ಬೆಂಗಳೂರು: ಮದ್ಯಪ್ರಿಯರಿಗೆ ಸರ್ಕಾರ ಮುಕ್ತ ಅವಕಾಶ ನೀಡಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವೈನ್‌ಶಾಪ್ ಮುಂದೆ ಕುಡುಕರು ಸರತಿ ಸಾಲಿನಲ್ಲಿ ನಿಂತು ಮದ್ಯಖರೀದಿಯಲ್ಲಿ ತೊಡಗಿದ್ದಾರೆ.
ಇನ್ನು ಕೆಲಕಡೆ ನೂಕುನುಗ್ಗಲು ಉಂಟಾಗಿ ಪೊಲೀಸರು ಲಾಠಿಯನ್ನು ಬೀಸಿರುವ ಘಟನೆಯು ನಡೆದಿದೆ. ಬೆಂಗಳೂರಿನ ಆನೇಕಲ್‌ನಲ್ಲಿ ಕೆಲ ಮದ್ಯಪ್ರಿಯರು ಸರತಿ ಸಾಲಿನಲ್ಲಿ ನಿಲ್ಲುವ ಬದಲು ಗುಂಪುಗುಂಪಾಗಿ ಬಂದಿದ್ದರಿಂದ ಪೊಲೀಸರು ಲಾಠಿಗೆ ಕೆಲಸ ಕೊಡಬೇಕಾಯಿತು.
ಒಬ್ಬರಿಗೆ ಒಂದು ಪುಲ್‌ಬಾಟಲ್ ಕೊಡುತ್ತಿದ್ದಾರೆ. ಆದರೆ ಕೆಲವರು ಇನ್ನು ಹೆಚ್ಚು ಬೇಕು ಎಂದು ಕೇಳುತ್ತಿದ್ದರೆ. ಇನ್ನು ಕೆಲವರು ಕೋಟ್ರುಬಾಟಲ್ ಸಾಕು ನಮ್ಮಲ್ಲಿ ಹಣ ಇಲ್ಲ ಎಂದು ಹೇಳುತ್ತಿದ್ದಾರೆ.
ನಾವು ಕುಡಿಯದಿದ್ದರೆ ಮೈಂಡ್ ಬ್ಲಾಕ್ ಆಗುತ್ತದೆ. ಇಲ್ಲಂದರೆ ಕೆಲಸ ಮಾಡುವುದಕ್ಕೂಆಗುವುದಿಲ್ಲ. ನಾವು ಬೆಳಗ್ಗೆ ಎದ್ದ ಕೂಡಲೇ ಕುಡಿಯಲೇ ಬೇಕು. ಇದೇ ನಮಗೆ ಕಾಫಿ ಟೀ ಎಂದು ಹೇಳುತ್ತಿದ್ದಾರೆ.
ಒಟ್ಟಾರೆ ಮದ್ಯದಂಗಡಿ ತೆರೆದು 41ದಿನಗಳಿಂದ ನೆಮ್ಮದಿಯಾಗಿದ್ದ ಹಲವು ಕುಟುಂಬಗಳಲ್ಲಿ ಮತ್ತೆ ಗಲಾಟೆ ಗದ್ದಲ ಅಶಾಂತಿ ನೀಡುವುದಕ್ಕೆ ಸರ್ಕಾರ ಉತ್ತೇಜನ ನೀಡಿದಂತ್ತಾಗಿದೆ. ಕುಡುಕರಿರುವ ಶೇ.90ರಷ್ಟು ಕುಟುಂಬಗಳು ಮದ್ಯ ನಿಲ್ಲಿಸಿಬಿಡಿ ಎಂದು ಎಷ್ಟೇ ಹೇಳಿದರು ಕೇಳಿಸಿಕೊಳ್ಳದ ಸರ್ಕಾರ ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಮುಂದಾಗಿರುವುದು ಬಡವರ ನೆಮ್ಮದಿಗೆ ತಣ್ಣೀರೆರಚಿದಂತೆ ಆಗುತ್ತಿದೆ.