ಜತೆಗೆ ನೌಕರರು ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು. ನೀವು ಕೂಡ ಟಿಕೆಟ್ ನೀಡುವುದು ಸೇರಿ ಇತರ ನಿಯಮಗಳನ್ನು ಪಾಲಿಸದಿದ್ದರೇ ತಕ್ಷ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಸಾರಿಗೆ ನೌಕರರಿಗೆ ಇಲ್ಲ ಸ್ವಾತಂತ್ರ್ಯೋತ್ಸವದ ಸಂಭ್ರಮ : ಸಚಿವ ಶ್ರೀರಾಮುಲುಗೊಂದು ನೋವಿನ, ದುಃಖ ಮನಸ್ಸುಗಳ ಮನವಿ