ಬೆಂಗಳೂರು: ನಗರದ ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮನೆಯ ಒಳಗಿದ್ದ ಎರಡು ಕಾರುಗಳಿಗೆ ಬೆಂಕಿ ಹಾಕಿದ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಕಳೆದ ಎರಡು ದಿನಗಳಿಂದ ಐದು ತಂಡಳಾಗಿ ತೀವ್ರ ಹುಡುಕಾಟ ನಡೆದಿದ್ದ ಪೊಲೀಸರು ಕೊನೆಗೂ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ನೇಪಾಳ ಮೂಲದ ಸಾಗರ್ ಮತ್ತು ಸ್ಥಳೀಯರಾದ ಶ್ರೀಧರ್ ಗೌಡ ಮತ್ತು ನವೀನ್‍ನನ್ನು ಪೊಲೀಸರು ಬಂಧಿಸಿದ್ದಾರೆ.
ಬಳಿಕ ವಿಚಾರಣೆ ನಡೆಸಿದ ವೇಳೆ ಲಾಕ್ ಡೌನ್ ನಂತರ ಈ ಮೂವರು ಕೆಲಸವಿಲ್ಲದೇ ತೀವ್ರ ಪರದಾಡಿದ್ದರು. ಆದರೆ ಎಲ್ಲೂ ಕೂಡ ಕೆಲಸ ಸಿಕ್ಕಿರಲಿಲ್ಲ. ಇದೇ ಕಾರಣಕ್ಕೆ ಶಾಸಕ ಸತೀಶ್ ರೆಡ್ಡಿ ಬಳಿ ಸಹಾಯ ಕೇಳೋಕೆ ಅಂತಾ ಬಂದಿದ್ರು. ಮೂರು ಬಾರಿ ಶಾಸಕರನ್ನು ಭೇಟಿ ಮಾಡೋಕೆ ಟ್ರೈ ಮಾಡಿದರು ಕೂಡ ಎಂಎಲ್‍ಎ ಮನೆ ಸೆಕ್ಯೂರಿಟಿ ಗಾರ್ಡ್ ಒಳಗೆ ಬಿಟ್ಟಿರಲಿಲ್ಲ.
ಇಡೀ ದಿನ ಕಾದರು ಕೂಡ ಒಮ್ಮೆ ಭೇಟಿಗೂ ಅವಕಾಶ ಕೊಟ್ಟಿರಲಿಲ್ವಂತೆ. ಹೊಟ್ಟೆಗೆ ಊಟವಿಲ್ಲದೇ ಇಡೀ ದಿನ ಕಾದರೂ ಒಮ್ಮೆಯೂ ಭೇಟಿಗೆ ಅವಕಾಶ ಕೊಟ್ಟಿರಲಿಲ್ಲ. ಇದರಿಂದ ಬೇಸರಗೊಂಡ ಮೂವರು ಆರೋಪಿಗಳು, ಕಂಠಪೂರ್ತಿ ಕುಡಿದು ಶ್ರೀಮಂತರು ಶ್ರೀಮತಾಗೇ ಇರ್ತಾರೆ ನಮ್ಮಂಥ ಬಡವರು ಬಡರಾಗೇ ಸಾಯಬೇಕು ಅಂತಾ ಹತಾಶೆಗೊಂಡಿದ್ರು.
ಇದೇ ಮತ್ತಿನಲ್ಲಿ ಶಾಸಕರ ಮನೆ ಬಳಿ ಬಂದು ಬೈಕಿನಲ್ಲಿ ಪೆಟ್ರೋಲ್ ಕಳವು ಮಾಡಿ ಮನೆ ಬಳಿಯಿದ್ದ ಎರಡು ಕಾರುಗಳಿಗೆ ಬೆಂಕಿ ಹಾಕಿ ಎಸ್ಕೇಪ್ ಆಗಿದ್ದಾಗಿ ಪೊಲೀಸರ ಬಳಿ ಬಾಯ್ಬಿಟ್ಟಿದ್ದಾರೆ.
ಸದ್ಯ ಪೊಲೀಸರು ತನಿಖೆ ಮುಂದುವರಿಸಿದ್ದು ಬೇರೆ ಏನಾದರೂ ಕಾರಣ ಇದೆಯಾ ಅನ್ನೋದನ್ನು ತನಿಖೆ ಮಾಡ್ತಿದ್ದಾರೆ.