CrimeNEWSಸಂಸ್ಕೃತಿ

ಮುರುಘಾಶ್ರೀಗಳ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಬೆಳಗಾನ ನಡೆದ ರಾಜಿ ಸಂಧಾನ

ವಿಜಯಪಥ ಸಮಗ್ರ ಸುದ್ದಿ

ಚಿತ್ರದುರ್ಗ: ನಿನ್ನೆ ಮೈಸೂರಿನ ನಜರ್‌ ಬಾದ್‌ ಪೊಲೀಸ್‌ ಠಾಣೆಯಲ್ಲಿ ಮುರುಘಾಶ್ರೀಗಳ ವಿರುದ್ಧ ದಾಖಲಾಗಿರುವ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಇಂದು ಬೆಳಗಿನ ಜಾವದವರೆಗೂ ಸಂಧಾನ ಸಭೆ ನಡೆದಿದ್ದು ಅದು ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ.

ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಸಂಧಾನ ಸಭೆಗೆ ಖುದ್ದು ಮುರುಘಾಶ್ರೀ, ಬಸವರಾಜನ್ ನೇರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಮಠದ ಆಡಳಿತಾಧಿಕಾರಿಯಾಗಿ ಬಸವರಾಜನ್ ಮುಂದುವರಿಕೆಗೆ ಚಿಂತನೆ ನಡೆದಿದೆ ಎನ್ನಲಾಗುತ್ತಿದೆ.

ಈ ಸಂಧಾನ ಸಭೆಗೆ ಮಠಾಧೀಶರು, ಮುಖಂಡರು ಕೂಡ ಭಾಗಿಯಾಗಿದ್ದು, ಆರೋಪ ಪ್ರತ್ಯಾರೋಪಗಳನ್ನು ಗಮನಸಿದರು ಎಂದು ತಿಳಿದು ಬಂದಿದೆ. ಇತ್ತ ತಮ್ಮ ಮೇಲಿನ ಲೈಂಗಿಕ ಆರೋಪದ ಬಗ್ಗೆ ಶನಿವಾರ ರಾತ್ರಿಯೇ ಶ್ರೀಗಳು ಮಾತಾಡಿದ್ದು, ನಮ್ಮ ಪಕ್ಕದಲ್ಲೇ ಇದ್ದು ಹೋದವರೇ ಪಿತೂರಿ, ಒಳಸಂಚು ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಇನ್ನು ಯಾವ ಸಮಸ್ಯೆ, ಆರೋಪ ಶಾಶ್ವತ ಅಲ್ಲ. ಇದು ಮುರುಘಾ ಶರಣರ ಅಭಿಮಾನವನ್ನು ಎಬ್ಬಿಸುವ ಕೆಲಸವಾಗಿದೆ. ಮೇಲೆಕ್ಕೆ ಹೋದಂತೆಲ್ಲ ಆಪತ್ತುಗಳು, ಕಿರುಕುಳಗಳು ಇರ್ತಾವೆ ಎಂದು ಹೇಳಿದ್ದ ಅವರು, ನಾವು ಸಂಧಾನಕ್ಕೂ ಸಿದ್ಧ, ಸಮರಕ್ಕೂ ಬದ್ಧ. ಸಂಧಾನ ಮತ್ತು ಸಮರ. 2 ಆಯ್ಕೆಗಳು ಇವೆ ಅಂತ ತಿಳಿಸಿದ್ದರು.

ಪ್ರಕರಣ ಸಂಬಂಧ ಇಂದು ಸಿಡಬ್ಲ್ಯುಸಿಯಲ್ಲಿ ಬಾಲಕಿಯರ ಹೇಳಿಕೆ ದಾಖಲು ಮಾಡಲಾಗುತ್ತದೆ. ಸಿಡಬ್ಲ್ಯುಸಿಯಲ್ಲಿ ಅಧಿಕಾರಿಗಳು ಕೌನ್ಸಿಲಿಂಗ್ ಮಾಡಲಿದ್ದು, ಈಗ ಪ್ರಕರಣ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುವುದರ ನಿರ್ಧಾರ  ಸದ್ಯ ಸಂತ್ರಸ್ತೆಯರ ಹೇಳಿಕೆ ಮೇಲೆ ನಿಂತಿದೆ.

ಅಲ್ಲದೆ ಬಾಲಕಿಯರ ಹೇಳಿಕೆಯಿಂದ ಮುರುಘಾಶ್ರೀಗಳ ಭವಿಷ್ಯ ಯಾವ ರೂಪ ಪಡೆಯುತ್ತಿದೆ ಎಂಬುವುದು ಕೂಡ ನಿರ್ಧಾರವಾಗಲಿದೆ. ಸದ್ಯ ಸಂತ್ರಸ್ತೆಯರು ಚಿತ್ರದುರ್ಗದ ಬಾಲಮಂದಿರದಲ್ಲಿದ್ದಾರೆ.

Editordev
the authorEditordev

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...