CrimeNEWSನಮ್ಮರಾಜ್ಯ

KSRTC ಚಾಲಕ ನಿಂಗಪ್ಪ ಆತ್ಮಹತ್ಯೆಗೆ ಕಾರಣರಾದ ಅಧಿಕಾರಿಗಳ ಅಮಾನತಿಗೆ ವಕೀಲ ಶಿವರಾಜು ಆಗ್ರಹ 

 ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಪರಿಸರ ವಿಭಾಗ ನಿರ್ದೇಶಕ ಟಿ. ವೆಂಕಟೇಶ್ ಹೇಳಿದ್ದೇನು?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ 3ನೇ ಘಟಕದ ಚಾಲಕ ಕಂ ನಿರ್ವಾಹಕ ನಿಂಗಪ್ಪ ಆತ್ಮಹತ್ಯೆ ಮಾಡಿಕೊಂಡಿರುವ ಸಂಬಂಧ ಮೂವರು ಮೇಲಧಿಕಾರಿಗಳ ವಿರುದ್ಧ ಐಪಿಸಿ ಸಕ್ಷನ್ 306ರಡಿ (ಆತ್ಮಹತ್ಯೆಗೆ ಪ್ರಚೋದನೆ) ಎಫ್‌ಐಆರ್‌ ದಾಖಲಾಗಿದ್ದು, ಕೂಡಲೇ ಆ ಮೂವರು ಆರೋಪಿಗಳನ್ನು ಅಮಾನತು ಮಾಡಬೇಕು ಎಂದು ಸುಪ್ರೀಂಕೋರ್ಟ್‌ ಹಾಗೂ ಹೈ ಕೋರ್ಟ್‌ ವಕೀಲ ಶಿವರಾಜ ಆಗ್ರಹಿಸಿದ್ದಾರೆ.

ಏನೂ ತಪ್ಪನ್ನೇ ಮಾಡದ ಅಮಾಯಕ ಸಾರಿಗೆಯ ಸಾವಿರಾರು ನೌಕರರನ್ನು ಏಕಾಏಕಿ ಎಫ್‌ಐಆರ್‌ ದಾಖಲಿಸಿ, ಎಫ್‌ಐಆರ್‌ ಆಗಿದೆ ಎಂಬುದನ್ನು ಪ್ರಮುಖವಾಗಿ ಇಟ್ಟುಕೊಂಡು ಅಮಾನತು, ವಜಾ, ವರ್ಗಾವಣೆ ಮಾಡಲಾಗಿದೆ.

ಆದರೆ, ಸೋಮವಾರ (ಸೆ.27) ನಿಂಗಪ್ಪ ಅವರು ಮಂಗಳೂರಿನ ಕುಂಟಿಕಾನ ಬಳಿಯ ಬಾಡಿಗೆ ‌ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಆತ್ಮಹತ್ಯೆಗೆ ಕೆಎಸ್‌ಆರ್‌ಟಿಸಿ ಡಿಸಿ ಅರುಣ್ ಕುಮಾರ್, ಡಿಟಿಒ ಕಮಲಾಕರ್ ಮತ್ತು ಟಿಸಿ ನಂದಕುಮಾರ್ ಅವರೇ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಈ ಮೂವರು ಅಧಿಕಾರಿಗಳ ವಿರುದ್ಧ ಉರ್ವಾ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ಕೂಡ ದಾಖಲಾಗಿದೆ.

ಹೀಗಾಗಿ ಸಂಸ್ಥೆಯಲ್ಲಿ ಅಧಿಕಾರಿಗಳೇ ವಿವಿಧ ಪೊಲೀಸ್‌ ಠಾಣೆಗಳಲ್ಲಿ ನೌಕರರ ವಿರುದ್ಧ ಎಫ್‌ಐಆರ್‌ ಮಾಡಿಸಿ ಬಳಿಕ ಅವರನ್ನು ಅಮಾನತು ಮತ್ತು ವರ್ಗಾವಣೆ ಶಿಕ್ಷೆ ನೀಡಿದ, ಅದೇ ರೀತಿಯಲ್ಲೇ ಈ ಅಧಿಕಾರಿಗಳನ್ನು ನಾಳೆ (ಸೆ.29) ಸಂಜೆಯೊಳಗೆ ಅಮಾನತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು ಆತ್ಮಹತ್ಯೆಗೆ ಪ್ರಚೋದನೆ ಮಾಡಿರುವ ಆರೋಪದಡಿ ಎಫ್‌ಐಆರ್‌ ಕೂಡ ಈ ಅಧಿಕಾರಿಗಳ ವಿರುದ್ಧ ದಾಖಲಾಗಿದೆ, ಆದ್ದರಿಂದ ಕೂಡಲೇ ಈ ಮೂವರು ಅಧಿಕಾರಿಗಳನ್ನು ಅಮಾನತು ಮಾಡಬೇಕು. ಒಂದು ವೇಳ ನಾಳೆ ಸಂಜೆಯೊಳಗೆ  ಈ ಆರೋಪಿಗಳ ವಿರುದ್ಧ ಕ್ರಮ ಜರುಗಿಸದೇ ಹೋದರೆ ಸೆ. 30ರಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವ ಮೂಲಕ ಜೀವವನ್ನೇ ಕಳೆದುಕೊಂಡಿರುವ ನೌಕರನ ಆತ್ಮಕ್ಕೆ ಮತ್ತು ಕುಟುಂಬದವರಿಗೆ ನ್ಯಾಯ ಒದಗಿಸಿಕೊಡಲು ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವರಲ್ಲಿ  ಮನವಿ ಸಲ್ಲಿಸಲಾಗುವುದಾಗಿ ಹೇಳಿದ್ದಾರೆ.

ಇನ್ನು ಕೆಎಸ್‌ಆರ್‌ಟಿಸಿ ನೌಕರ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ರಾಮವಡಗಿ ಗ್ರಾಮದ ನಿಂಗಪ್ಪ ಅವರ ಆತ್ಮಹತ್ಯೆ ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯಬೇಕಾದರೆ ಈ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲೇ ಬೇಕು.

ಒಂದು ವೇಳೆ ಈ ಮೂವರು ಅಧಿಕಾರಿಗಳು ಅದೇ ವಿಭಾಗದಲ್ಲಿ ಕರ್ತವ್ಯ ಮುಂದುವರಿಸಿದರೆ ಪ್ರಕರಣ ಸಂಬಂಧ ಸಾಕ್ಷ್ಯಗಳನ್ನು ನಾಶಪಡಿಸುವ ಮತ್ತು ಸಾಕ್ಷಿಗಳನ್ನು ಎದುರಿಸುವ ಕೆಲಸ ಮಾಡಬಹುದು ಎಂಬ ಆತಂಕವಿದೆ ಎಂದು ಗೃಹ ಸಚಿವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ವಕೀಲ ಶಿವರಾಜು ತಿಳಿಸಿದ್ದಾರೆ.

 ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ 3ನೇ ಘಟಕದ ಚಾಲಕ ಕಂ ನಿರ್ವಾಹಕ ನಿಂಗಪ್ಪ ಆತ್ಮಹತ್ಯೆ ಪ್ರಕರಣ ಸಂಬಂಧ ಉರ್ವಾ ಪೊಲೀಸ್‌ ಠಾಣೆಯಲ್ಲಿ ಕೆಎಸ್ಸಾರ್ಟಿಸಿ ಡಿಸಿ ಅರುಣ್ ಕುಮಾರ್, ಡಿಟಿಒ ಕಮಲಾಕರ್ ಮತ್ತು ಟಿಸಿ ನಂದಕುಮಾರ್ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಈ ಸಂಬಂಧ ನಮ್ಮ ಭದ್ರತಾ ಮತ್ತು ಜಾಗ್ರತಾಧಿಕಾರಿಗಳಿಂದ ಇಂದು (ಸೆ.28)  ವರದಿ ತರಿಸುತ್ತಿದ್ದೇವೆ. ಆ ವರದಿ ಇಂದು ಸಂಜೆಯೊಳಗೆ ಬರಲಿದೆ. ಆ ವರದಿ ನೋಡಿಕೊಂಡು ನಾಳೆ ಮುಂದಿನ ಕ್ರಮವನ್ನು ಆ ಅಧಿಕಾರಿಗಳ ವಿರುದ್ಧ ಜರುಗಿಸಲಾಗುಯವುದು.

l ಟಿ. ವೆಂಕಟೇಶ್, ನಿರ್ದೇಶಕರು, ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಪರಿಸರ ವಿಭಾಗ      

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...