Please assign a menu to the primary menu location under menu

NEWSಕೃಷಿರಾಜಕೀಯ

ತರಾತುರಿಯಲ್ಲಿ ತಂಬಾಕು ಹರಾಜು ಪ್ರಕ್ರಿಯೆ ಆರಂಭ:ಸಂಸದ ಪ್ರತಾಪ್‌ ಸಿಂಹಗೆ ರೈತರಿಂದ ಘೇರಾವ್

ವಿಜಯಪಥ ಸಮಗ್ರ ಸುದ್ದಿ

ಪಿರಿಯಾಪಟ್ಟಣ: ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಗೆ ಶುಕ್ರವಾರ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲು ಬಂದ ಸಂಸದ ಪ್ರತಾಪ್ ಸಿಂಹ ಹಾಗೂ ಮಾಜಿ ಸಂಸದ ಸಿ.ಎಚ್.ವಿಜಯಶಂಕರ್‌ ಅವರನ್ನು ರೈತರು ತರಾಟೆಗೆ ತೆಗೆದುಕೊಂಡು ಘೇರಾವ್ ಮಾಡಿದ ಘಟನೆ ನಡೆದಿದೆ.

ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಸೆ.26 ರಂದು ಹರಾಜು ಪ್ರಕ್ರಿಯೆಯನ್ನು ಆರಂಭಿಸುವುದಾಗಿ ಮಂಡಳಿಯ ಅಧಿಕಾರಿಗಳು ಮಾಹಿತಿ ನೀಡಿದ್ದರೂ ಸಂಸದ ಪ್ರತಾಪ್ ಸಿಂಹ ಶುಕ್ರವಾರ ಬೆಳಗ್ಗೆ 7.30ಕ್ಕೆ ಹರಾಜು ಪ್ರಕ್ರಿಯೆ ಆರಂಭಿಸುವಂತೆ ತಂಬಾಕು ಮಂಡಳಿಯ ಅಧಿಕಾರಿಗಳಿಗೆ ತಾಕೀತು ಮಾಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹರಾಜು ಪ್ರಕ್ರಿಯೆಯನ್ನು ತರಾತುರಿಯಲ್ಲಿ ಆರಂಭಿಸಿದರು.

ಈ ಸಂದರ್ಭಕ್ಕಾಗಲೇ ಅನೇಕ ರೈತರು ಸಂಸದರನ್ನು ಮುತ್ತುವರೆದು ಆರಂಭದಲ್ಲಿ 185 ರೂ.ಗಳಿಗೆ ನಿಗದಿ ಮಾಡಿ ನಂತರದ ಬೇಲುಗಳಿಗೆ 182-183 ರೂ.ನಿಗದಿ ಮಾಡಿದಾಗ ಕೋಪಗೊಂಡ ರೈತರು ಸಂಸದ ಮತ್ತು ತಂಬಾಕು ಹರಾಜು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕುಪಿತಗೊಂಡ ಸಂಸದರು ಯಾವುದೇ ಪ್ರತ್ಯುತ್ತರವನ್ನು ನೀಡದೆ ಹರಾಜು ಪ್ರಕ್ರಿಯೆಯಿಂದ ಹೊರ ನಡೆದರು.

ನಂತರ ಮಾರುಕಟೆಯ ಹೊರಭಾಗದಲ್ಲಿ ರೈತರು ತಂಬಾಕು ಹರಾಜು ಪ್ರಕ್ರಿಯೆಯನ್ನು ಏಕೆ ತರಾತುರಿಯಲ್ಲಿ ಆರಂಬಿಸುತ್ತಿದ್ದೀರಾ, ಇಂದು ಹರಾಜು ಪ್ರಕ್ರಿಯೆ ಆಂಭಿಸುತ್ತಿರುವ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂದು ಸಂಸದರನ್ನು ಪ್ರಶ್ನಿಸಿದಾಗ ಕೋಪಗೊಂಡ ಪ್ರತಾಪ್ ಸಿಂಹ ಇಂದು ಶುಭ ಶುಕ್ರವಾರ ಅದಕ್ಕಾಗಿ ಇಂದೇ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ ಎಂದರು.

ಇದರಿಂದ ಉದ್ರಿಕ್ತಗೊಂಡ ರೈತರು ವೈಜ್ಞಾನಿಕ ಯುಗದಲ್ಲೂ ನಿಮಗೆ ಇಂಥ ಮೂಢನಂಬಿಕೆಗಳು ಬೇಕೆ, ನಿಮ್ಮ ಮೂಢನಂಬಿಕೆಯಿಂದ ರೈತರಿಗೆ ಹೊಟ್ಟೆ ತುಂಬುವುದಿಲ್ಲ, ಕಳೆದ ಎರಡು ವರ್ಷಗಳಿಂದ ಪ್ರವಾಹ ಮತ್ತು ಕೊರೊನಾ ಮಹಾಮಾರಿಗೆ ನಲುಗಿ ಈಗಾಗಲೇ ರೈತ ನೊಂದು ಹೋಗಿದ್ದಾನೆ.

ಇದರ ನಡುವೆ ಶುಂಠಿ, ಮುಸುಕಿನಜೋಳ, ಹೂವು, ಹಣ್ಣು, ತರಕಾರಿ ಬೆಳೆಗಳಿಗೆ ಸೂಕ್ತ ದರ ಸಿಗದೆ ನಲುಗಿ ಹೋಗಿದ್ದು ತಂಬಾಕಿನಿಂದಾದರೂ ಉತ್ತಮ ಬೆಲೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿರುವಾಗ ನೀವು ಅಧಿಕಾರಿಗಳು ಮತ್ತು ಖರೀದಿದಾರ ಕಂಪನಿಗಳ ಸಭೆ ನಡೆಸದೆ ಏಕಾಏಕಿ ತಂಬಾಕು ಹರಾಜು ಪ್ರಕ್ರಿಯೆ ಆರಂಭಿಸುತ್ತಿರುವುದು ಸೂಕ್ತವಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಇನ್ನು ಮೊದಲು ರೈತ ಮತ್ತು ಕಂಪನಿಗಳ ಸಭೆ ಕರೆಯಲು ಅಧಿಕಾರಿಗಳಿಗೆ ಸೂಚನೆ ನೀಡಿ ಎಂದಾಗ ಸಂಸದ ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆದು ಸಂಸದ ಅಲ್ಲಿಂದ ಕಾಲ್ಕಿತ್ತು ಕಾರನ್ನೇರಿ ಹೊರಟು ಹೋದರು.

ಇದಕ್ಕೂ ಮೊದಲು ತಂಬಾಕು ಹರಾಜು ಅಧೀಕ್ಷಕ ಮಾರಣ್ಣ ಅವರನ್ನು ಸಂಸದ ಪ್ರತಾಪ್ ಸಿಂಹ ತರಾಟೆಗೆ ತೆಗೆದುಕೊಂಡು ಈ ಅವಾಂತರಕ್ಕೆ ನೀವೆ ಕಾರಣ ಸ್ಥಳೀಯರು ಎಂದು ನಿಮಗೆ ಅವಕಾಶ ನೀಡಿದರೆ ನೀವು ಅಧಿಕಾರಿಯ ಕೆಲಸ ಮಾಡದೆ ರಾಜಕೀಯ ಮಾಡುತ್ತಿದ್ದೀರಾ? ನಿಮಗಿಂತ ಆಂಧ್ರದ ಅಧಿಕಾರಿಗಳನ್ನೇ ನಿಯೋಜನೆ ಮಾಡಿದರೆ ಸರಿಯಾಗುತ್ತದೆ ಎಂದು ಎಚ್ಚರಿಕೆ ನೀಡಿ ಹರಾಜು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಎಂದು ಹೇಳಿದರು. ನಂತರ ಫೋನ್‌ ಮೂಲಕ ಕರೆ ಮಾಡಿ ಹರಾಜು ಪ್ರಕ್ರಿಯೆ ಮುಂದುವರಿಸುವಂತೆ ಆದೇಶ ಮಾಡಿದರು.

ಈ ಸಂದರ್ಭದಲ್ಲಿ ಗುಂಟೂರು ಶಾಸಕ ಮುಸ್ತಫಾ, ಮಾಜಿ ಸಂಸದ ವಿಜಯಶಂಕರ್, ತಂಬಾಕು ಮಂಡಳಿಯ ಚೇರ್ಮನ್ ರಘುನಾಥ್ ಬಾಬು, ಮೈಮುಲ್ ಅಧ್ಯಕ್ಷ ಪ್ರಸನ್ನ, ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ಮಾರಣ್ಣ, ಹರಾಜು ಅಧೀಕ್ಷಕ ಅಮಲ್ ಡಿ. ಶಾಮ್, ಪ್ರಭಾಕರನ್, ಸಿದ್ದರಾಜು, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಲೋಕೇಶ್‌ರಾಜೇ ಅರಸ್, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಎಚ್.ಸಿ.ವೀರಭದ್ರ, ಬೆಮ್ಮತ್ತಿಚಂದ್ರು, ಮುಖಂಡರಾದ ಶಿವರಾಮೇಗೌಡ, ಜಯಶಂಕರ್, ಕೌಲನಹಳ್ಳಿ ಸೋಮಶೇಖರ್, ಆರ್.ಟಿ. ಸತೀಶ್, ಬಿ.ವಿ.ಜವರೇಗೌಡ, ಚೌತಿಶಂಕರ್, ಕಗ್ಗುಂಡಿ ಶಿವರಾಂ, ಈಚೂರು ಲೋಕೇಶ್, ಪ್ರಕಾಶ್‌ರಾಜ್‌ ಅರಸ್ ಹಾಜರಿದ್ದರು.

Leave a Reply

error: Content is protected !!
LATEST
ಸಾರಿಗೆ ಅಧಿಕಾರಿಗಳು-ನೌಕರರ ಬೇಡಿಕೆಯಂತೆ ಸರಿ ಸಮಾನ ವೇತನ ಕೊಡಿ: BMS ತಾಕೀತು NWKRTC: ಹುಬ್ಬಳ್ಳಿ-ಧಾರವಾಡ ಹೈಕೋರ್ಟ್‌ ನಡುವೆ ಹೊಸ ಬಸ್‌ಗಳ ಸಂಚಾರ- ವಕೀಲರ ಮನವಿ ಸ್ಪಂದಿಸಿದ ಅಧಿಕಾರಿಗಳು ಡಿ.1ರಂದು ಲಾಲ್‌ಬಾಗ್‌ನಲ್ಲಿ ಇಪಿಎಸ್ ಪಿಂಚಿಣಿದಾರರ 83ನೇ ತಿಂಗಳ ಸಭೆ ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ