NEWSನಮ್ಮರಾಜ್ಯರಾಜಕೀಯ

ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್‌ನಿಂದ 20 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ – ಕುಟುಂಬಕ್ಕೂ ಹೊಸಬರಿಗೂ ಮಣೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವಿಧಾನ ಪರಿಷತ್ನ ಸ್ಥ ಳೀಯ ಸಂಸ್ಥೆ ಗಳ 20 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಹಾಲಿ ಸದಸ್ಯ ರಲ್ಲಿ ನಾಲ್ವರಿಗೆ ಮಾತ್ರ ಟಿಕೆಟ್ ನೀಡಲಾಗಿದೆ. ಅದರ ಜತೆಯಲ್ಲೇ ಟಿಕೆಟ್ ಹಂಚಿಕೆಯಲ್ಲಿ ಕುಟುಂಬ ರಾಜಕಾರಣದ ನಂಟು ಮುಂದುವರಿದಿದೆ.

ಪರಿಷತ್ನ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಅವರ ಹೆಸರು ಪಟ್ಟಿ ಯಲ್ಲಿಲ್ಲ . ವಿಜಯಪುರ– ಬಾಗಲಕೋಟೆ ದ್ವಿ ಸದಸ್ಯ ಕ್ಷೇ ತ್ರ ಕ್ಕೆ ಒಂದು ಅಭ್ಯ ರ್ಥಿಯನ್ನು ಮಾತ್ರ ಪ್ರ ಕಟಿಸಿದ್ದು , ಹಾಲಿ ಸದಸ್ಯ ಸುನೀಲ ಗೌಡ ಪಾಟೀಲರಿಗೆ ಮತ್ತೆ ಅವಕಾಶ ನೀಡಲಾಗಿದೆ. ಇವರು ವಿಜಯಪುರ ಶಾಸಕ ಎಂ.ಬಿ. ಪಾಟೀಲರ ತಮ್ಮ.

25 ಕ್ಷೇ ತ್ರ ಗಳಿಗೆ ಚುನಾವಣೆ ನಡೆಯುತ್ತಿದೆ. ಎಂಟು ಕ್ಷೇ ತ್ರ ಗಳಿಗೆ ಕಾಂಗ್ರೆಸ್ ಇನ್ನೂ ಅಭ್ಯ ರ್ಥಿಗಳನ್ನು ಪ್ರ ಕಟಿಸಿಲ್ಲ. ವಿಧಾನ ಪರಿಷತ್ನ ಹಾಲಿ ಸದಸ್ಯ ರಾದ ಎಸ್. ರವಿ, ಬಳ್ಳಾ ರಿಯ ಕೆ.ಸಿ. ಕೊಂಡಯ್ಯ ಮತ್ತು ಶಿವಮೊಗ್ಗದ ಆರ್. ಪ್ರಸನ್ನ ಕುಮಾರ್ ಅವರಿಗೆ ಮತ್ತೆ ಸ್ಪರ್ಧೆಗೆ ಅವಕಾಶ ನೀಡಲಾಗಿದೆ.

ಎಸ್.ರವಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸೋದರ ಸಂಬಂಧಿ. ಮತ್ತೆ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿದ್ದ ಮೈಸೂರಿನ ಆರ್. ಧರ್ಮಸೇನ ಅವರಿಗೆ ಟಿಕೆಟ್  ಕೈ ತಪ್ಪಿದೆ. ಜಿಲ್ಲಾ ಆರೋಗ್ಯಾ ಧಿಕಾರಿಯಾಗಿ ನಿವೃತ್ತರಾಗಿರುವ ಡಾ.ಡಿ. ತಿಮ್ಮಯ್ಯ ಅವರಿಗೆ ಅವಕಾಶ ನೀಡಲಾಗಿದೆ.

ರಾಯಚೂರು ಕ್ಷೇ ತ್ರ ದಲ್ಲಿ ಕುಷ್ಟ ಗಿ ವಿಧಾನಸಭಾ ಕ್ಷೇ ತ್ರ ದ ಶಾಸಕ ಅಮರೇಗೌಡ ಬಯ್ಯಾ ಪುರ ಅವರ ಸಹೋದರನ ಮಗ ಶರಣ ಗೌಡ ಅನ್ನ ದಾನ ಗೌಡ ಪಾಟೀಲ, ಬೆಳಗಾವಿ ಕ್ಷೇ ತ್ರ ದಲ್ಲಿ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇ ತ್ರ ದ ಶಾಸಕಿ ಲಕ್ಷ್ಮಿ ಹೆಬ್ಬಾ ಳಕರ ಅವರ ತಮ್ಮ ಚನ್ನ ರಾಜ ಹಟ್ಟಿ ಹೊಳಿಗೆ ಟಿಕೆಟ್ ಘೋಷಿಸಲಾಗಿದೆ.

ಹುಬ್ಬಳ್ಳಿ –ಧಾರವಾಡ–ಗದಗ–ಹಾವೇರಿ ಕ್ಷೇ ತ್ರ ದಲ್ಲಿ ಕೆಪಿಸಿಸಿ ಕಾರ್ಯಾಧ್ಯ ಕ್ಷ ಸಲೀಂ ಅಹ್ಮದ್ ಅವರನ್ನೇ ಕಣಕ್ಕಿ ಳಿಸಲಾಗುತ್ತಿದೆ. ಚಿಕ್ಕಮಗಳೂರಿನಲ್ಲಿ ಒಮ್ಮೆ ಪರಿಷತ್ ಸದಸ್ಯ ರಾಗಿದ್ದು , ಹಿಂದಿನ ಬಾರಿಸೋತಿದ್ದ ಗಾಯತ್ರಿ ಶಾಂತೇಗೌಡ ಅವರಿಗೆ ಮತ್ತೆ ಸ್ಪ ರ್ಧೆಗೆ ಅವಕಾಶ ನೀಡಲಾಗಿದೆ.

ತುಮಕೂರು ಕ್ಷೇತ್ರದಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರ ಮಗ ಆರ್. ರಾಜೇಂದ್ರ ಕಣಕ್ಕಿಳಿಯಲಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಇವರು ಸೋತಿದ್ದರು.

ಕಾಂಗ್ರೆಸ್‌ನಲ್ಲಿ ಶಾಸಕರಾಗಿದ್ದು , ನಂತರ ಬಿಜೆಪಿ ಸೇರಿರುವ ಹಾಸನದ ಎ. ಮಂಜು ಅವರ ಮಗ ಡಾ. ಮಂಥರ್ ಗೌಡ ಅವರಿಗೆ ಕೊಡಗು ಕ್ಷೇತ್ರದ ಟಿಕೆಟ್‌ ದೊರಕಿದೆ. ಸಚಿವ ಎಸ್.ಟಿ. ಸೋಮಶೇಖರ್ ವಿಶೇಷಾಧಿಕಾರಿಯಾಗಿದ್ದ ಎಂ.ಜಿ.ಗೂಳಿಗೌಡ (ದಿನೇಶ್ ಗೂಳಿಗೌಡ) ಅವರನ್ನು ಮಂಡ್ಯದಲ್ಲಿ ಅಭ್ಯ ರ್ಥಿಯಾಗಿ ಕಣಕ್ಕಿಳಿಸಲಾಗುತ್ತಿದೆ.

ಪಕ್ಷಕ್ಕೆ ದುಡಿದವರಿಗೆ ಅವಕಾಶ: ಅಭ್ಯ ರ್ಥಿಗಳ ಆಯ್ಕೆಯಲ್ಲಿ ವೈಯಕ್ತಿಕ ತೀರ್ಮಾನವಿಲ್ಲ. ಪಕ್ಷದ ವರಿಷ್ಠ ರು ಮತ್ತು ರಾಜ್ಯ ಮುಖಂಡರು ಸಮಾಲೋಚಿಸಿ, ಪಕ್ಷಕ್ಕಾಗಿ ದುಡಿದವರಿಗೆ ಅವಕಾಶ ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯ ಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಅಭ್ಯರ್ಥಿಗಳ ಪಟ್ಟಿ ಪ್ರಕಟವಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಸ್.ಆರ್. ಪಾಟೀಲ ಅವರನ್ನು ಕಡೆಗಣಿಸಲಾಗಿದೆ ಎಂಬುದು ಸರಿಯಲ್ಲ. ಅವರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಬೇರೆ ಕಾರ್ಯಸೂಚಿ ಪಕ್ಷದ ಮುಂದೆ ಇದೆ ಎಂದರು.

ಸ್ಥಳೀಯ ಮುಖಂಡರ ವಿರೋಧದ ನಡುವೆಯೂ ಕೆ.ಸಿ. ಕೊಂಡಯ್ಯ ಅವರಿಗೆ ಟಿಕೆಟ್ ನೀಡಲಾಗಿದೆ ಎಂಬ ಆರೋಪವೂ ಆಧಾರರಹಿತ. ಕೆಲವು ಮುಖಂಡರು ಹಾಗೆ ಹೇಳಿರಬಹುದು. ಆದರೆ, ಎಲ್ಲ ಮುಖಂಡರ ಅಭಿಪ್ರಾಯ ಆಲಿಸಿ ತಿರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಗಳಿಸುವ ನಿರೀಕ್ಷೆ ಇದೆ. ಪಕ್ಷದ ಸ್ಥ ಳೀಯಮುಖಂಡರು ಮತ್ತು ಮತದಾರರ ಅಪೇಕ್ಷೆಯಂತೆ ಹೊಸಬರಿಗೆ ಸ್ಪರ್ಧೆಗೆ ಅವಕಾಶ ನೀಡಲಾಗಿದೆ ಎಂದರು.

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...