ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆದು ಕೊನೆಯಲ್ಲಿ ಮೇಯರ್ ಆಗಿ ಶೋಭಾ ಸೋಮನಾಚೆ ಹಾಗೂ ಉಪಮೇಯರ್ ಆಗಿ ರೇಷ್ಮಾ ಪಾಟೀಲ ಆಯ್ಕೆಯಾಗಿದ್ದಾರೆ.
ಈ ಮೂಲಕ ಚುನಾವಣೆಯಲ್ಲಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಬಿಜೆಪಿ ರಣತಂತ್ರ ರೂಪಿಸಿದ್ದ ತಂತ್ರ ಫಲನೀಡಿದ್ದು, ಮರಾಠಾ ಸಮುದಾಯದ ಶೋಭಾ ಸೋಮನಾಚೆ ಮೇಯರ್, ರೇಷ್ಮಾ ಪಾಟೀಲ್ ಉಪಮೇಯರ್ ಆಗಿ ಆಯ್ಕೆಯಾಗಿದರು.
58 ವಾರ್ಡ್‌ಗಳ ಪೈಕಿ 35 ವಾರ್ಡ್‌ಗಳಲ್ಲಿ ಗೆದ್ದಿರುವ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿತ್ತು. ಆದರೂ ಶಾಸಕರಾದ ಅಭಯ ಪಾಟೀಲ್, ಅನಿಲ್ ಬೆನಕೆ ಸಮ್ಮುಖದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಮೇಯರ್ ಸ್ಥಾನ ಯಾರಿಗೆ? ಉಪಮೇಯರ್ ಸ್ಥಾನ ಯಾರಿಗೆ ಎಂಬ ಬಗ್ಗೆ ಚರ್ಚೆಯಾಗಿತ್ತು.
ಮುಖ್ಯವಾಗಿ ಮೇಯರ್ ಸ್ಥಾನ ಮಹಿಳೆ, ಉಪಮೇಯರ್ ಹಿಂದುಳಿದ ವರ್ಗ ಬಿ ಮಹಿಳೆಗೆ ಮೀಸಲಾಗಿದ್ದರಿಂದ ಈ ಮೀಸಲು ಗೊಂದಲದಿಂದ ಮೇಯರ್ ಆಯ್ಕೆಯೇ ನಡೆದಿರಲಿಲ್ಲ. ಸದ್ಯ ಮೇಯರ್ ಸ್ಥಾನಕ್ಕೆ 7 ಮಂದಿ ಅರ್ಹರ ಪೈಕಿ 5 ಕಾರ್ಪೊರೇಟರ್‌ಗಳ ಪೈಪೋಟಿ ನಡೆಸಿದ್ದರು. ಈ ನಡುವೆಯೂ ಮರಾಠಾ ಸಮುದಾಯದ ಶೋಭಾ ಸೋಮನಾಚೆ ಮೇಯರ್, ರೇಷ್ಮಾ ಪಾಟೀಲ್ ಉಪಮೇಯರ್ ಆಗಿ ಆಯ್ಕೆಯಾಗಿ ಪಾಲಿಕೆ ಗದ್ದಿಗೆ ಏರಿದ್ದಾರೆ.
ಈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕನ್ನಡ ಭಾಷಿಕ ಸದಸ್ಯರಿಗೆ ಮೇಯರ್ ಸ್ಥಾನ ನೀಡಲು ಕನ್ನಡಪರ ಸಂಘಟನೆಗಳ ಆಗ್ರಹಿಸಿದ್ದವು. ಮತ್ತೊಂದೆಡೆ ಮೇಯರ್ ಸ್ಥಾನಕ್ಕಾಗಿ ಲಿಂಗಾಯತ ಮರಾಠಾ ಸಮುದಾಯ ಮಧ್ಯೆ ಪೈಪೋಟಿ ನಡೆದಿತ್ತು. ಸದ್ಯ ಸಭಾನಾಯಕ ಸ್ಥಾನ ಕನ್ನಡ ಭಾಷಿಕ ಸದಸ್ಯ, ಲಿಂಗಾಯತ ಸಮುದಾಯಕ್ಕೆ ಸೇರಿದ್ದು ಮರಾಠಾ ಸಮುದಾಯ ಹಾಗೂ ಮರಾಠಿ ಭಾಷಿಕ ಸದಸ್ಯೆಗೆ ಮೇಯರ್, ಉಪಮೇಯರ್ ಸ್ಥಾನ ನೀಡಬೇಕು ಎಂದು ಬಿಜೆಪಿ ಇವರನ್ನು ಆಯ್ಕೆ ಮಾಡಿದೆ.
ಮೇಯರ್, ಉಪಮೇಯರ್ ಆಯ್ಕೆಗೂ ಮುನ್ನವೇ ಸಭಾನಾಯಕನ ಆಯ್ಕೆ ಮಾಡಲಾಗಿದ್ದು ಮಹಾನಗರ ಪಾಲಿಕೆಯ 36ನೇ ವಾರ್ಡ್ ಸದಸ್ಯ ರಾಜಶೇಖರ ಡೋಣಿ ಸಭಾನಾಯಕರನ್ನಾಗಿ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಈ ಸಭಾನಾಯಕನ ಆಯ್ಕೆ ಮಾಡಲಾಗಿದೆ.
ಮುಂಚೆ ಭಾಷಾ ಆಧಾರಿತ ಚುನಾವಣೆ ನಡೆದು ಎಂಇಎಸ್ ಗೆಲುವು ಸಾಧಿಸುತ್ತ ಬಂದಿತ್ತು. ಇದೇ ಮೊದಲ ಬಾರಿ ಪಕ್ಷದ ಚಿಹ್ನೆ ಮೇಲೆ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಡೆದಿತ್ತು. 2021ರ ಸೆ.3ರಂದು ಚುನಾವಣೆ ನಡೆದು ಸೆ.6ಕ್ಕೆ ಫಲಿತಾಂಶ ಬಂದಿದ್ದು ಇಂದು ಮೇಯರ್ ಮತ್ತು ಉಪಮೇಯರ್ ಆಯ್ಕೆಯಾಗಿದ್ದಾರೆ.