ಮುಂಬೈ: ಇನ್ನುಮುಂದೆ ಬ್ಯಾಂಕ್ಗಳಿಗೆ ಸ್ಥಳೀಯ ಭಾಷೆ ಮಾತನಾಡುವವರನ್ನೇ ಸಿಬ್ಬಂದಿಯಾಗಿ ನೇಮಕ ಮಾಡಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಲಹೆ ನೀಡಿದ್ದಾರೆ.
ಮುಂಬೈನಲ್ಲಿ ಭಾರತೀಯ ಬ್ಯಾಂಕ್ಗಳ ಸಂಘದ 75 ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ನೀವು ಅಲ್ಲಿ ಗ್ರಾಹಕರೊಂದಿಗೆ ವ್ಯವಹರಿಸಲು ಇದ್ದೀರೇ ಹೊರತು, ವ್ಯವಸ್ಥೆಯನ್ನು ಬೆಳೆಸಲು ಅಲ್ಲ ಎಂದು ಹೇಳಿರುವುದಾಗಿ ದಿ ಹಿಂದು ವರದಿ ಮಾಡಿದೆ.
ಶಾಖಾ ಮಟ್ಟದ ಬ್ಯಾಂಕ್ಗಳನ್ನು ನೋಡಿದಾಗ ಕೆಲವರು ಹೇ ನೀವು ಹಿಂದಿ ಮಾತನಾಡುವುದಿಲ್ಲವೇ, ನೀವೆಲ್ಲೋ ಭಾರತೀಯರಲ್ಲ ಅನ್ನಿಸುತ್ತದೆ ಅಂದುಕೊಳ್ಳುತ್ತಾರೆ. ಇದು ಉತ್ತಮ ವ್ಯಾವಹಾರಿಕ ಸಂಬಂಧದ ಲಕ್ಷಣವಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಹೀಗಾಗಿ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಲು ಸಾಧ್ಯವಾಗದ ಸಿಬ್ಬಂದಿಯನ್ನು ಪ್ರಾದೇಶಿಕ ಶಾಖೆಗಳಿಗೆ ನೇಮಕ ಮಾಡಬಾರದು. ಭಾಷೆ ಬಲ್ಲ ಉತ್ತಮ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಹೆಚ್ಚು ಸಂವೇದನಾ ಶೀಲ ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ ಎಂದು ತಿಳಿಸಿದೆ.