ಬೆಂಗಳೂರು ಗ್ರಾಮಾಂತರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ದಸರಾ ಕ್ರೀಡೆಯ ಆಯ್ಕೆಗಳನ್ನು ಸೆಪ್ಟೆಂಬರ್ 14 ಮತ್ತು 15 ರಂದು ದೊಡ್ಡಬಳ್ಳಾಪುರ ನಗರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.
ನಿಯಮ ಮತ್ತು ನಿಬಂಧನೆಗಳು : • ಕ್ರೀಡಾಪಟುಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯವರೇ ಆಗಿರಬೇಕು. •ಈಗಾಗಲೇ ನಡೆದಿರುವ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಫಲಿತಾಂಶ ಪಟ್ಟಿಯಂತೆ ವೈಯಕ್ತಿಕ ಕ್ರೀಡೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಹಾಗೂ ಗುಂಪು ಕ್ರೀಡೆಗಳಲ್ಲಿ(ರಿಲೇ ಸಹಿತ ) ಪ್ರಥಮ ಸ್ಥಾನ ಪಡೆದವರು ಭಾಗವಹಿಸಬಹುದು ಜಿಲ್ಲಾ ಮಟ್ಟದಲ್ಲಿನ ಆಯ್ಕೆ ಕ್ರೀಡೆಗಳಿಗೆ ನೇರವಾಗಿ ಭಾಗವಹಿಸಬಹುದು. (ಟೆನ್ನಿಸ್, ನೆಟ್ ಬಾಲ್ ಮತ್ತು ಈಜು).
• ಕ್ರೀಡಾಪಟುಗಳು ಕಡ್ಡಾಯವಾಗಿ ಆಧಾರ್ ಕಾರ್ಡ್ ಒರಿಜಿನಲ್ ಮತ್ತು ಜೆರಾಕ್ಸ್ ಪ್ರತಿ, ಪಾಸ್ ಪೋರ್ಟ್ ಸೈಜ್ ಫೋಟೋ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ಕಡ್ಡಾಯವಾಗಿ ತರುವುದು ಮತ್ತು ವಿದ್ಯಾರ್ಥಿಗಳಾಗಿದ್ದರೆ ಆಧಾರ್ ಮತ್ತು ಶಾಲೆ/ಕಾಲೇಜು ಗುರುತಿಸಿ ಚೀಟಿ ತರುವುದು.
•ಕಡ್ಡಾಯವಾಗಿ ಕ್ರೀಡಾಪಟುಗಳು ಬೆಳಗ್ಗೆ 9 ಗಂಟೆಗೆ ಕ್ರೀಡಾಂಗಣದಲ್ಲಿ ಹಾಜರಿದ್ದು ನೋಂದಣಿ ಮಾಡಿಕೊಳ್ಳುವುದು. ನಂತರ ಬಂದಂತಹ ಕ್ರೀಡಾಪಟುಗಳಿಗೆ ಅವಕಾಶವಿಲ್ಲ. •ತೀರ್ಪುಗಾರರ ತೀರ್ಪಿಗೆ ಬದ್ಧರಾಗಿರಬೇಕು. ಅಸಭ್ಯವಾಗಿ ವರ್ತಿಸಿದವರನ್ನು ಕ್ರೀಡಾಕೂಟದಿಂದ ರದ್ದು ಗೊಳಿಸಲಾಗುವುದು.
•ವಿವಾದತ್ಮಕ ವಿಷಯ ಮತ್ತು ವಿಶೇಷ ಪ್ರಕರಣ / ಸಂದರ್ಭದಲ್ಲಿ ಆಯೋಜಕರ(ಬೆ. ಗ್ರಾ.ಜಿಲ್ಲಾ ಕ್ರೀಡಾ ಇಲಾಖೆಯ ) ತೀರ್ಮಾನ ಅಂತಿಮ. ಹೆಚ್ಚಿನ ಮಾಹಿತಿಗಾಗಿ, ಮೊಬೈಲ್: 9632778567 /9845608598 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಹಾಯಕ ನಿರ್ದೇಶಕರಾದ ಆರ್.ಗೀತಾ ತಿಳಿಸಿದ್ದಾರೆ.