ತುಮಕೂರು: ಜಿಲ್ಲೆಯಲ್ಲಿ ಈವರೆಗೂ ಕೋವಿಡ್-19 ಪಾಸಿಟಿವ್ ಕಂಡು ಬಂದಿದ್ದು, ಇದನ್ನು ಹೊರತುಪಡಿಸಿ ಇವರ ಕಾಂಟ್ಯಾಕ್ಟ್ ಇದ್ದವರನ್ನು ಗುರುತಿಸಿ ಜಿಲ್ಲೆಯಲ್ಲಿ 72 ಜನರನ್ನು ಪ್ರತ್ಯೇಕವಾಗಿ ಐಸೋಲೇಶನ್ ವಾರ್ಡ್ನಲ್ಲಿ ಇರಿಸಲಾಗಿದ್ದು, ಎಲ್ಲರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಹಿಸಲಾಗಿದ್ದು ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ತಿಳಿಸಿದರು.
ನಿನ್ನೆ 16 ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳಹಿಸಲಾಗಿತ್ತು. ಅದರಲ್ಲಿ 11 ಮಾದರಿಗಳು ತಿಪಟೂರಿನಿಂದ ಕಳಹಿಸಲಾಗಿತ್ತು. ಇವು ಕೂಡ ನೆಗೆಟಿವ್ ಬಂದಿದೆ. ಆದರೂ ಸಹ ಇವರನ್ನು 14 ದಿನಗಳವರೆಗೆ ಐಸೋಲೇಶನ್‌ನಲ್ಲಿಯೇ ಇರಿಸಲಾಗುವುದು. ನಂತರ ಅವರನ್ನು ಮನೆಗೆ ಕಳಹಿಸಲಾಗುತ್ತದೆ ಎಂದರು.
ಜಿಲ್ಲೆಯಲ್ಲಿರುವ ವಲಸೆ ಕಾರ್ಮಿಕರಿಗಾಗಿ ಕಾರ್ಮಿಕ ಇಲಾಖೆಯ ಅಧಿಕಾರಿಗಳನ್ನು ನೊಡಲ್ ಅಧಿಕಾರಿಯನ್ನಾಗಿ ನೇಮಿಸಿ ಕಾರ್ಮಿಕರ ಪರಿಸ್ಥಿತಿಯನ್ನು ಪರಿಶೀಲಿಸಲಾಗುತ್ತಿದೆ. ಕಾರ್ಮಿಕರಿಗೆ ಯಾವುದೇ ಕೊರತೆಯಾಗದಂತೆ ೨೦ ಕಡೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಜಿಲ್ಲೆಯಲ್ಲಿ 11 ಶೆಲ್ಟರ್‌ಗಳನ್ನು ಗುರುತಿಸಲಾಗಿದೆ. ಕಾರ್ಮಿಕರು, ಬಡವರು ನಿರ್ಗತಿಕರಿಗೆ ಸೂರು ಕಲ್ಪಿಸಲು ಕ್ರಮವಹಿಸಲಾಗುವುದು. ಅಲ್ಲದೇ ಇದಕ್ಕೆಲ್ಲಾ ದಾನಿಗಳು ಮುಂದೆ ಬಂದಿದ್ದು, ಸಿದ್ದಗಂಗಾ ಮಠದ ಸ್ವಾಮೀಜಿಗಳು ವಲಸೆ ಬಂದ ಕಾರ್ಮಿಕರು, ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ ಅವರಿಗೆ ಜಿಲ್ಲಾಡಳಿತ ವತಿಯಿಂದ ಅಭಿನಂದನೆ ಸಲ್ಲಿಸಿದರು.
ರಾಜ್ಯದಲ್ಲಿ 84 ಪಾಸಿಟಿವ್ ವ್ಯಕ್ತಿಗೆ ಚಿಕಿತ್ಸೆ
ತುಮಕೂರು ಜಿಲ್ಲೆಯ ರಾಜ್ಯದ 84 ನೇ ಸೋಂಕಿತ ವ್ಯಕ್ತಿಗೆ ಪಾಸಿಟಿವ್ ಎಂದು ಗುರುತಿಸಿದ ಮೇಲೆ ಬೆಂಗಳೂರಿನ ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ ಪರಿಸ್ಥಿತಿ ಸ್ಥಿರವಾಗಿದೆ. ಆಸ್ಪತ್ರೆಯ ಪಕ್ಕದಲ್ಲಿಯೇ ಅವರ ತಾಯಿಯನ್ನೂ ಸಹ ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆಗೆ ಒಳಪಡಿಸಿ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ಎಂದು ಬಂದಿದ್ದರೂ ಕೂಡ ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು 14 ದಿವಸಗಳ ಕಾಲ ಐಸೋಲೇಷನ್ ಮಾಡಲಾಗುವುದು ಹಾಗೂ ವೈರಾಣು ಎಷ್ಟು ದಿವಸಗಳಲ್ಲಿ ಉಲ್ಭಣಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲದ ಕಾರಣ ೨೮ ದಿವಸಗಳವರೆಗೆ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.