ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಮಹಿಳೆಯರಿಗೆ ಮಾ.10 ರಂದು ಬೆಳಗ್ಗೆ 9.30ಕ್ಕೆ ದೇವನಹಳ್ಳಿ ಟೌನ್ ಕ್ರೀಡಾಂಗಣದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ.
2023ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕ್ರೀಡಾಕೂಟ ಆಯೋಜನೆ ಮಾಲಾಗುತ್ತಿದೆ.
ಹೀಗಾಗಿ ಜಿಲ್ಲೆಯ ಮಹಿಳೆಯರು ಅಂದು ಬೆಳಗ್ಗೆ 9.30ಕ್ಕೆ ದೇವನಹಳ್ಳಿ ಟೌನ್ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಬಹುದು. ಕ್ರೀಡಾ ಸ್ಪರ್ಧೆಗಳು ಬೆಳಿಗ್ಗೆ 11.00 ಗಂಟೆಗೆ ಪ್ರಾರಂಭವಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಮಹಿಳೆಯರು ಭಾಗವಹಿಸಬಹುದಾಗಿದೆ.
ಆಯೋಜನೆ ಮಾಡಲಾಗುವ ಕ್ರೀಡೆಗಳ ವಿವರ: 16-19 ವರ್ಷ ಒಳಪಟ್ಟವರಿಗೆ- ಕ್ರಿಕೆಟ್ (ಗುಂಪು)-ಭಾಗವಹಿಸುವವರ ಸಂಖ್ಯೆ-12, 19 ವರ್ಷ ಮೇಲ್ಪಟ್ಟ ಮಹಿಳೆಯರಿಗೆ- ಹಗ್ಗ ಜಗ್ಗಾಟ (ಗುಂಪು)-ಭಾಗವಹಿಸುವವರ ಸಂಖ್ಯೆ-8, 19-40 ವರ್ಷ ಒಳಪಟ್ಟ ಮಹಿಳೆಯರಿಗೆ- ಹಗ್ಗ ಜಗ್ಗಾಟ (ಗುಂಪು)-8.
ಮ್ಯೂಸಿಕಲ್ ಚೇರ್-1, ಮೆಮೋರಿಟೆಸ್ಟ್-1, ಬಾಲ್‌ಇನ್ ದಿ ಬಕೆಟ್-1, 50 ಮೀ ವಾಕ್‌ರೇಸ್-1, ಹೂಪ್ಸ್ರಿಲೇ-1 , 40 ವರ್ಷ ಮೇಲ್ಪಟ್ಟ ಮಹಿಳೆಯರಿಗೆ- ಮ್ಯೂಸಿಕಲ್ ಚೇರ್-1, ಮೆಮೋರಿಟೆಸ್ಟ್-1, ಬಾಲ್‌ಇನ್ ದಿ ಬಕೆಟ್-1, 50 ಮೀ ವಾಕ್‌ರೇಸ್-1, ಹೂಪ್ಸ್ರಿಲೇ-1.
ಸೂಚನೆ: ಕ್ರೀಡಾ ಸ್ಪರ್ಧೆಗಳು ಬೆಳಗ್ಗೆ 11ಗಂಟೆಗೆ ಪ್ರಾರಂಭಗೊಳ್ಳಲಿದ್ದು, ನೋಂದಣಿ ಕಡ್ಡಾಯವಾಗಿರುತ್ತದೆ. ವಯಸ್ಸಿನ ದೃಢೀಕರಣ ಪತ್ರ ಕಡ್ಡಾಯ(ಆಧಾರ್ ಗುರುತಿನ ಚೀಟಿ). ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ವೈಯಕ್ತಿಕ ಆಟಗಳಿಗೆ ವಯೋಮಿತಿ ಪಾಲಿಸತಕ್ಕದ್ದು.
ಕ್ರಿಕೆಟ್ ಕ್ರೀಡೆಯನ್ನು ಟೆನಿಸ್ ಬಾಲ್‌ನಲ್ಲಿ ಆಯೋಜಿಸಲಾಗುವುದು. ಭಾಗವಹಿಸುವ ಮಹಿಳಾ ಕ್ರೀಡಾಪಟುಗಳಿಗೆ ಕ್ಯಾಪ್ ಮತ್ತು ಮಧ್ಯಾಹ್ನದ ಊಟೋಪಾಹಾರದ ವ್ಯವಸ್ಥೆ ಮಾಡಲಾಗುವುದು. ವಿಜೇತರಿಗೆ ಬಹುಮಾನಗಳನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ 9845608598 / 9632778567 ಅನ್ನು ಸಂಪರ್ಕಿಸಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.