ಲುಮುಟ್: ಆಗಸದಲ್ಲೇ ಡಿಕ್ಕಿ ಹೊಡೆದುಕೊಂಡ ನೌಕಾಪಡೆಯ 2 ಹೆಲಿಕಾಪ್ಟರ್‌ಗಳು ನೋಡ ನೋಡುತ್ತಿದ್ದಂತೆ ಪತನವಾಗಿರುವ ಘಟನೆ ಮಲೇಷ್ಯಾದ ಲುಮುಟ್ ಪಟ್ಟಣದ ನೌಕಾನೆಲೆಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ಹೆಲಿಕಾಪ್ಟರ್‌ಗಳು ಪರೇಡ್ ನಡೆಸುತ್ತಿರುವಾಗ ಆಗಸದಲ್ಲೇ ಹೆಲಿಕಾಪ್ಟರ್‌ಗಳು ಡಿಕ್ಕಿ ಹೊಡೆದಕೊಂಡ ವಿಡಿಯೋ ಭಯಾನಕವಾಗಿದ್ದು, ದುರಂತದಲ್ಲಿ 10 ಮಂದಿ ಮೃತಪಟ್ಟಿದ್ದಾರೆ.
ಅತ್ಯಂತ ಸಮೀಪದಲ್ಲಿ ಹಾರಾಟ ನಡೆಸಿದ ಹೆಲಿಕಾಪ್ಟರ್‌ಗಳ ಮಧ್ಯೆ ಭಯಾನಕ ಡಿಕ್ಕಿ ಸಂಭವಿಸಿದೆ. ಆಕಾಶದಲ್ಲೇ ಹೆಲಿಕಾಪ್ಟರ್ ಛಿದ್ರ, ಛಿದ್ರವಾದ ದೃಶ್ಯಗಳು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿವೆ. ಆ ಪತನವಾದ ಭಯಾನಕ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪತನವಾದ ಬಳಿಕ ಹೆಲಿಕಾಪ್ಟರ್‌ನ ಅವಶೇಷಗಳು ನೆಲಕ್ಕೆ ಅಪ್ಪಳಿಸಿದ್ದು, ದುರಂತಕ್ಕೆ ಸಾಕ್ಷಿಯಾಗಿದೆ. ಮಲೇಷ್ಯಾ ಮಿಲಿಟರಿ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ದುರಂತ ನಡೆದಿದ್ದು ಹೇಗೆ?
ಮಲೇಷ್ಯಾದ ಲುಮುಟ್‌ನಲ್ಲಿರುವ ರಾಯಲ್ ಮಲೇಷಿಯನ್ ನೌಕಾನೆಲೆಯಲ್ಲಿ ಇಂದು ಬೆಳಗ್ಗೆ 9.32ರ ಸಮಯಕ್ಕೆ ಸರಿಯಾಗಿ ಈ ದುರಂತ ನಡೆದಿದೆ. ಹೆಲಿಕಾಪ್ಟರ್‌ಗಳು ಆಕಾಶದಲ್ಲಿ ಅಭ್ಯಾಸ ಮಾಡುವಾಗ 2 ಹೆಲಿಕಾಪ್ಟರ್‌ಗಳ ಮಧ್ಯೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.
ಮಲೇಷ್ಯಾ ನೌಕಾಪಡೆಗೆ ಸೇರಿದ TDLM ಹಾಗೂ HOM-AW139 ಹೆಲಿಕಾಪ್ಟರ್‌ಗಳು ದುರಂತಕ್ಕೀಡಾಗಿದ್ದು, ನೌಕಾಪಡೆಯ ಸಿಬ್ಬಂದಿಗಳು ಆಗಸದಲ್ಲಿ ರಿಹರ್ಸಲ್ ಮಾಡುವಾಗ ನಡೆದ ಅತ್ಯಂತ ಘೋರ ಘಟನೆ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Really incident took place in Malaysia.
Two military helicopters collided with each other in midair in Lumut, Malaysia. 10 Casualties 💔#Malaysia #HelicopterCrash pic.twitter.com/136CcDZudG— Ritesh Yadav (@IPLSelfieIn) April 23, 2024