ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಮೊಬೈಲ್ ಕಸಿದ ವಾನರವೊಂದು ಮರವೇರಿ ಭಕ್ತರೊಬ್ಬರಿಗೆ ಕೆಲಕಾಲ ಆಟವಾಡಿಸಿದ ಘಟನೆ ಬೆಟ್ಟದ ತಪ್ಪಲಿನಲ್ಲಿ ನಡೆದಿದೆ.
ಹಾಸನದಿಂದ ಬಂದ ಕುಟುಂಬ ನಾಡದೇವಿ ಚಾಮುಂಡಿಯ ದರ್ಶನ ಪಡೆಯಲು ಮೆಟ್ಟಿಲು ಮಾರ್ಗದಲ್ಲಿ ಸಾಗಲು ಸಜ್ಜಾಗಿದ್ದರು. ಪಾದದ ಬಳಿ ಇರುವ ಚಾಮುಂಡಿ ವಿಗ್ರಹಕ್ಕೆ ಪೂಜೆ ಸಲ್ಲಿಸುವ ವೇಳೆ ಮಹಿಳೆಯ ಕೈಯಲ್ಲಿದ್ದ ಪರ್ಸ್ ಕಸಿದ ಕೋತಿ ಮರವೇರಿ ಕುಳಿತಿದೆ.
ಆ ಬಳಿಕ ಪರ್ಸ್ ನಲ್ಲಿದ್ದ ಒಂದೊಂದೇ ವಸ್ತುಗಳನ್ನು ಬಿಸಾಡಿದ ಮಂಗ ಕೊನೆಗೆ ಮೊಬೈಲ್ ಬಿಡದೆ ಕೊಂಬೆಯಿಂದ ಕೊಂಬೆಗೆ ಜಿಗಿಯುತ್ತ ಭಕ್ತರನ್ನು ಪರದಾಡುವಂತೆ ಮಾಡಿದೆ.
ಈ ವೇಳೆ ಮೊಬೈಲ್ ಪಡೆದುಕೊಳ್ಳುವುದುಕ್ಕೆ ವಾನರನಿಗೆ ಬಾಳೆಹಣ್ಣೀನ ಆಮಿಷ ಒಡ್ಡಿದ್ದಾರೆ. ಆದರೆ ಮಂಗಮಾತ್ರ ಮೊಬೈಲ್ ಬಿಡದೆ. ತನ್ನ ಚೇಷ್ಟೆಯನ್ನು ಮುಂದುವರಿಇದೆ. ಹೀಗೆ ವಾನರ ಸುಮಾರು ಅರ್ಧಗಂಟೆ ಕಾಲ ತನ್ನ ಕುಚೇಷ್ಟೆ ಮುಂದುವರಿಸಿ ಕೊನೆಗೆ ತುಪುಕ್ ಎಂದುಮೊಬೈಲ್ ಬಿಸಾಡಿತು.
ಸದ್ಯ ಕೊನೆಗೂ ಮೊಬೈಲ್ ಚಿಕ್ಕಿತಲ್ಲ ಎಂದು ಭಕ್ತರು ನೆಮ್ಮದಿಯಿಂದ ನಾಡದೇವಿಯ ದರ್ಶನಕ್ಕೆ ತೆರಳಿದರು. ಈ ವಿಡಿಯೋ ಜಾಲತಾಣದಲ್ಲಿ ಈಗ ಫುಲ್ ವೈರಲ್ ಆಗುತ್ತದ್ದು ವಾರನರ ಆಟವನ್ನು ತಾಮಾಸೆಯಿಂದಲೇ ನೋಡಿ ಖುಷಿಪಡುತ್ತಿದ್ದಾರೆ.