NEWSನಮ್ಮರಾಜ್ಯಲೇಖನಗಳು

ಸಾರಿಗೆ ಸಂಘಟನೆಗಳ ಚುನಾವಣೆಗಾಗಿ ಸಮಾನ ಮನಸ್ಕರ ವೇದಿಕೆಯಿಂದ ಸದಸ್ಯತ್ವ ಅಭಿಯಾನ

ಸಾರಿಗೆ ಸಂಘಟನೆಗಳಲ್ಲಿರುವ ಬಣ ರಾಜಕೀಯಕ್ಕೆ ಬಲ್ಲಿಯಾಗುತ್ತಿರುವುದು ನೌಕರರು ಮಾತ್ರ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ನೌಕರರು ಕಳೆದ ಹತ್ತಾರು ವರ್ಷಗಳಿಂದ ಅನುಭವಿಸಿಕೊಂಡು ಬರುತ್ತಿರುವ ಸಮಸ್ಯೆಗಳಿಂದ ಆದಷ್ಟು ಮುಕ್ತಿ ಪಡೆಯಲು ಸದ್ಯಕ್ಕೆ ಈಗ ಇರುವ ಏಕೈಕ ಮಾರ್ಗವೆಂದರೆ ಅದು ನೌಕರರ ಸಂಘಟನೆಗಳ ಚುನಾವಣೆ ನಡೆಸುವುದು ಮಾತ್ರ.

ಅಂದರೆ, ಕಳೆದ 1992ರಿಂದೀಚೆಗೆ ಸಾರಿಗೆ ನೌಕರರ ಸಂಘಟನೆಗಳ ಚುನಾವಣೆ ನಡೆದಿಲ್ಲ. ಹೀಗಾಗಿ ಯಾವುದೇ ಸಂಘಟನೆಯ ಮುಖಂಡರಿಗೂ ಸರ್ಕಾರ ಮಟ್ಟದಲ್ಲಿ ಮತ್ತು ನಿಗಮಗಳ ಆಡಳಿತ ಮಂಡಳಿಯಲ್ಲಿ ತಮ್ಮ ಬೇಡಿಕೆಗಳನ್ನು ಕಟಿಬದ್ಧವಾಗಿ ಕೇಳುವುದಕ್ಕೆ ಯಾವುದೇ ಹಕ್ಕಿಲ್ಲದಂತಾದೆ.

ಹೀಗಾಗಿ ಸಾರಿಗೆ ನೌಕರರು ಮತ್ತವರ ಸಂಘಟನೆಗಳ ಮುಖಂಡರು ಇಡುತ್ತಿರುವ ಬೇಡಿಕೆಗಳ ಬಗ್ಗೆ ಸರ್ಕಾರ ಮತ್ತು ಆಡಳಿತ ಮಂಡಳಿ ಸ್ಪಂದಿಸದೆ ನಾಮ್‌ ಕೇ ವಾಸ್ತೆಗೆ ಸಭೆಗಳನ್ನು ಕರೆದು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಅದಕ್ಕೆ ಇದೇ ಮಾ.17ರಂದು ಸರ್ಕಾರ ಶೇ.15ರಷ್ಟು ವೇತನ ಹೆಚ್ಚಳ ಮಾಡಲಾಗಿದೆ ಎಂದು ಆದೇಶ ಹೊರಡಿಸಿರುವುದೇ ಕಣ್ಣ ಮುಂದೆ ಇರುವ ಸಾಕ್ಷಿ.

ಆದರೆ, ಇದನ್ನು ನಾವು ಒಪ್ಪಲು ಸಾಧ್ಯವಿಲ್ಲ, ನಮಗೆ ಮೂಲ ವೇತನಕ್ಕೆ ಬಿಡಿಎ ಮರ್ಜ್‌ ಮಾಡಿ ಶೇ.25ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದ ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಬಳಿಕ ಸರ್ಕಾರ ಆದೇಶ ಮಾಡಿದ ಶೇ.15ರಷ್ಟು ವೇತನ ಹೆಚ್ಚಳವನ್ನೇ ಒಪ್ಪಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸನ್ಮಾನಕೂಡ ಮಾಡಿ, ನೌಕರರ ಕೆಂಗಣ್ಣಿಗೂ ಗುರಿಯಾಗಿದೆ.

ಅಂದರೆ, ಒಂದು ಚುನಾಯಿತ ಸಂಘಟನೆ ಇದ್ದಿದ್ದರೆ, ಸರ್ಕಾರ ಈ ರೀತಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಆಗುತ್ತಿರಲಿಲ್ಲ. ಜತೆಗೆ ನೌಕರರಿಗೆ ನಾವು ಯಾವ ಸಂಘಟನೆ ಜತೆಗೆ ಹೋಗಬೇಕು ಎಂಬ ಗೊಂದಲವು ಇರುತ್ತಿರಲಿಲ್ಲ. ಈಗ ಸಂಘಟನೆಗಳ ಮುಖಂಡರಲ್ಲಿ ಬಣಗಳು ಹುಟ್ಟಿಕೊಂಡಿದ್ದು, ನೌಕರರ ಹಿತ ಕಾಪಾಡುವುದಕ್ಕಿಂತಲೂ ತಮ್ಮ ಸ್ವ ಪ್ರತಿಷ್ಟೆ ಮೆರೆಯುತ್ತಿರುವುದೇ ಹೆಚ್ಚಾಗಿದೆ.

ಇದು ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಈ ಸಂಘಟನೆಗಳ ಮುಖಂಡರು ಬಿದ್ದಿರುವ ಸ್ವ ಪ್ರತಿಷ್ಟೆಯಿಂದ ನೌಕರರ ಬದುಕು ಆರ್ಥಿಕವಾಗಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದರಿಂದ ಬೇಸತ್ತಿರುವ ನೌಕರರು ಸದ್ಯ ನೌಕರರ ಕೂಟ ಹಾಗೂ ಸಮಾನ ಮನಸ್ಕರ ವೇದಿಕೆ ಆಗ್ರಹಿಸುತ್ತಿರುವ ನೌಕರರ ಸಂಘಟನೆಗಳ ಚುನಾವಣೆ ನಡೆಸಲೇಬೇಕು ಎಂಬ ಅಛಲ ನಿರ್ಧಾರಕ್ಕೆ ಎಲ್ಲ ನೌಕರರು ಸಾಥ್‌ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ, ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದು, ಸದಸ್ಯತ್ವ ಅಭಿಯಾನಕ್ಕೂ ಮಾ.26ರಿಂದ ಚಾಲನೆ ನೀಡಿದೆ.

ಒಂದು ವೇಳೆ ಚುನಾವಣೆ ನಡೆದರೆ, ನೌಕರರಲ್ಲಿ ಇರುವ ಗೊಂದಲವು ಅಂದರೆ, ನಾವು ಯಾವ ಸಂಘಟನೆ ಪರ ನಿಲ್ಲಬೇಕು ಎಂಬುವುದಕ್ಕೂ ಉತ್ತರ ಸಿಗುತ್ತದೆ. ಜತೆಗೆ ಎಲ್ಲ ನೌಕರರು ಒಂದು ಚುನಾಯಿತ ಸಂಘಟನೆ ತೆಗೆದುಕೊಳ್ಳುವ ತೀರ್ಮಾನದಂತೆ ನಡೆದುಕೊಳ್ಳುವುದಕ್ಕೂ ಅನುಕೂಲವಾಗಲಿದೆ. ಹೀಗಾಗಿ ಚುನಾವಣೆ ಮಾಡಲೇ ಬೇಕು ಎಂಬ ಅಗ್ರಹದೊಂದಿಗೆ ಸದಸ್ಯತ್ವ ಅಭಿಯಾನವನ್ನು ಆರಂಭಿದೆ ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆ.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ