ಸ್ಕೊಪ್ಜೆ: ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ, 14 ಮಂದಿ ಸಾವು
ಸ್ಕೊಪ್ಜೆ (ಉತ್ತರ ಮೆಸಿಡೊನಿಯಾಗಣರಾಜ್ಯ ): ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಉತ್ತರ ಮೆಸಿಡೋನಿಯಾದ ಕೋವಿಡ್ ಆರೈಕೆ ಕೇಂದ್ರ ದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 14 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲ್ಕ ನ್ ದೇಶದ ವಾಯವ್ಯ ದಲ್ಲಿರುವ ಟೆಟೊವೊ ಪಟ್ಟ ಣದ ಕೋವಿಡ್ ಕೇಂದ್ರ ದಲ್ಲಿ ಬುಧವಾರ ರಾತ್ರಿ ಬಹುದೊಡ್ಡ ಅಗ್ನಿ ದುರಂತವೊಂದು ಸಂಭವಿಸಿದೆ. ಸ್ಫೋ ಟದಿಂದ ಸಂಭವಿಸಿರುವ ಈ ಅವಘಡದಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ರಧಾನಿ ಜೊರನ್ ಝಯೇವ್ ಟ್ವೀಟ್ ಮಾಡಿದ್ದಾರೆ.
ಈ ಅಗ್ನಿ ದುರಂತದಲ್ಲಿ 14 ಮಂದಿ ಸಾವನ್ನ ಪ್ಪಿ ದ್ದಾರೆ. ಸಾವಿನ ಪ್ರಮಾಣ ಹೆಚ್ಚಾ ಗುವ ಸಾಧ್ಯ ತೆ ಇದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಕಿ ಅವಘಡದಲ್ಲಿ ಮೃತಪಟ್ಟ ವರ ಗುರುತು ಪತ್ತೆಗಾಗಿ ಶವಪರೀಕ್ಷೆ ನಡೆಸುವಂತೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಗ್ಯ ಸಚಿವ ವೆಂಕೊ ಫಿಲಿಪ್ಸ್ ಸಂತ್ರ ಸ್ತ ಕುಟುಂಬಗಳಿಗೆ ಟ್ವೀಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.
ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಾ ಗಿ ಆಸ್ಪ ತ್ರೆಯಮುಂಭಾಗದಲ್ಲಿ ನಿರ್ಮಿಸಲಾಗಿದ್ದ ಮಾಡ್ಯುಲಾರ್ ಘಟಕಗಳು ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿವೆ.