Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನಿಗಮಗಳ ಕರ್ಮಕಾಂಡ: 2014ರಲ್ಲಿ AWS, DM ಮಾಡಿದ ತಪ್ಪಿಗೆ ಈಗ ನಿರ್ವಾಹಕ ಕಟ್ಟಬೇಕಂತೆ 12,200 ರೂ.ದಂಡ !

ರಬ್ಬರ್‌ಸ್ಟಾಂಪ್‌ ಆಗಿದ್ದಾರಾ ಸಾರಿಗೆ ನಿಗಮಗಳ ವಿಭಾಗೀಯ ನಿಯಂತ್ರಣಾಧಿಕಾರಿಗಳು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಎತ್ತಿಗೆ ಜ್ವರ ಬಂದರೆ ಕೊಟ್ಟಿಗೆಗೆ ಬರೆ ಹಾಕು ಎಂಬಂತೆ ಸಾರಿಗೆ ನಿಗಮಗಳ ಅಧಿಕಾರಿಗಳು ತಮ್ಮ ದೂಂಡಾವರ್ತನೆಯನ್ನು ನೌಕರರ ಮೇಲೆ ಮುಂದುವರಿಸಿದ್ದಾರೆ.

ಹೌದು! 2014ರ ಸೆಪ್ಟೆಂಬರ್‌ 23 ರಂದು ಬಿಎಂಟಿಸಿ ವಾಹನವೊಂದರ ತಪಾಸಣೆ ಮಾಡಿದ ಆರ್‌ಟಿಒ ಅಧಿಕಾರಿಗಳು ಹೊಗೆ ತಪಾಸಣೆ ಪ್ರಮಾಣ ಪತ್ರದ ಅವಧಿ ಮುಗಿದಿರುವುದರಿಂದ 12,200 ರೂ.ಗಳ ದಂಡ ಹಾಕಿದ್ದಾರೆ. ಆದರೆ ಆ ದಂಡವನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡದೆ ಏಳು ವರ್ಷದ ಬಳಿದ ಒಂದು ಕುಂಟು ನೆಪ ಹೇಳಿ ಚಾಲಕನ ಮೇಲೆ ದಂಡ ಪ್ರಯೋಗ ಮಾಡಿದ್ದಾರೆ.

ಅಂದು ಬಸ್‌ ಓಡಿಸಿದ್ದ ಚಾಲಕರು ಈಗ ಇಲ್ಲ ಮೃತಪಟ್ಟಿದ್ದಾರೆ. ಹೀಗಾಗಿ ಅಂದು ನಿರ್ವಾಹಕರಾಗಿ ಕಾರ್ಯ ನಿರ್ವಹಿಸಿದ್ದ ನಿರ್ವಾಹಕರು ಈಗ ಆ 12,200 ರೂ.ಗಳನ್ನು ದಂಡವಾಗಿ ಪಾವತಿ ಮಾಡಬೇಕು ಎಂದು ಬಿಎಂಟಿಸಿ ಉತ್ತರ ವಲಯ ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶಿಸಿದ್ದಾರೆ.

ಆದರೆ, ಇಲ್ಲಿ ನಿಜವಾಗಿಯೂ ದಂಡ ಕಟ್ಟಬೇಕಾದವರು ಸಂಬಂಧಪಟ್ಟ AWS ಮತ್ತು ಡಿಪೋ ವ್ಯವಸ್ಥಾಪಕರು. ಏಕೆಂದರೆ ಹೊಗೆ ತಪಾಸಣೆ ಪ್ರಮಾಣ ಪತ್ರದ ಅವಧಿ ಮುಗಿದಿರುವ ಬಸ್‌ಅನ್ನು ಡಿಪೋದಿಂದ ಹೊರಗೆ ಕಳುಹಿಸಿರುವುದು ಇವರುಗಳ ತಪ್ಪು. ಅದನ್ನು 7 ವರ್ಷದ ನಂತರ ಚಾಲಕರು ಮೃತಪಟ್ಟಿದ್ದಾರೆ, ಹೀಗಾಗಿ ನಿರ್ವಾಹಕರು ದಂಡದ ಮೊತ್ತವನ್ನು ಕಟ್ಟಬೇಕು ಎಂದರೆ ಇದು ಯಾವ ನ್ಯಾಯ?

ತಪ್ಪು ಮಾಡಿರುವ AWS ಮತ್ತು ಡಿಪೋ ವ್ಯವಸ್ಥಾಪಕರ ವಿರುದ್ಧ ಏಕೆ ಈ ಬಿಎಂಟಿಸಿ ಉತ್ತರ ವಲಯ ವಿಭಾಗೀಯ ನಿಯಂತ್ರಣಾಧಿಕಾರಿ ಕ್ರಮ ಕೈಗೊಂಡಿಲ್ಲ. ಅವರಿಂದ ವಸೂಲಿ ಮಾಡಬೇಕಾದ ದಂಡವನ್ನು ಯಾವುದೇ ತಪ್ಪು ಮಾಡದ ಒಬ್ಬ ಅಮಾಯಕ ನಿರ್ವಾಹಕನ ಮೇಲೆ ಹಾಕುವುದು ಸಂಸ್ಥೆಯ ಯಾವ ಕಾನೂನಿನಡಿ ಬರುತ್ತದೆ?

ಇದನ್ನು ನೋಡಿದರೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಬರಿ ರಬ್ಬರ್‌ಸ್ಟಾಂಪ್‌ಗಳಾಗಿ ಕೆಲಸ ಮಾಡುತ್ತಿದ್ದಾರಾ ಎಂಬ ಅನುಮಾನ ಮೂಡುತ್ತಿದೆ. ಜತೆಗೆ ಈ ಅಧಿಕಾರಿಗಳ ವಿರುದ್ಧ ಸಂಬಂಧಪಟ್ಟ ನಿರ್ವಾಹಕರು ನ್ಯಾಯಾಲಯದ ಮೊರೆ ಹೋದರೆ ಯಾರಿಗೆ ದಂಡ ಬೀಳುತ್ತದೆ ಎಂಬ ಅರಿವಾದರೂ ಇದೆಯೇ? ಏಕೆ ನೌಕರರನ್ನು ಈ ರೀತಿ ಕಿತ್ತು ತಿನ್ನುವ ರಣ ಹದ್ದುಗಳಾಗಿ ಕಾಡುತ್ತಿದ್ದಾರೆ ಈ ಅಧಿಕಾರಿಗಳು?

ತಪ್ಪು ಮಾಡಿದ ನೌಕರರಿಗೆ ದಂಡ ಹಾಕಿ ಸಂಸ್ಥೆಯ ಕಾನೂನಿನಡಿ ಶಿಕ್ಷೆ ವಿಧಿಸಿ ಅದಕ್ಕೆ ಯಾರು ಅಡ್ಡಿ ಬರುವುದಿಲ್ಲ. ಆದರೆ ಈ ರೀತಿ AWS ಮತ್ತು DM ಮಾಡಿದ ತಪ್ಪಿಗೆ ಒಬ್ಬ ಅಮಾಯಕ ಚಾಲಕನಿಗೆ ದಂಡಹಾಕಿದ್ದೀರಿ ಆತ ಮೃತಪಟ್ಟಿದ್ದಾನೆ ಎಂದು ಏನು ಮಾಡದ ಇನ್ನೊಬ್ಬ ನಿರಪರಾಧಿ ನಿರ್ವಾಹನ ಮೇಲೆ ದಂಡ ಪ್ರಯೋಗಕ್ಕೆ ಮುಂದಾಗಿದ್ದೀರಿ ಇದು ಎಷ್ಟು ಸರಿ. ನಾವು ಮಾಡುತ್ತಿರುವುದು ತಪ್ಪು ಎಂದು ನಿಮಗೆ ಅನಿಸುವುದೇ ಇಲ್ಲವಾ?

ನಾವು ಉನ್ನತ ಅಧಿಕಾರದಲ್ಲಿದ್ದೇವೆ ನಾವು ಮಾಡಿದ್ದೇ ಕಾನೂನು, ಹೇಳಿದ್ದೆ ನಿಯಮ ಎಂಬ ಮತ್ತಿನಲ್ಲಿ ತೇಲುತ್ತಿದ್ದೀರಾ? ಇಲ್ಲ ರೀ ಸಂವಿಧಾನದಲ್ಲಿ ಎಲ್ಲ ಹುದ್ದೆಗಳು, ಮನುಷ್ಯರಿಗೂ ಒಂದೆ ಕಾನೂನು ಅದನ್ನು ನಿಮ್ಮ ಇಷ್ಟ ಬಂದರೀತಿ ಬಳಸಿಕೊಂಡು ನೊಂದ ನೌಕರರ ಪ್ರಾಣಕ್ಕೆ ಏಕೆ ಸಂಚಕಾರ ತರುವಂತೆ ನಡೆದುಕೊಳ್ಳುತ್ತೀರಿ? ಇನ್ನಾದರೂ ಸಾರಿಗೆ ಅಡಿಪಾಯವಾಗಿರುವ ನೌಕರರನ್ನು ಗೌರವದಿಂದ ನಡೆಸಿಕೊಳ್ಳಿ ಇದು ಆಗ್ರಹವಲ್ಲ ನಮ್ಮ ಕಳಕಳಿಯ ಮನವಿ.

ಉತ್ತರ ವಲಯ ವಿಭಾಗೀಯ ನಿಯಂತ್ರಣಾಧಿಕಾರಿಗಳ ಆದೇಶ
ದಂಡ ವಸೂಲಿ ವಿಷಯಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಘಟಕ 45 ರಲ್ಲಿ ವಾಹನ ಸಂಖ್ಯೆ ಕೆಎ 01 ಎಫ್‌ 8999 ವಾಹನವು ಮಾರ್ಚ್‌ 16 – 2018 ರಂದು ವಾರ್ಷಿಕ ನವೀಕರಣಕ್ಕೆ ಕಳುಹಿಸಲಾಗಿದ್ದ ವಾಹನಕ್ಕೆ ಸಂಬಂಧಿಸಿದ ದಂಡ ಬಾಕಿ ಇರುವ ಕಾರಣ 2021ರ ವಾರ್ಷಿಕ ನವೀಕರಣ ಆಗಿರುವುದಿಲ್ಲ.

ಈ ಸಂಬಂಧ ಈ ವಾಹನವನ್ನು ಜಯನಗರದ ಆರ್‌ಟಿಒ ಅಧಿಕಾರಿಗಳು ಸೆಪ್ಟೆಂಬರ್‌ 23 – 2014ರಂದು ತಪಾಸಣೆ ಮಾಡಿದ್ದು, ಘಟಕ 32ರ ಚಾಲಕರಾಗಿದ್ದ ವೆಂಕಟಪ್ಪ ಬಿಲ್ಲೆ ಸಂಖ್ಯೆ 18,095 ಅವರು ಚಾಲನೆ ಮಾಡಿದ್ದರು. ಅವರು ನಿಗದಿತ ಸ್ಥಳದಲ್ಲಿ ವಾಹನ ನಿಲುಗಡೆ ಮಾಡದೆ ಇದ್ದ ಕಾರಣ ಆರ್‌ಟಿಒ ಅಧಿಕಾರಿಗಳು ದಾಖಲಾತಿಗಳನ್ನು ಪರಿಶೀಲಿಸಿದ್ದು ಹೊಗೆ ತಪಾಸಣೆ ಪ್ರಮಾಣ ಪತ್ರದ ಅವಧಿ ಮುಗಿದಿರುವ ಬಗ್ಗೆ ಹಾಗೂ ನಿಗದಿತ ಸ್ಥಳದಲ್ಲಿ ವಾಹನವನ್ನು ನಿಲುಗಡೆ ಮಾಡದೆ ಇದ್ದ ಕಾರಣ ಸಾರ್ವಜನಿಕರಿಗೆ ಹತ್ತಲು, ಇಳಿಯಲು ಅನಾನುಕೂಲ ಉಂಟಾಗಿದ್ದು ಸಂಚಾರ ನಿಯಮವನ್ನು ಉಲ್ಲಂಘಿಸಿರುವ ಬಗ್ಗೆ 12,200 ರೂ.ಗಳನ್ನು ದಂಡವಾಗಿ ವಿಧಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಚಾಲಕರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದ್ದು ಸದರಿ ದಿನದಂದು ನಿರ್ವಾಹಕರಾದ ಲಕ್ಷ್ಮಣ ಬಿಲ್ಲೆ ಸಂಖ್ಯೆ 8144 ಅವರು ಚಾಲಕರೊಂದಿಗೆ ಕಾರ್ಯನಿರ್ವಹಿಸಿದ್ದು ಈ ಚಾಲಕರು ನಿಗದಿತ ಸ್ಥಳದಲ್ಲಿ ನಿಲುಗಡೆ ಮಾಡಲು ಸೂಚಿಸಬೇಕಿತ್ತು ಆದರೆ, ಸೂಚಿಸಿದ ಕಾರಣ ಮೇಲಿನಂತೆ ವಿಧಿಸಿರುವ ದಂಡಕ್ಕೆ ಅವರು ಸಹ ಕಾರಣರಾಗಿದ್ದಾರೆ (ಪ್ರಸ್ತುತ ನಿರ್ವಾಹಕರು ಘಟಕ 32 ರಲ್ಲಿ ಇರುತ್ತಾರೆ).

ಆದ್ದರಿಂದ ಜಯನಗರದ ಆರ್‌ಟಿಒ ಅಧಿಕಾರಿಗಳು ಸಂಚಾರ ನಿಯಮವನ್ನು ಉಲ್ಲಂಘಿಸಿರುವ ಸಂಬಂಧ ವಿಧಿಸಿರುವ 12,200 ರೂಗಳನ್ನು ಸಂಬಂಧಪಟ್ಟವರಿಂದ ಪಾವತಿಸಿ ಕೊಳ್ಳಲು ವಿಭಾಗೀಯ ನಿಯಂತ್ರಣಾಧಿಕಾರಿಗಳು ಉತ್ತರ ವಲಯ ಆದೇಶಿಸಿರುತ್ತಾರೆ. ಅದರಂತೆ ಸಂಬಂಧಪಟ್ಟ ದಾಖಲಾತಿಗಳನ್ನು ಲಗತ್ತಿಸಿದ್ದು ಬಾಕಿ ದಂಡವನ್ನು ವಸೂಲಿ ಮಾಡಲು ತಿಳಿಸಿದ್ದಾರೆ.

Leave a Reply

error: Content is protected !!
LATEST
NWKRTC: ಹುಬ್ಬಳ್ಳಿ-ಧಾರವಾಡ ಹೈಕೋರ್ಟ್‌ ನಡುವೆ ಹೊಸ ಬಸ್‌ಗಳ ಸಂಚಾರ- ವಕೀಲರ ಮನವಿ ಸ್ಪಂದಿಸಿದ ಅಧಿಕಾರಿಗಳು ಡಿ.1ರಂದು ಲಾಲ್‌ಬಾಗ್‌ನಲ್ಲಿ ಇಪಿಎಸ್ ಪಿಂಚಿಣಿದಾರರ 83ನೇ ತಿಂಗಳ ಸಭೆ ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ