NEWSನಮ್ಮರಾಜ್ಯರಾಜಕೀಯ

ಸಾರಿಗೆ ಸಚಿವರ ದಾರಿ ತಪ್ಪಿಸಲು ಹೊರಟ ಅಧಿಕಾರಿಗಳು: ಕೋರಿಕೆ ಮೇರೆಗೆ ಮರು ವರ್ಗಾವಣೆ ಮಾಡಿದ ಕೆಎಸ್‌ಆರ್‌ಟಿಸಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಏಪ್ರಿಲ್‌ನಲ್ಲಿ ನಡೆದ ಮುಷ್ಕರದ ವೇಳೆ ಏಕಾಏಕಿ ವರ್ಗಾವಣೆ ಮಾಡಿದ್ದ ಸಾರಿಗೆಯ ನಾಲ್ಕೂ ನಿಗಮಗಳ ಪೈಕಿ ಇಂದು (ಸೆ.14) ಕೆಎಸ್‌ಆರ್‌ಟಿಸಿಯು ತಾನು ಆಡಳಿತಾತ್ಮಕವಾಗಿ ವರ್ಗಾವಣೆ ಮಾಡಿದ್ದ ನೌಕರರನ್ನು ಮತ್ತೆ ಅದೇ ಸ್ಥಳಕ್ಕೆ ವರ್ಗಾವಣೆ ಮಾಡುವ ಬದಲು ಕೋರಿಕೆ ಮೇರೆಗೆ ವರ್ಗಾವಣೆ ಮಾಡಿರುವುದಾಗಿ ತಿಳಿಸಿದೆ.

ಆದರೆ, ಈ ವರ್ಗಾವಣೆಯಿಂದ ನೌಕರರ ಸೀನಿಯಾರಿಟಿ (ಸೇವಾ ಹಿರಿತನ) ಕಳೆದುಕೊಳ್ಳುವಂತೆ ಮಾಡುವ ಜತೆಗೆ ಒಂದು ರೀತಿ ಶಿಕ್ಷೆ ನೀಡಲು ನಿಗಮದ ಅಧಿಕಾರಿಗಳು ಹೊರಟಿದ್ದಾರೆ. ಸರ್ಕಾರ  ಮತ್ತು ಸಾರಿಗೆ ಸಚಿವರ ದಾರಿಯನ್ನು ಈ ಅಧಿಕಾರಿಗಳು ತಪ್ಪಿಸುತ್ತಿದ್ದಾರೆ ಎಂಬುವುದು ಈ ನಡೆಯಿಂದ ಸ್ಪಷ್ಟವಾಗುತ್ತಿದೆ.

ಸರ್ಕಾರ ಮತ್ತು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಮುಷ್ಕರದ ವೇಳೆ ದೂರದೂರುಗಳಿಗೆ ವರ್ಗಾವಣೆ ಮಾಡಿರುವ ನೌಕರರನ್ನು ಮತ್ತೆ ಅದೇ ಸ್ಥಳಕ್ಕೆ ವರ್ಗಾವಣೆ ಮಾಡುವುದಾಗಿ ನೌಕರರ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮನವಿ ಸಲ್ಲಿಸಿದ ವೇಳೆ ಭರವಸೆ ನೀಡಿದ್ದರು.

ಅದರಂತೆ ಇಂದು ಆರಂಭವೆಂಬಂತೆ ಮೊದಲನೆಯದಾಗಿ ದೂರದೂರುಗಳಿಗೆ ವರ್ಗಾವಣೆ ಮಾಡಲಾಗಿದ್ದ 137 ಕೆಎಸ್‌ಆರ್‌ಟಿಸಿ ನೌಕರರನ್ನು ವರ್ಗಾವಣೆ ಮಾಡಲಾಗಿದೆ. ಆದರೆ, ಇಲ್ಲಿ ಪ್ರಮುಖವಾಗಿ ಮುಷ್ಕರದ ವೇಳೆ ಆಡಳಿತಾತ್ಮಕವಾಗಿ ವರ್ಗಾವಣೆ ಮಾಡಲಾಗಿತ್ತು. ಇದರಿಂದ ನೌಕರರು ದೂರದೂರುಗಳಿಗೆ ಹೋಗಿ ಸೇವೆ ಸಲ್ಲಿಸಲು ಸಾಧ್ಯವಾಗದ ಕಾರಣ ಮತ್ತು ಏಕಾಏಕಿ ವರ್ಗಾವಣೆ ಮಾಡಿದ್ದರಿಂದ ತುಂಬ ಸಮಸ್ಯೆಗೆ ಸಿಲುಕಿಕೊಂಡಿದ್ದರು.

ಇದನ್ನೇ ನೆಪವಾಗಿಟ್ಟುಕೊಂಡ ಆಡಳಿತ ವರ್ಗ ಪ್ರಸ್ತುತ ಸರ್ಕಾರ ಮತ್ತು ಸಾರಿಗೆ ಸಚಿವರ ದಿಕ್ಕು ತಪ್ಪಿಸಿ ನೌಕರರನ್ನು ವರ್ಗಾವಣೆ ಮಾಡಿದ್ದೇವೆ ಎಂಬಂತೆ ಬಿಂಬಿಸಿಕೊಳ್ಳುತ್ತಿದೆ. ಆದರೆ, ಇದರ ಒಳಹೊಕ್ಕು ನೋಡಿದರೆ ಇಲ್ಲಿ ಕಣ್ಣೊರೆಸುವ ನಾಟಕವನ್ನು ನಿಗಮದ ಅಧಿಕಾರಿಗಳು ಮಾಡಿರುವುದು ಸ್ಪಷ್ಟವಾಗಿದೆ.

ಅಂದರೆ, ಯಾವುದೇ ವರ್ಗಾವಣೆಗೊಂಡಿರುವ ನೌಕರ ಕೋರಿಕೆ ಮೇರೆಗೆ ವರ್ಗಾವಣೆ ಬಯಸಿ ಈವರೆಗೂ ಒಂದೇ ಒಂದು ಅರ್ಜಿಯನ್ನು ಹಾಕಿಲ್ಲ. ಹಾಗಿದ್ದರೂ ಅಧಿಕಾರಿಗಳು ಇಂದು ಮಾಡಿರುವ ವರ್ಗಾವಣೆ ಅದೇಶದಲ್ಲಿ ನೌಕರರ ಕೋರಿಕೆ ಮೇರೆಗೆ ಮರು ವರ್ಗಾವಣೆ ಮಾಡಿದ್ದೇವೆ ಎಂದು 137 ನೌಕರರನ್ನು ವರ್ಗಾವಣೆ ಮಾಡಿದೆ. ಜತೆಗೆ ಈ ಹಿಂದೆ ಇದ್ದ ಘಟಕಗಳನ್ನು ಬಿಟ್ಟು ಅದೇ ವಿಭಾಗದ ಬೇರೆ ಬೇರೆ ಘಟಕಗಳಿಗೆ ಮರು ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದೆ.

ಇದು ಅಧಿಕಾರಿಗಳು ನೌಕರರನ್ನು ಇನ್ನಷ್ಟು ಹಿಂಸಿಸುವ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಇದರಿಂದ ನೌಕರರು ಇನ್ನಷ್ಟು ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಯಾತನೆ ಅನುಭವಿಸಬೇಕು ಎಂಬ ಉದ್ದೇಶ ಹೊಂದಿರುವುದು ಇಲ್ಲಿ ಸ್ಪಷ್ಟವಾಗಿದೆ.

ಕೋರಿಕೆ ಮೇರೆಗೆ ವರ್ಗಾವಣೆ ಎಂದರೇನು?: ಕೋರಿಕೆ ಮೇರೆಗೆ ವರ್ಗಾವಣೆ ಎಂದರೆ ಒಬ್ಬ ನೌಕರ 20 ವರ್ಷಗಳು ಸೇವೆ ಸಲ್ಲಿಸಿದ್ದರೂ, ಅವರ ಸೇವೆ ಪರಿಗಣನೆಗೆ ಬರುವುದಿಲ್ಲ. ಹೀಗಾಗಿ ಅವರಿಗೆ ಮುಂದಿನ ದಿನಗಳಲ್ಲಿ ಸೇವಾ ಹಿರಿತನದಲ್ಲಿ ಸಿಗಬೇಕಾದ ಬಡ್ತಿ ಸಿಗುವುದಿಲ್ಲ. ಇದರಿಂದ ಅವರು ತಮ್ಮ 20 ವರ್ಷದ ಅವಧಿಯಲ್ಲಿ ಸಲ್ಲಿಸಿದ ಸೇವೆ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ.

ಇದರ ಬದಲಿಗೆ ಮುಷ್ಕರದ ವೇಳೆ ಏನು ಆಡಳಿತಾತ್ಮಕವಾಗಿ ವರ್ಗಾವಣೆ ಮಾಡಿದ್ದಾರೋ ಅದೇ ರೀತಿ ಈಗಲೂ ಅವರನ್ನು ವರ್ಗಾವಣೆ ಮಾಡಬೇಕು. ಜತೆಗೆ ಅವರ ಮಾತೃ ಸ್ಥಳಕ್ಕೆ ಹಿಂದಿರುಗಿಸಬೇಕು ಎಂಬುವುದು ನೌಕರರ ಮನವಿಯಾಗಿದೆ.

ಕೋರಿಕೆ ಮೇರೆಗೆ ವರ್ಗಾವಣೆ ಮಾಡಬೇಕಾದರೆ ಇರುವ ನಿಯಮಗಳು ಅಧಿಕಾರಿಗಳಿಗೆ ತಿಳಿದಿಲ್ಲವೇ? ಅಥವಾ ನಾವು ಮಾಡಿದ್ದೇ ಕಾನೂನು ಎಂಬ ಭ್ರಮೆಯಲ್ಲಿ ಇನ್ನೂ ತೇಲುತ್ತಿದ್ದಾರೆಯೇ ಎಂಬುವುದು ಇಲ್ಲಿ ಗೌಣವಾಗಿಲ್ಲ.

ಇನ್ನು ಮುಷ್ಕರದ ವೇಳೆ ಏನು ಆಡಳಿತಾತ್ಮಕವಾಗಿ ವರ್ಗಾವಣೆ ಮಾಡಿದ್ದಾರೋ ಅದೇ ರೀತಿ ಈಗಲೂ ಅವರನ್ನು ವರ್ಗಾವಣೆ ಮಾಡಬೇಕು. ಜತೆಗೆ ಅವರ ಮಾತೃ ಸ್ಥಳಕ್ಕೆ ಹಿಂದಿರುಗಿಸಬೇಕು ಎಂಬುವುದು ನೌಕರರ ಮನವಿಯಾಗಿದೆ.

ಇನ್ನಾದರೂ ಇಂಥ ದಾರಿತಪ್ಪಿಸುವ ಕೆಲಸವನ್ನು ಬಿಟ್ಟು ಅಧಿಕಾರಿಗಳು ಒಂದು ಗಾಂಭೀರ್ಯದ ಚಿಂತನೆಯಡಿ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ಸರ್ಕಾರ ಮತ್ತು ಸಾರಿಗೆ ಸಚಿವರ ಜತೆಗೆ ನಿಗಮಗಳ ಗೌರವವನ್ನು ಕಾಪಾಡಿಕೊಂಡು ಹೋಗಬೇಕಿದೆ.

ಈ ರೀತಿ ಕೀಳು ಮಟ್ಟದ ನಡೆಯನ್ನು ಅಧಿಕಾರಿಗಳು ಬಿಡಬೇಕು. ಕಾರಣ ಇನ್ನೊಮ್ಮೆ ತಿಳಿಸುತ್ತಿದ್ದು, ಯಾವುದೇ ನೌಕರ ಕೋರಿಕೆ ಮೇರೆಗೆ ವರ್ಗಾವಣೆ ಮಾಡುವಂತೆ ಅರ್ಜಿ ಸಲ್ಲಿಸದಿದ್ದರೂ ನೀವೆ ಸ್ವಯಂಆಗಿ ಅರ್ಜಿ ಸಲ್ಲಿಸಿದ್ದಾರೆ ಎಂಬಂತೆ ವರ್ಗಾವಣೆ ಆದೇಶ ಮಾಡಿದ್ದೀರಿ. ಇದು ಕಾನೂನು ಬಾಹಿರವಲ್ಲವೇ? ಇನ್ನಾದರೂ ಆನೆ ನಡೆದಿದ್ದೇ ದಾರಿ ಎಂಬ ಭ್ರಮೆಯಿಂದ ಹೊರಬಂದು ಸಾಂವಿಧಾನಿಕವಾಗಿ ನಡೆದುಕೊಳ್ಳಬೇಕಿದೆ.

1 Comment

  • Namma nokararige buddi ella govt job antha serkondu ondu thara indirctage bikshe bedoo kelsa madtha edivi direct agi bikshe bedudre dinake lakha gatle sampadne madthivi adre edrali indirect agi bikshe bedathaedivi adrunu samsara sagisalu agtha ella edu kanri jeevana nam ksrtc noukari🙏

Leave a Reply

error: Content is protected !!
LATEST
ನ.3ರಂದುಇಪಿಎಸ್ ಪಿಂಚಿಣಿದಾರರ ಮಾಸಿಕ ಸಭೆ: ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTCಯ ಸಮಸ್ತ ನೌಕರರ ಸಮಸ್ಯೆ, ಅಸಮಾಧಾನದ ನಡುವೆಯೂ ಕನ್ನಡ ರಾಜ್ಯೋತ್ಸವ ಆಚರಣೆ ತುಂಬಾ ವಿಜೃಂಭಣೆ ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ