ಮೈಸೂರು: ವಿಧಾನಪರಿಷತ್ನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸಂಬಂಧ ನಾಳೆ ನಿರ್ಧಾರ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಮೈತ್ರಿ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಯಡಿಯೂರಪ್ಪ ನನಗೆ ಕರೆ ಮಾಡಿ ಬೆಂಬಲ ಕೇಳಿದ್ದಾರೆ. ಇದು ನನ್ನ, ಯಡಿಯೂರಪ್ಪ ವೈಯಕ್ತಿಕ ಮೈತ್ರಿಯಾಗಿದೆ ಎಂದು ತಿಳಿಸಿದರು.
ಇನ್ನುಕಾಂಗ್ರೆಸ್ ಬಹಿರಂಗವಾಗಿಯೇ ನಮಗೆ ಯಾರ ಬೆಂಬಲ ಬೇಡ ಎಂದಿದೆ. ಹೀಗಾಗಿ ಹಲವು ಅಂಶಗಳನ್ನು ಮುಂದಿಟ್ಟು ಕೊಂಡು ನಾಳೆ ಬೆಂಬಲದ ತೀರ್ಮಾನ ಮಾಡುವೆ ಎಂದು ಕುಮಾರಸ್ವಾಮಿ ಹೇಳಿದರು.
6 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲುವ ಸನ್ನಿವೇಶ ಇದೆ. 6 ಕ್ಷೇತ್ರಗಳನ್ನು ಜೆಡಿಎಸ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಮೈಸೂರಿನಲ್ಲಿ ಮೊದಲ ಬಾರಿ ಕಾರ್ಯಾಗಾರದ ಅಂಶಗಳನ್ನು ಅಳವಡಿಕೆ ಮಾಡಲಾಗಿದೆ. ಹಿಂದೆ ಇಲ್ಲಿ ಎರಡು ಬಾರಿ ಜೆಡಿಎಸ್ ಅಭ್ಯರ್ಥಿ ಗೆದ್ದಿದ್ದಾರೆ. ಈ ಬಾರಿ ಕೂಡ ನಮ್ಮ ಅಭ್ಯರ್ಥಿ ಗೆಲ್ಲುವ ವಿಶ್ವಾಸ ನನಗಿದೆ ಎಂದರು.
ಇನ್ನು ವರುಣಾ ಕ್ಷೇತ್ರದಲ್ಲೂ ನಾಯಕರ ಕೊರತೆ ನಡುವೆಯೂ ಸಭೆ ಯಶಸ್ವಿ ಆಗಿದೆ. ಇದೆಲ್ಲವನ್ನು ಗಮನಿಸಿದರೆ ಜೆಡಿಎಸ್ ಮುಂದಿನ ಚುನಾಗಣೆಯಲ್ಲೂ ಉತ್ತಮ ಫಲಿತಾಂಶ ಕಾಣಲಿದೆ ಎಂದು ಎಚ್ಡಿಕೆ ತಿಳಿಸಿದರು.
ಯಾರು ಯಾವ ಪಕ್ಷಕ್ಕೆ ಬೆಂಬಲ ಕೊಡುತ್ತಾರೆ ಎಂವ ವಿಚಾರ ಇಲ್ಲಿ ಅನಗ್ಯ ಅದು ನಮಗೆ ಬೇಕಿಲ್ಲ. ನಾವು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೊಸ ನಾಯಕರ ಹುಡುಕಾಟದಲ್ಲಿ ಇದ್ದೇವೆ. ಇದೇ ಅಂಶಕ್ಕೆ ನಾನು ಬದ್ದನಾಗಿದ್ದೇನೆ ಎಂದರು.
ನಮ್ಮ ಕಾರ್ಯಾಕರ್ತರು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೊಸ ನಾಯಕರನ್ನು ಹಾಕುವಂತೆ ಕೇಳಿದ್ದಾರೆ. ಹಿಂದೆ ಇದ್ದವರಿಗೂ ರಾಜಕೀಯ ಉಳಿವು ಮುಖ್ಯ. ಜಿ.ಟಿ. ದೇವೇಗೌಡರು ಏನು ಸನ್ಯಾಸಿಯಲ್ಲ. ಅದಕ್ಕೆ ಅವರು ಅವರ ತಂಡ ರೆಡಿ ಮಾಡಿಕೊಳ್ಳುತ್ತಿದ್ದಾರೆ. ಮೂರೂ ಪಕ್ಷಗಳಲ್ಲೂ ನಮ್ಮ ಪರ ಕೆಲಸ ಮಾಡುವವರು ಇದ್ದಾರೆ.
ಕಾಂಗ್ರೆಸ್, ಬಿಜೆಪಿಯಲ್ಲೂ ನಮ್ಮ ಪರ ಇರುವವರು ಇದ್ದಾರೆ. ನಾಯಕರು ಏನೇ ಹೇಳಿದರೂ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಎರಡನೇ ಪ್ರಾಶಸ್ತ್ಯ ಮತ ಜೆಡಿಎಸ್ಗೆ ಕೊಡುತ್ತಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಎರಡನೇ ಅಭ್ಯರ್ಥಿ ಗೆಲ್ಲಲು ಜೆಡಿಎಸ್ ಪಾತ್ರ ಬಹಳ ಮುಖ್ಯವಾಗಿದೆ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.