ನ್ಯೂಡೆಲ್ಲಿ: ಇದೇ ಮೊದಲ ಬಾರಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ದೇಶದ ವಿವಿಧ ವಿವಿಐಪಿಗಳನ್ನು ರಕ್ಷಿಸಲು ಮಹಿಳಾ ಸಿಬ್ಬಂದಿಗಳನ್ನೂ ನೇಮಕಮಾಡಲಿದೆ.
33 ಮಹಿಳಾ ಸಿಬ್ಬಂದಿ ಮೊದಲ ಬ್ಯಾಚ್‌ನ 10 ವಾರಗಳ ತರಬೇತಿ ಶೀಘ್ರದಲ್ಲೇ ಆರಂಭವಾಗಲಿದೆ. ಗೃಹ ಸಚಿವಾಲಯದಿಂದ ಅನುಮೋದನೆ ಪಡೆದ ನಂತರ ಅವರ ಆಯ್ಕೆಯನ್ನು ಕೆಲವು ದಿನಗಳ ಹಿಂದೆ ಮಾಡಲಾಗಿದೆ.
ಸಿಆರ್‌ಪಿಎಫ್‌ನಿಂದ ಮಹಿಳಾ ಸಿಬ್ಬಂದಿಯ ಬಲವನ್ನು ಹೆಚ್ಚಿಸುವ ಕ್ರಿಯಾ ಯೋಜನೆಯನ್ನು ಸಲ್ಲಿಸಲಾಗಿದೆ ಎಂದು ನ್ಯೂಸ್ 18 ವರದಿ ಮಾಡಿದೆ. ಆರಂಭದಲ್ಲಿ 6 ಪ್ಲಟೂನ್ ಮಹಿಳಾ ಸಿಬ್ಬಂದಿಯನ್ನು ಇದಕ್ಕಾಗಿ ಸಿದ್ಧತೆ ಮಾಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ನಿಯೋಜನೆಯನ್ನು ಅಗತ್ಯದ ಆಧಾರದ ಮೇಲೆ’ ಮಾಡಲಾಗುವುದು. ಆದರೆ ಕೆಲವು ಗಣ್ಯರು ಮೊದಲ ಬ್ಯಾಚ್‌ನಿಂದ ಮಹಿಳಾ ಭದ್ರತಾ ಸಿಬ್ಬಂದಿಯನ್ನು ಪಡೆಯುತ್ತಾರೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ, ಮುಂಬರುವ ಚುನಾವಣಾ ಋತುವಿನ ದೃಷ್ಟಿಯಿಂದ ಮಹಿಳಾ ವಿವಿಐಪಿಗಳು ಕೂಡ ಆದ್ಯತೆಯ ಮೇಲೆ ಇರುತ್ತವೆ. ಈ ಮಹಿಳಾ ಸಿಆರ್‌ಪಿಎಫ್ ಸಿಬ್ಬಂದಿ ಎಕೆ -47 ಗಳಂತಹ ದಾಳಿ ರೈಫಲ್‌ಗಳಿಗೆ ಫೈರಿಂಗ್ ತರಬೇತಿ ಪಡೆಯುತ್ತಾರೆ.
ಸಿಆರ್‌ಪಿಎಫ್ ಗೃಹ ಸಚಿವ ಅಮಿತ್ ಶಾ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರಂತಹ ಉನ್ನತ ಮಟ್ಟದ ಗಣ್ಯರಿಗೆ ಭದ್ರತೆ ಒದಗಿಸುತ್ತದೆ.
ಈ ನಿರ್ಧಾರಕ್ಕೆ ಪ್ರೇರಣೆ ಏನು?: ಪಶ್ಚಿಮ ಬಂಗಾಳ ಚುನಾವಣೆಯ ಸಮಯದಲ್ಲಿ ನಡೆದ ಹಿಂಸಾಚಾರ ನೋಡಿ , ಮುಂಬರುವ ಉತ್ತರ ಪ್ರದೇಶ ಚುನಾವಣೆಗೆ ಮುಂಚಿತವಾಗಿ ವಿವಿಐಪಿಗಳನ್ನು ರಕ್ಷಿಸಲು ಮಹಿಳೆಯರನ್ನು ಸೇರಿಸಿಕೊಳ್ಳುವ ಕೆಲಸಕ್ಕೆ ಆದ್ಯತೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
ಪಶ್ಚಿಮ ಬಂಗಾಳ ಚುನಾವಣೆಯ ಸಮಯದಲ್ಲಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಕೆಲವು ನಾಯಕರು ತಮ್ಮ ರ್ಯಾಲಿಗಳು ಮತ್ತು ರೋಡ್‌ಶೋಗಳಲ್ಲಿ ಹಲ್ಲೆಗೆ ಒಳಗಾಗಿದ್ದರು.
ಚುನಾವಣೆಯ ವೇಳೆ ಗಣ್ಯ ವ್ಯಕ್ತಿಗಳ ಮೇಲೆ ಇಂತಹ ದಾಳಿಗಳ ಭಯ ಇದೆ. ಐದು ರಾಜ್ಯಗಳಲ್ಲಿ ಮುಂದಿನ ವರ್ಷ ಫೆಬ್ರವರಿ-ಮಾರ್ಚ್ ನಲ್ಲಿ ಚುನಾವಣೆಗಳಿಗೆ ನಿಗದಿಯಾಗಿದೆ.
ಪ್ರಸ್ತುತ ದೇಶದಲ್ಲಿ ಅತಿ ಹೆಚ್ಚು ಗಣ್ಯರಿಗೆ ರಕ್ಷಣೆ ನೀಡುವ ಸಿಆರ್‌ಪಿಎಫ್‌ನಿಂದ ಯೋಜನೆಯನ್ನು ಕೋರಲಾಗಿದೆ ಎಂದು ಹೆಸರು ಹೇಳಿಚ್ಛಿದ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗೃಹ ವ್ಯವಹಾರಗಳ ಸಚಿವಾಲಯದಿಂದ ಅನುಮೋದನೆ ಪಡೆದ ನಂತರ, ಈ ಮಹಿಳಾ ಸಿಬ್ಬಂದಿಯನ್ನು ಸೇರಿಸುವ ಪ್ರಕ್ರಿಯೆ ಆರಂಭವಾಗಿದೆ. ಇದನ್ನು ಹಂತ-ಹಂತದ ರೀತಿಯಲ್ಲಿ ಮಾಡಲಾಗುತ್ತದೆ. ಆಯ್ದ ಮಹಿಳೆಯರಿಗೆ ಸಾಕಷ್ಟು ತರಬೇತಿ ನೀಡಲಾಗುತ್ತದೆ ಎಂದು ಹೆಸರು ಹೇಳಲು ಬಯಸದ ಹಿರಿಯ ಸಿಆರ್‌ಪಿಎಫ್ ಆಧಿಕಾರಿಯೊಬ್ಬರು ಹೇಳಿದ್ದಾರೆ.
ಸಿಆರ್‌ಪಿಎಫ್ ಮತ್ತು ತಕ್ಷಣದ ಭವಿಷ್ಯದ ಯೋಜನೆಗಳ ವಿವರಗಳನ್ನು ಪ್ರಸ್ತುತಪಡಿಸುತ್ತಿರುವಾಗ ಇತ್ತೀಚಿನ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರಿಗೆ ಡೈರೆಕ್ಟರ್ ಜನರಲ್ ಸಿಆರ್‌ಪಿಎಫ್ ಕುಲದೀಪ್ ಸಿಂಗ್ ಅವರು ಈ ಪ್ರಸ್ತಾಪವನ್ನು ನೀಡಿದ್ದಾರೆ. ಸೂಕ್ತ ಅನುಮೋದನೆ ಪಡೆದ ನಂತರ, ವಿವಿಐಪಿಗಳ ರಕ್ಷಣೆಗೆ ಮಹಿಳೆಯರನ್ನು ನೇಮಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.