Please assign a menu to the primary menu location under menu

NEWSದೇಶ-ವಿದೇಶಸಿನಿಪಥ

ಪತಿ ನಿಕ್​ ಜೋನಸ್​ ಜನ್ಮದಿನಕ್ಕೆ ಪ್ರಿಯಾಂಕಾ ಚೋಪ್ರಾ ಬೆಸ್ಟ್ ವಿಶ್​

ವಿಜಯಪಥ ಸಮಗ್ರ ಸುದ್ದಿ

ಮುಂಬೈ: ಎರಡು ಹೃದಯಗಳ ನಡುವೆ ನಿಜವಾಗಿ ಪ್ರೀತಿ ಚಿಗುರಿದರೆ ಅಲ್ಲಿ ಬೇರೆ ಯಾವುದೇ ನೆಪಗಳಿಗೆ ಜಾಗವೇ ಇರುವುದಿಲ್ಲ ಎಂಬುದಕ್ಕೆ ಬೆಸ್ಟ್​ ಉದಾಹರಣೆ ಎಂದರೆ ನಿಕ್​ ಜೋನಸ್​ ಮತ್ತು ಪ್ರಿಯಾಂಕಾ ಚೋಪ್ರಾ ಪ್ರೀತಿ.

ಅನ್ಯ ದೇಶ, ಭಿನ್ನ ಜನಾಂಗ, ಭಿನ್ನ ಧರ್ಮದವರಾದ ಈ ದಂಪತಿ ನಡುವೆ ವಯಸ್ಸಿನ ಅಂತರ ಕೂಡ ದೊಡ್ಡದಿದೆ. ಪ್ರಿಯಾಂಕಾಗೆ 39ರ ಪ್ರಾಯ. ಆದರೆ ಅವರ ಪತಿ ನಿಕ್​ ಜೋನಸ್​ಗೆ ಈಗಿನ್ನೂ 29 ವರ್ಷ.

29ನೇ ವಸಂತಕ್ಕೆ ಕಾಲಿಟ್ಟಿರುವ ಪತಿಗೆ ಪ್ರಿಯಾಂಕಾ ಚೋಪ್ರಾ ಮನಸಾರೆ ವಿಶ್​ ಮಾಡಿದ್ದಾರೆ. ಸೆ.16ರಂದು ನಿಕ್​ ಜನ್ಮದಿನವನ್ನು ಅವರು ಆಪ್ತವಾಗಿ ಸೆಲೆಬ್ರೇಟ್​ ಮಾಡಿದ್ದಾರೆ.

ನನ್ನ ಜನ್ಮದಿನಕ್ಕೆ ಪ್ರಿಯಾಂಕಾ ಸರ್ಪ್ರೈಸ್​ ನೀಡಿದಳು. ಅವಳೇ ಬೆಸ್ಟ್. ಪ್ರೀತಿ ತೋರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ನಿಕ್​ ಜೋನಸ್​ ಪೋಸ್ಟ್ ಮಾಡಿದ್ದಾರೆ. ಪತಿಯ ಫೋಟೋ ಹಂಚಿಕೊಂಡಿರುವ ಪ್ರಿಯಾಂಕಾ ಅವರು ಪ್ರೀತಿಯಿಂದ ವಿಶ್​ ಮಾಡಿದ್ದಾರೆ.

ನನ್ನ ಜೀವನದ ಪ್ರೀತಿ ನೀನು. ನಾನು ಕಂಡ ಅತ್ಯಂತ ಪ್ರೀತಿಪೂರ್ವಕ ವ್ಯಕ್ತಿಯಾದ ನಿನಗೆ ಜನ್ಮದಿನದ ಶುಭಾಶಯಗಳು. ಲವ್​ ಯೂ ಬೇಬಿ. ನೀನು ನೀನಾಗಿರುವುದಕ್ಕೆ ಧನ್ಯವಾದಗಳು ಎಂದು ಪ್ರಿಯಾಂಕಾ ಚೋಪ್ರಾ ಬರೆದುಕೊಂಡಿದ್ದಾರೆ.

ತಮ್ಮಿಬ್ಬರ ನಡುವೆ ಇರುವ ಪ್ರೀತಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಪ್ರಿಯಾಂಕಾ ಮತ್ತು ನಿಕ್ ಜೋನಸ್​ ಎಂದಿಗೂ ಮುಜುಗರ ಪಟ್ಟುಕೊಂಡಿಲ್ಲ. ಇಬ್ಬರೂ ಆಗಾಗಾ ತಮ್ಮ ಆತ್ಮೀಯ ಕ್ಷಣಗಳ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.

ಅವು ಕೆಲವೊಮ್ಮೆ ಅತಿ ಎನಿಸುವುದು ಕೂಡ ಉಂಟು. ಟ್ರೋಲ್​ ಆದ ಉದಾಹರಣೆ ಸಹ ಸಾಕಷ್ಟಿದೆ. ಹಾಗಿದ್ದರೂ ಅವರು ತಲೆಕೆಡಿಸಿಕೊಂಡಿಲ್ಲ. ಸಂಸಾರದ ಕೆಲವು ಖಾಸಗಿ ವಿಚಾರಗಳನ್ನು ಕೂಡ ಪ್ರಿಯಾಂಕಾ ಈ ಹಿಂದೆ ಹಂಚಿಕೊಂಡಿದ್ದರು.

ಬಾಲಿವುಡ್​ನಿಂದ ಕೊಂಚ ಅಂತರ ಕಾಯ್ದುಕೊಂಡಿರುವ ಪ್ರಿಯಾಂಕಾ ಚೋಪ್ರಾ ಅವರು ಈಗ ಹಾಲಿವುಡ್​ ಪ್ರಾಜೆಕ್ಟ್​ಗಳಲ್ಲಿ ಹೆಚ್ಚು ಬ್ಯುಸಿ ಆಗಿದ್ದಾರೆ. ಹಲವು ವೆಬ್​ ಸರಣಿಗಳಲ್ಲಿ ನಟಿಸುತ್ತಿದ್ದಾರೆ. ಮತ್ತೆ ಅವರು ಯಾವಾಗ ಬಾಲಿವುಡ್​ ಸಿನಿಮಾ ಒಪ್ಪಿಕೊಳ್ಳುತ್ತಾರೆ ಎಂಬ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳಿದ್ದಾರೆ.

ಶೂಟಿಂಗ್​ ಕಾರಣದಿಂದ ಪ್ರಿಯಾಂಕಾ ಚೋಪ್ರಾ ಇಂಗ್ಲೆಂಡ್​ಗೆ ತೆರಳಿದ್ದರು. ನಿಕ್​ ಜೋನಸ್​ ಹುಟ್ಟುಹಬ್ಬವನ್ನು ಆಚರಿಸುವ ಸಲುವಾಗಿ ಅವರು ಅಲ್ಲಿಂದ ಅಮೆರಿಕದ ವಿಮಾನ ಹತ್ತಿದ್ದಾರೆ. ಸಂಜೆ ಆಗುವುದರೊಳಗೆ ಪತಿಯನ್ನು ಬಂದು ಸೇರಿಕೊಂಡಿದ್ದಾರೆ.

ಅಲ್ಲಿಂದ ಬಂದು ತಮ್ಮ ಬರ್ತ್​ಡೇ ಆಚರಿಸಿರುವುದು ನಿಕ್​ಗೆ ಅಚ್ಚರಿ ನೀಡಿದೆ. ಹಾಗಾಗಿ ಅದನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Leave a Reply

error: Content is protected !!
LATEST
ಸಾರಿಗೆ ಅಧಿಕಾರಿಗಳು-ನೌಕರರ ಬೇಡಿಕೆಯಂತೆ ಸರಿ ಸಮಾನ ವೇತನ ಕೊಡಿ: BMS ತಾಕೀತು NWKRTC: ಹುಬ್ಬಳ್ಳಿ-ಧಾರವಾಡ ಹೈಕೋರ್ಟ್‌ ನಡುವೆ ಹೊಸ ಬಸ್‌ಗಳ ಸಂಚಾರ- ವಕೀಲರ ಮನವಿ ಸ್ಪಂದಿಸಿದ ಅಧಿಕಾರಿಗಳು ಡಿ.1ರಂದು ಲಾಲ್‌ಬಾಗ್‌ನಲ್ಲಿ ಇಪಿಎಸ್ ಪಿಂಚಿಣಿದಾರರ 83ನೇ ತಿಂಗಳ ಸಭೆ ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ