ಹನೂರು: ಅದು ಪವಾಡ ಪುರುಷ ನೆಲೆಸಿರುವ ಧಾರ್ಮಿಕ ಕ್ಷೇತ್ರ ಆಕ್ಷೇತ್ರದಲ್ಲಿ ಹೊಸ ವರ್ಷ ಆಚರಣೆಗೆ ಸಾವಿರಾರು ಮಂದಿ ಜಮಾಯಿಸಿದ್ದರು. ಈನಡುವೆಯೇ ಈ ಭಾರಿಯ ಹೊಸ ವರ್ಷದ ಮೊದಲ ದಿನವೇ ಅಲ್ಲಿ ವಾಸ ಮಾಡುವ ಜನರು ಪ್ರಾಧಿಕಾರದ ಕಿರುಕುಳ ತಾಳಲಾರದೆ ಪ್ರತಿಭಟನೆಗಿಳಿದರು.
ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಸಾವಿರಾರು ಭಕ್ತರು ಆಗಮಿಸಿದ್ದರೆ, ಮತ್ತೊಂದು ಕಡೆ ದೇವಾಲಯ ಪ್ರಾಧಿಕಾರದ ಕಿರುಕುಳ ತಾಳಲಾರದೆ ಇಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಮಲೆಮಹದೇಶ್ವರ ಬೆಟ್ಟದ ದೀಪದ ಒಡ್ಡು ನಲ್ಲಿ 108 ಅಡಿ ಎತ್ತರದ ಬೃಹತ್ ಮಹದೇಶ್ವರ ವಿಗ್ರಹ ನಿರ್ಮಾಣವಾಗುತ್ತಿದೆ. ಪ್ರತಿಮೆ ಲೋಕಾರ್ಪಣೆ ಮಾಡುವ ಸಲುವಾಗಿ ಶ್ರೀ ಮಲೆಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಅಲ್ಲಿನ ಜನರ ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡಿದ್ದು ಹಾಗೂ ಬೃಹತ್ ಪ್ರತಿಮೆ ಲೋಕಾರ್ಪಣೆ ಮಾಡುವ ಸಲುವಾಗಿ ರಸ್ತೆ ಉದ್ಯಾನವನ ನಿರ್ಮಾಣಕ್ಕೆ ರತ್ರೋ ರಾತ್ರಿ ಜೆಸಿಬಿ ಬಳಸಿಕೊಂಡು ಕಾಮಗಾರಿ ನಡೆಸಿದೆ.
ಇದರಿಂದ ಬೇಸತ್ತ ಸಾರ್ವಜನಿಕರು ರೈತರ ನೆರವಿನೊಂದಿಗೆ ಹೊಸ ವರ್ಷದ ಮೊದಲೇ ದಿನವೇ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗಿಳಿದರು.
ಮಹಿಳೆಯರು ಮತ್ತು ನಿವಾಸಿಗಳಿಗೆ ಪ್ರಾಧಿಕಾರದಿಂದ ಬೆದರಿಕೆ ಹಾಕಲಾಗುತ್ತಿದೆ. ಪ್ರಾಧಿಕಾರದ ಕೆಲಸಕ್ಕೆ ನೆರವಾದವರಿಗೆ ಅನ್ಯಾಯ ಮಾಡಲಾಗುತ್ತಿದೆ ಪ್ರಾಧಿಕಾರದ ವಿರುದ್ದ ಹೋರಾಟ ನಡೆಸಿದರೆ ಸಿಗುವ ಪರಿಹಾರ ಸಿಗೋದಿಲ್ಲ ಅಂತ ಬೆದರಿಕೆ ಹಾಕ್ತಾ ಇದ್ದಾರೆ ಎಂದು ನಿವಾಸಿಗಳು ಆರೋಪಿಸುತ್ತಿದ್ದಾರೆ.
ಒಟ್ಟಿನಲ್ಲಿ ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರವು ಅಭಿವೃದ್ಧಿ ನೆಪಮಾಡಿಕೊಂಡು ಅಲ್ಲಿನ ನಿವಾಸಿಗಳನ್ನು ಒಕ್ಕಲೆಬ್ಬಿಸಲು ಮಾಡುವ ತಂತ್ರ ಇದಾಗಿದೆ ಎನ್ನಲಾಗುತ್ತಿದೆ ಈ ಬಗ್ಗೆ ರಾಜ್ಯ ಸರ್ಕಾರ ಎಚ್ಚೆದ್ದುಕೊಂಡು ಸಾರ್ವಜನಿಕರನೆರವಿಗೆ ಬರಬೇಕಾಗಿದೆ.