NEWSನಮ್ಮಜಿಲ್ಲೆ

ಸರ್ಕಾರದ ಜತೆ ಚರ್ಚಿಸಿ ಸಾರಿಗೆ ನೌಕರರ ಸಮಸ್ಯೆ ಬಗೆಹರಿಸುತ್ತೇನೆ : ರಹಿಮ್ ಖಾನ್ ಭರವಸೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೀದರ್‌: ಸಾರಿಗೆ ನೌಕರರ ಬಹುದಿನಗಳ ಬೇಡಿಕೆಗಳ ಈಡೆರಿಕೆಗಾಗಿ ಸರ್ಕಾರದ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಬೀದರ್‌ ಉತ್ತರ ಕ್ಷೇತ್ರದ ಶಾಸಕ ರಹಿಮ್ ಖಾನ್ ಭರವಸೆ ನೀಡಿದರು.

ಬೀದರ ನಗರದ ಕೇಂದ್ರ ಬಸ್ ನಿಲ್ದಾಣ ಬಳಿಯ ಹೊಟೇಲ್ ಒಂದರಲ್ಲಿ ಸಾರಿಗೆ ನೌಕರರ ಕೂಟ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾ ಕಚೇರಿ ಉದ್ಘಾಟನಾ ಸಮಾರಂಭಲ್ಲಿ ಮಾತನಾಡಿದರು.

ಹಗಲಿರುಳೆನ್ನದೆ ಹಬ್ಬ ಹರಿದಿನಗಳಲ್ಲೂ ಸಹ ಕುಟುಂಬದಿಂದ ದೂರ ಉಳಿದು ಸಾರ್ವಜನಿಕರಿಗೆ ಸುರಕ್ಷಿತ, ಉತ್ತಮ ಸೇವೆ ನೀಡುವ ಸಾರಿಗೆ ನೌಕರರಿಗೆ ಇರುವ ಸಮಸ್ಯೆ ಬಹಳ. ಆದರೆ, ಅವರಿಗೆ ಸಮರ್ಪಕವಾದ ಸಂಬಳ ಸವಲತ್ತು ಇಲ್ಲ, ಜತೆಗೆ ಕಿರುಕುಳವು ಹೆಚ್ಚಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನು ಕಿರುಕುಳ ಮುಕ್ತ ಪರಿಸರ ನಿರ್ಮಿಸಬೇಕಾಗಿದ್ದು, ಅಧಿಕಾರಿಗಳು ಮತ್ತು ಸಚಿವರು ಈ ಬಗ್ಗೆ ಯೋಜನೆ ರೂಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಇಂದಿನ ಬೆಲೆ ಏರಿಕೆ ಸಮಯದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆರಿದ್ದಾಗ ಅತ್ಯಂತ ಕಡಿಮೆ ಸಂಬಳ ಪಡೆದು ಜೀವನ ಸಾಗಿಸುತ್ತಿರುವ ಸಾರಿಗೆ ನೌಕರರಿಗೆ ಸರಕಾರಿ ನೌಕರರ ಮಾದರಿ ಸಂಬಳ ಕೊಡಬೇಕು ಎಂದು ಆಗ್ರಹಿಸಿದರು.

ವಿಧಾನ ಪರಿಷತ್‌ ಸದಸ್ಯ ಅರವಿಂದ ಅರಳಿ ಮಾತನಾಡಿ, ಇಂದಿನ ಸಮಾಜದಲ್ಲಿ ಸಾರಿಗೆ ಸಂಘಟಿತರಾಗಬೇಕಾಗಿದೆ. ಸಂಘಟನೆಯಲ್ಲಿ ಶಕ್ತಿ ಇದೆ. ಕಳೆದ ಅಧಿವೇಶನದಲ್ಲಿ ಸಾರಿಗೆ ನೌಕರರ ಸಮಸ್ಯೆ ಕುರಿತು ಧ್ವನಿ ಎತ್ತಿದ್ದೇನೆ. ನಮ್ಮ ಸಾರಿಗೆ ನೌಕರರು ಕಳೆದ ವರ್ಷದ ಅಗತ್ಯ ಬೇಡಿಕೆ ಈಡೆರಿಕೆಗೆ ಆಗ್ರಹಿಸಿ ಕಾನೂನಾತ್ಮಕವಾಗಿಯೆ ಮುಷ್ಕರ ನಡೆಸಿದ್ದರು. ಆ ಸಮಯದಲ್ಲಿ ಸಂಬಳಕ್ಕಾಗಿ ಹೋರಾಟ ಮಾಡಿದ್ದ ನೌಕರಿರಿಗೆ ಸರಕಾರ ಸವಲತ್ತು ಕೊಡುವ ಬದಲು ಶಿಕ್ಷೆ ಕೊಟ್ಟು ಅಮಾನವೀಯವಾಗಿ ನಡೆದುಕೊಂಡಿದ್ದು ಅಕ್ಷಮ್ಯ ಎಂದರು.

ಸಾರಿಗೆ ನೌಕರರಿಗೆ ಕಳೆದ ಎಂಟು ವರ್ಷಗಳಿಂದ ವೇತನ ಹೆಚ್ಚಳವಾಗಿಲ್ಲ. ಬರಿ ಭರವಸೆಯಿಂದ ಅವರ ಹೊಟ್ಟೆ ತುಂಬುವದಿಲ್ಲ ಕೂಡಲೆ ಸಂಬಳ ಹೆಚ್ಚಿಸಬೇಕೆಂದು ಒತ್ತಾಯಿಸಿದರು.

ಹುಲಸೂರಿನ ಡಾ. ಶಿವಾನಂದ ಮಹಾಸ್ವಾಮೀಜಿ ಮಾತನಾಡಿ, ಸಾರಿಗೆ ನೌಕರರು ಪರಸ್ಪರ ಸಹಕಾರ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ ಮಾತನಾಡಿ, ಸಾರಿಗೆ ಇಲಾಖೆಯಲ್ಲಿ ಅಧಿಕಾರಿಗಳ ದಬ್ಬಾಳಿಕೆಗೆ ನಿಯಂತ್ರಣ ಇಲ್ಲದಂತಾಗಿದೆ. ಒತ್ತಡದಲ್ಲಿ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಸೂಕ್ತ ಭದ್ರತೆ, ಭವಿಷ್ಯ ಇಲ್ಲ. ಹಗಲು ರಾತ್ರಿ ದುಡಿದರು ಸಮರ್ಪಕ ವೇತನ ಇಲ್ಲ. ಇಂತಹ ಸನ್ನಿವೇಶದಲ್ಲಿ ಆನೇಕ ನೌಕರರು ಒತ್ತಡದಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕಳೆದ 15 ದಿನಗಳಲ್ಲಿ 7 ನೌಕರರು ಸಾವಿಗೆ ಶರಣಾಗಿದ್ದಾರೆ. ಇದು ನಿಲ್ಲಬೇಕು ಎಂದರು.

ದಯವಿಟ್ಟು ಯಾರು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಲ್ಲ ಸಮಸ್ಯೆಗು ಪರಿಹಾರವಿದೆ. ತಾಳ್ಮೆ ಇರಬೇಕು ಅಷ್ಟೆ, ಆತ್ಮಹತ್ಯೆ ಹೇಡಿಗಳ ಲಕ್ಷಣ ಎಲ್ಲವನ್ನು ಎದುರಿಸುವ ಧೈರ್ಯ ಇರಬೇಕು ಮುಂದಿನ ದಿನಗಳಲ್ಲಿ ನಮ್ಮ ಕಷ್ಟದ ದಿನಗಳು ದೂರ ಆಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ನಾಲ್ಕು ನಿಗಮಕ್ಕೆ ಒಳ್ಳೆಯ ಜನಪರ ಕಾಳಜಿಯುಳ್ಳ ವ್ಯವಸ್ಥಾಪಕ ನಿರ್ದೇಶಕರು ಬಂದಿದ್ದು ಸಂತರ ತಂದಿದೆ. ಮುಂದಿನ ದಿನಗಳಲ್ಲಿ ಎಲ್ಲ ಜನಪ್ರತಿನಿಧಿಗಳ ಬಳಿ ಭೇಟಿ ಮಾಡಿ ಮಾತನಾಡಿ ಸಮಸ್ಯೆ ಬಗೆಹರಿಸಿಕೊಡುವದಾಗಿ ತಿಳಿಸಿದರು.

ಕ.ರಾ.ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿ ಇನ್ನು ಮುಂದೆ ಸಾರಿಗೆ ನೌಕರರ ಕೂಟದ ಎಲ್ಲ ಕಾರ್ಯಕ್ರಮಗಳಿಗಾಗಿ ಸರಕಾರಿ ನೌಕರರ ಸಮುದಾಯ ಭವನ ಉಚಿತವಾಗಿ, ಅಲ್ಲದೆ ಸಾರಿಗೆ ನೌಕರರ ಮಕ್ಕಳ ಮದುವೆ ಇತರೆ ಖಾಸಗಿ ಕಾರ್ಯಕ್ರಮಕ್ಕಾಗಿ ರಿಯಾಯತಿ ದರದಲ್ಲಿ ಕೊಡುವುದಾಗಿ ತಿಳಿಸಿದರು.

ಸುರೇಶ ಚನಶೆಟ್ಟಿ ಜಿಲ್ಲಾಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು, ಬೀದರ ವೀರೂಪಾಕ್ಷ ಗಾದಗಿ ಅಧ್ಯಕ್ಷರು ಕನ್ನಡಾಂಬೆ ಗೆಳೆಯರ ಬಳಗ, ಬೀದರ್‌, ವಿಜಯಕುಮಾರ ಸೋನಾರೆ ಗೌರವಾಧ್ಯಕ್ಷರು, ಸಾರಿಗೆ ನೌಕರರ ಕೂಟ, ಬೀದರ ವಿಜಯ ರೆಡ್ಡಿ ವಕೀಲರು ಕಲ್ಯಾಣ ಕರ್ನಾಟಕ ನೌಕರರ ಕೂಟದ ಗೌರವಾಧ್ಯಕ್ಷರು ಶೌಕತ್ ಅಲಿ ಆಲೂರ, ದಾವಣಗೆರೆಯ ಒಂಕಾರ, ಸಿದ್ದನಗೌಡ ಪಾಟೀಲ್, ಸುಭಾಷ ಆಲೂರ, ಸತೀಷ್ ವೇದಿಕೆ ಮೇಲೆ ಇದ್ದರು.

ಶಿವಪುತ್ರಪ್ಪಾ ಡಿ. ಪಾಟೀಲ್ ಸ್ವಾಗತಿಸಿದರು, ಬಸವರಾಜ ಚಾಮರೆಡ್ಡಿ ಕೂಟದ ಜಿಲ್ಲಾಧ್ಯಕ್ಷರು ಪ್ರಸ್ತಾವಿಕ ಮಾತನಾಡಿ, ಕೂಟದ ಕಚೇರಿಯ ಉಪಯೋಗ ಪಡೆಯಲು ಸದಸ್ಯರಿಗೆ ತಿಳಿಸಿದರು. ಜಗನ್ನಾಥ ಶಿವಯೋಗಿ ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿರೂಪಿಸಿ, ಮಲ್ಲಯ್ಯ ಸ್ವಾಮಿ ವಂದಿಸಿದರು. ಕೂಟದ ಎಲ್ಲ ಪದಾಧಿಕಾರಿಗಳು , ಸದಸ್ಯರು ಹಾಗೂ ನೌಕರರು ಇದ್ದರು.

Leave a Reply

error: Content is protected !!
LATEST
BMTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ-ಎಲ್ಲರನ್ನೂ ಅಭಿನಂದಿಸಿದ ಸಾರಿಗೆ ಸಚಿವರು, ಅಧಿಕಾರಿಗಳು KKRTC ವಿಜಯಪುರ ವಿಭಾಗದಲ್ಲಿ ಅಂದು ಡ್ಯೂಟಿಗೆ ಹತ್ತಿಸಿದ ಅಧಿಕಾರಿಗಳೇ ಇಂದು ಚಾಲಕನಿಗೆ ಮುಳುವಾಗಿ ನಿಂತಿದ್ದಾರಾ? ನಾಳೆ KSRTC ನೌಕರರಿಗೆ ನಗದು ರಹಿತಾ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿ ಸಂಬಂಧ ಎಂಡಿ ಅಧ್ಯಕ್ಷತೆಯಲ್ಲಿ ಸಭೆ BMTC: 7ದಿನಗಳಿಂದ LMSನಲ್ಲಿ ರಜೆ ಹಾಕಲಾಗದೆ ನೌಕರರ ಪರದಾಟ- ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು ಮೌನ BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ