NEWSನಮ್ಮಜಿಲ್ಲೆರಾಜಕೀಯ

ಜೆಡಿಎಸ್‌ನಲ್ಲಿ ರಾಜಕೀಯ ಲಾಭ ಪಡೆದು ಬೆನ್ನಿಗೆ ಚೂರಿಯಾಕಿರುವವರೇ ಹೆಚ್ಚು : ಡಿ.ಸಿ.ತಮ್ಮಣ್ಣ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಕೆ.ಎಂ.ದೊಡ್ಡಿ:  ಕಳೆದ 6 ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಸದನದ ಹೊರಗೆ ಹಾಗೂ ಒಳಗೆ ಧ್ವನಿ ಎತ್ತುವ ಮೂಲಕ ಪ್ರಾಮಾಣಿಕವಾಗಿ ಸೇವೆಗೈದಿರುವ ಅಪ್ಪಾಜಿಗೌಡ ಅವರು ವಿಧಾನಪರಿಷತ್‌ ಚುನಾವಣೆಯಲ್ಲಿ ಪುನರಾಯ್ಕೆ ಆಗುವುದು ಖಚಿತ ಎಂದು ಶಾಸಕ ಡಿ.ಸಿ.ತಮ್ಮಣ್ಣ  ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕರ ನಿವಾಸದಲ್ಲಿ ಚಿಕ್ಕರಸಿನಕೆರೆ ಹೋಬಳಿ ಗ್ರಾಮ ಪಂಚಾಯಿತಿ ಸದಸ್ಯರ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮದ್ದೂರು ತಾಲೂಕಿನಲ್ಲಿ ಇತರೆ ಪಕ್ಷಗಳಿಗಿಂತ ಹೆಚ್ಚಿನ ಸದಸ್ಯರು ಜೆಡಿಎಸ್ ಬೆಂಬಲಿತರಾಗಿದ್ದು, ಅಪ್ಪಾಜಿಗೌಡರಿಗೆ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ 120ಕ್ಕೂ ಅಧಿಕ ಬಹುಮತಗಳು ದೊರೆಯಲಿವೆ ಎಂದರು.

ಇನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ನಾಯಕರನ್ನು ಸೃಷ್ಟಿಸುವ ಕಾರ್ಖಾನೆಯಾಗಿದ್ದು ಅವರಿಂದ ರಾಜಕೀಯ ಲಾಭ ಪಡೆದು ಬೆನ್ನಿಗೆ ಚೂರಿಯಾಕಿರುವವರೇ ಹೆಚ್ಚಾಗಿದ್ದಾರೆ ಎಂದು ಕಿಡಿಕಾರಿದರು.

ದೇವೇಗೌಡರು ಮತ್ತು ನನ್ನಿಂದ ರಾಜಕೀಯವಾಗಿ ಬೆಳೆದ ಹಲವರು ಪಕ್ಷದ ತೊರೆದಿರುವ ಬಗ್ಗೆ ಕಿಡಿಕಾರಿದ ಅವರು, ಕಳೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಶ್ರಮ ಹಾಗೂ ಹಣದಿಂದ ಅಧಿಕಾರಕ್ಕೆ ಬಂದ ಐವರು ಹಣದಾಸೆಗಾಗಿ ಅನ್ಯ ಪಕ್ಷಕ್ಕೆ ತೆರಳಿದರು. ಆದರೂ, ಗ್ರಾಮೀಣ ಭಾಗದ ಮತದಾರರು, ಪಕ್ಷದ ಕಾರ್ಯಕರ್ತರು, ಮುಖಂಡರು ಜೆಡಿಎಸ್ ಪಕ್ಷದ ಬಲ ವರ್ಧನೆಗೆ ಸಹಕಾರ ನೀಡಿರುವುದು ಶ್ಲಾಘನೀಯ ಎಂದರು.

ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳ ಪಾರುಪತ್ಯೆ ಸಾಗಿದೆ.  ಆದರೆ, ಕರ್ನಾಟಕದ ಜನರಿಗೆ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಅರ್ಥವಾಗದಿರುವುದು ದುರಂತ. ನಾಡಿನ ನೆಲ-ಜಲ, ಭಾಷೆ ಹಾಗೂ ನೀರಾವರಿ ವಿಚಾರವಾಗಿ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಹೋರಾಟ ಅನನ್ಯವಾಗಿದ್ದು, ಇದನ್ನು ರಾಜ್ಯದ ಜನತೆ ಅರ್ಥೈಸಿಕೊಳ್ಳದಿರುವುದು ವಿರ್ಪಾಸದ ಸಂಗತಿ ಎಂದರು.

ಸರ್ಕಾರದಿಂದ ಶಾಸಕರ ನಿಧಿ ವರ್ಷಕ್ಕೆ ಕೇವಲ 2 ಕೋಟಿ. ಆದರೆ, ನಮ್ಮ ಸಾಮರ್ಥ್ಯದ ಮೇಲೆ ಹೆಚ್ಚಿನ ಅನುದಾನ ತರಲು ಸಾಧ್ಯವಾಗಿದೆ. ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಹೊಣೆಗಾರಿಕೆಯನ್ನು ತನ್ನ ಶಾಸಕತ್ವದ ಅವಧಿಯಲ್ಲಿ ನಿಭಾಯಿಸಿದ್ದೇನೆ. ಅಪ್ಪಾಜಿಗೌಡರು ನಮ್ಮ ಅಭಿವೃದ್ಧಿಗೆ ಬೆಂಬಲ ನೀಡಿದ್ದು, ಅವರಿಗೆ ಮತ ಚಲಾಯಿಸಲು ಮುಂದಾಗುವಂತೆ ಮನವಿ ಮಾಡಿದರು.

ಮದ್ದೂರು ಕ್ಷೇತ್ರದಲ್ಲಿ ಶೈಕ್ಷಣಿಕ ಕ್ಷೇತ್ರದ ಅಮುಲಾಗ್ರ ಬದಲಾವಣೆಗೆ ಒತ್ತು ನೀಡಲಾಗಿದೆ. ಸ್ನಾತಕೋತ್ತರ ಪದವಿ ಹಾಗೂ ವೃತ್ತಿ ತರಬೇತಿ ಕಾಲೇಜುಗಳನ್ನು ಆರಂಭಿಸಲಾಗಿದೆ. ಜಿಲ್ಲಾ ಕೇಂದ್ರದಲ್ಲಿರ ಬೇಕಾದ ಪಾಸ್‌ಪೊರ್ಟ್ ಕಚೇರಿಯನ್ನು ಮದ್ದೂರು ಪಟ್ಟಣಕ್ಕೆ ತಂದಿದ್ದೇವೆ. ಹೀಗಾಗಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯ ಗುರಿ ಹೊಂದಲಾಗಿದೆ ಎಂದರು.

ಅಭ್ಯರ್ಥಿ ಎನ್. ಅಪ್ಪಾಜಿಗೌಡ ಮಾತನಾಡಿ, ಜೆಡಿಎಸ್ ಪಕ್ಷಕ್ಕೆ ಪರಿಷತ್ ಚುನಾವಣೆ ಅಗ್ನಿಪರೀಕ್ಷೆ ಎದುರಾಗಿದೆ. ಇಂದಿನ ರಾಜಕಾರಣ ಕಬ್ಬಿಣದ ಕಡಲೆಯಾಗಿದ್ದು, ಶೋಕಿಗಾಗಿ ರಾಜಕಾರಣ ಮಾಡುವವರಿಗೆ ಜಿಲ್ಲೆಯ ಜನತೆ ಮಣೆ ಹಾಕುವುದಿಲ್ಲ ಎಂಬುದು ಹಲವು ಚುನಾವಣೆಗಳಲ್ಲಿ ಸಾಬೀತಾಗಿದೆ. ವರಿಷ್ಠರ ಒತ್ತಾಸೆಯಂತೆ ಪರಿಷತ್ ಚುನಾವಣೆಗೆ ಮತ್ತೆ ಸ್ಪರ್ಧಿಸುತ್ತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದರು.

ಯುವ ಘಟಕದ ರಾಜ್ಯಾ ಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮನ್‌ಮುಲ್ ಅಧ್ಯಕ್ಷ ರಾಮಚಂದ್ರು,  ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಘಟಕದ ಅಧ್ಯಕ್ಷ ಹಾಗಲಹಳ್ಳಿ ಚಿಕ್ಕತಿಮ್ಮೇಗೌಡ, ಎಂಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಹೊನ್ನೇಗೌಡ, ಜಿಪಂ ಮಾಜಿ ಸದಸ್ಯ  ಎ.ಟಿ.ಬಲ್ಲೇಗೌಡ, ಮುಖಂಡರಾದ ಮಾದನಾಯಕನಹಳ್ಳಿ ರಾಜಣ್ಣ, ನಲ್ಲಿಗೆರೆ ಬಾಲು, ದೇವರಹಳ್ಳಿ ವೆಂಕಟೇಶ್, ಕೆ.ಟಿ.ಸುರೇಶ್ ಉಪಸ್ಥಿತರಿದ್ದರು.

Leave a Reply

error: Content is protected !!
LATEST
KKRTC ವಿಜಯಪುರ ವಿಭಾಗದಲ್ಲಿ ಅಂದು ಡ್ಯೂಟಿಗೆ ಹತ್ತಿಸಿದ ಅಧಿಕಾರಿಗಳೇ ಇಂದು ಚಾಲಕನಿಗೆ ಮುಳುವಾಗಿ ನಿಂತಿದ್ದಾರಾ? ನಾಳೆ KSRTC ನೌಕರರಿಗೆ ನಗದು ರಹಿತಾ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿ ಸಂಬಂಧ ಎಂಡಿ ಅಧ್ಯಕ್ಷತೆಯಲ್ಲಿ ಸಭೆ BMTC: 7ದಿನಗಳಿಂದ LMSನಲ್ಲಿ ರಜೆ ಹಾಕಲಾಗದೆ ನೌಕರರ ಪರದಾಟ- ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು ಮೌನ BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC