ಮುಂಬೈ: ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎಂಎಸ್ಆರ್ಟಿಸಿ) ನೌಕರರು ಕಳೆದ 27 ದಿನಗಳಿಂದ ಮುಷ್ಕರ ನಡೆಸುತ್ತಿದ್ದರೂ ಸರ್ಕಾರ ಬೇಡಿಕೆ ಈಡೇರಿಸಲು ಇನ್ನೂ ಮೀನಮೇಷ ಎಣಿಸುತ್ತಿರುವುದಕ್ಕೆ ಆಕ್ರೋಧಗೊಂಡ ನಾಲ್ಕೈದು ಜನಶಕ್ತಿ ಸಂಘಟನೆ ಕಾರ್ಯಕರ್ತರು ಮಂಗಳವಾರ ರಾಜ್ಯ ಸಾರಿಗೆ ಸಚಿವ ಅನಿಲ್ ಪರಬ್ ಅವರ ಅಧಿಕೃತ ನಿವಾಸಕ್ಕೆ ಕಪ್ಪು ಬಣ್ಣ ಬಳಿಯುವ ಮೂಲಕ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ.
ಸುದ್ದಿ ಸಂಸ್ಥೆ ANI ಹಂಚಿಕೊಂಡ ವಿಡಿಯೋ ಕ್ಲಿಪ್ ಪ್ರಕಾರ ಇದೇ ವೇಳೆ ಸ್ಥಳದಲ್ಲೇ ಇದ್ದ ಪೊಲೀಸರು ಜನಶಕ್ತಿ ಸಂಘಟನೆಯ ಕಾರ್ಯಕರ್ತರನ್ನು ಪರಬ್ ಅವರ ಮನೆಯ ಆವರಣದಲ್ಲೇ ಬಂಧಿಸಿದ್ದಾರೆ.
ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರು ಸೋಮವಾರ ಪರಬ್, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಎಂಎಸ್ಆರ್ಟಿಸಿ ಅಧಿಕಾರಿಗಳೊಂದಿಗೆ ಮುಷ್ಕರ ನಿರತ ಕಾರ್ಮಿಕರ ಬೇಡಿಕೆಗಳ ಕುರಿತು ಚರ್ಚಿಸಲು ಸಭೆ ನಡೆಸಿದ ನಂತರ ಕಾರ್ಯಕರ್ತರು ಸಿಟ್ಟಿಗೆದ್ದಿರುವುದನ್ನು ನೋಡಿದರೆ ನೌಕರರ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಇನ್ನೊಂದೆಡೆ ವರದಿಗಳ ಪ್ರಕಾರ, ಕಾರ್ಮಿಕರ ಬೇಡಿಕೆಗಳು ಮತ್ತು ಜನರ ಅನುಕೂಲಕ್ಕಾಗಿ ಪರಿಹಾರ ಕಂಡುಕೊಳ್ಳುವ ಬಗ್ಗೆ ಸಭೆಯಲ್ಲಿ ಗಂಬೀರ ಚರ್ಚೆ ನಡೆಸಲಾಗಿದೆ ಎಂದು ಪರಬ್ ಹೇಳಿದರು.
MSRTC ನೌಕರರ ಮುಷ್ಕರವು ಅಕ್ಟೋಬರ್ 27 ರಿಂದ ಮುಂದುವರಿದಿದೆ. ಈ ನಡುವೆ ಎರಡು ವಾರಗಳ ಹಿಂದೆ ಹಿಂದೂಸ್ತಾನ್ ಟೈಮ್ಸ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ರಾಜ್ಯ ಸಾರಿಗೆ ನಿಗಮವು ₹ 126.49 ಕೋಟಿಗಳಷ್ಟು ನಷ್ಟವನ್ನು ಅನುಭವಿಸಿದೆ ಎನ್ನಲಾಗಿದೆ.
ಮುಷ್ಕರ ನಿರತ ಸಂಘಗಳು ತಮ್ಮ ಸಂಬಳ ಪಾವತಿಯಲ್ಲಿ ವಿಳಂಬ ಮತ್ತು ಕಳೆದ ಒಂದು ವರ್ಷದಲ್ಲಿ ಹಲವಾರು ಸಿಬ್ಬಂದಿ ಆತ್ಮಹತ್ಯೆಯಿಂದ ಮಾಡಿಕೊಂಡಿದ್ದರೂ ನಿಗಮದ ಅಧಿಕಾರಿಗಳು ನಮಗೆ ಸ್ಪಂದಿಸುತ್ತಿಲ್ಲ. ಈಗಾಗಿ ನಾವು ಮಾಡು ಇಲ್ಲಲೇ ಮಡಿ ಎಂಬ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ.
ವೇತನ ಹೆಚ್ಚಳ, ಎಂಎಸ್ಆರ್ಟಿಸಿಯನ್ನು ಮಹಾರಾಷ್ಟ್ರ ಸರ್ಕಾರದೊಂದಿಗೆ ವಿಲೀನಗೊಳಿಸಬೇಕು, ತುಟ್ಟಿಭತ್ಯೆ ಮತ್ತು ಮನೆ ಬಾಡಿಗೆ ಭತ್ಯೆಗಳನ್ನು ಹೆಚ್ಚಿಸಬೇಕು ಎಂಬುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನಿ ಈಡೇರಿಸಲು ಮುಷ್ಕರ ನಿರತ ನೌಕರರು ಒತ್ತಾಯಿಸುತ್ತಿದ್ದಾರೆ.
ಏತನ್ಮಧ್ಯೆ, ಬಾಂಬೆ ಹೈಕೋರ್ಟ್ ಪ್ರತಿಭಟನಾನಿರತ ಎಂಎಸ್ಆರ್ಟಿಸಿ ನೌಕರರಿಗೆ ರಾಜ್ಯದ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರಿಗೆ ಉಂಟಾದ ಕಿರಿಕಿರಿಯನ್ನು ಪರಿಗಣಿಸುವಂತೆ ನಿರ್ದೇಶನ ನೀಡಿದೆ.
ನ್ಯಾಯಾಲಯವು ರಚಿಸಿರುವ ತ್ರಿಸದಸ್ಯ ಸಮಿತಿಯನ್ನು ಭೇಟಿ ಮಾಡಲು ಮತ್ತು ಮುಂದಿನ ಕೆಲವು ದಿನಗಳಲ್ಲಿ ಅದರ ಮುಂದೆ ತಮ್ಮ ಕುಂದುಕೊರತೆ ಮತ್ತು ಬೇಡಿಕೆಗಳನ್ನು ಮುಂದಿಡಲು ಮುಷ್ಕರ ನಿರತ 26 ಒಕ್ಕೂಟಗಳಿಗೆ ನಿರ್ದೇಶನ ನೀಡಿದೆ.
ಈ ಎಲ್ಲ ಬೆಳವಣಿಗೆಗಳ ಬಗ್ಗೆ ಡಿಸೆಂಬರ್ 20 ರಂದು ಸಮಿತಿಯೂ ಪ್ರಾಥಮಿಕ ವರದಿ ನೀಡಬೇಕು ಎಂದು ಹೈಕೋರ್ಟ್ ಕೇಳಿದೆ ಮತ್ತು ಅದೇ ಕಾಲಮಿತಿಯೊಳಗೆ ಮುಷ್ಕರ ಕೈ ಬಿಟ್ಟು ನೌಕರರು ಮತ್ತೆ ಕೆಲಸಕ್ಕೆ ಮರುಳುವಂತಹ ನಿರ್ಣಯದೊಂದಿಗೆ ಬರಲು ಮುಷ್ಕರ ನಿರತ ಸಿಬ್ಬಂದಿಯನ್ನೂ ಕೇಳಿದೆ.
#WATCH | Mumbai: Black oil paint thrown on the official residence of Maharashtra Transport Minister Anil Parab, by 4-5 Janshakti Sangathan workers protesting over the State Transport strike issue, who are now detained. pic.twitter.com/gF99ZZBC4q
— ANI (@ANI) November 23, 2021