ವಿರಾಜಪೇಟೆ: ಮನೆ ಮನೆ ಕಾವ್ಯ ಗೋಷ್ಠಿ ಪರಿಷತ್ತು ಮತ್ತು ಕಾವೇರಿ ಗಣೇಶೋತ್ಸವ ಸಮಿತಿ ಮೂರ್ನಾಡು ರಸ್ತೆ ವಿರಾಜಪೇಟೆ ಸಹಯೋಗದೊಂದಿಗೆ ಇಂದು ವಿರಾಜಪೇಟೆಯ ಮೂರ್ನಾಡು ರಸ್ತೆಯ ಕಾವೇರಿ ಗಣೇಶೋತ್ಸವ ಸಮಿತಿಯ ವೇದಿಕೆಯಲ್ಲಿ ಕವಿಗೋಷ್ಠಿ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ.ಎಸ್. ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೇಶವ ಕಾಮತರು ಕಾರ್ಯಕ್ರಮ ಉದ್ಘಾಟಿಸಿದರು.
ಹಿರಿಯ ಕವಯಿತ್ರಿಯರಾದ ಶೋಭಾ ಸುಬ್ಬಯ್ಯ, ಕಸ್ತೂರಿ ಗೋವಿಂದಮ್ಮಯ್ಯ, ಎಸ್.ಕೆ. ಈಶ್ವರಿ, ಸೈಮನ್, ಪಂದದಮಡ ರೇಣುಕಾ ಸೋಮಯ್ಯ, ವಿಮಲ ದಶರಥ, ಪ್ರಿಯಾಂಕಾ ದಶರಥ, ವಿ.ಟಿ. ಶ್ರೀನಿವಾಸ್, ಲವಿನ್ ಡಿಸೋಜ, ಪುಷ್ಪಲತಾ, ಶಿವಪ್ಪ ಹಾಗೂ ಸುಳ್ಯದ ಪೆರುಮಾಳ್ ಲಕ್ಷ್ಮಣ್ ಸೇರಿದಂತೆ ಸುಮಾರು17 ಕವಿಗಳು ಕವನ ವಾಚನ ಮಾಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಕಿಗ್ಗಾಲು ಗಿರೀಶ್, ಅಂಬೆಕಲ್ಲು ಸುಶೀಲಾ ಅವರ ರಾಮಾಯಣ ವಾಚನ ಮಾಡಿದರು. ಮನೆ ಮನೆ ಕಾವಿಗೋಷ್ಠಿ ಪರಿಷತ್ತಿನ ವೈಲೇಶ್ ಪಿ.ಎಸ್. ಪ್ರಾಸ್ತಾವಿಕ ನುಡಿಯಾಡಿದರೆ, ಸುಪ್ರೀತಾ ದಿಲೀಪ್ ಪ್ರಾರ್ಥಸಿದರು.
ಭಾಗ್ಯವತಿ ಅಣ್ಣಪ್ಪ ಮತ್ತು ಸಾವಿತ್ರಿ ಎಚ್. ಜೆ.ನಿರೂಪಣೆಯಲ್ಲಿ ಹರೀಶ್ ಕಿಗ್ಗಾಲು ಸ್ವಾಗತಿಸಿ ವಂದಿಸಿಸರು. ಕಾವೇರಿ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷ ಸೀತಾರಾಮ ರೈ ಹಾಗೂ ಕಾರ್ಯದರ್ಶಿ ವಿ.ಜಿ ರಾಕೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.