ಮಂಗಳೂರು : ಕೋವಿಡ್-19 ಹಿನ್ನೆಲೆಯಲ್ಲಿ ಭಾರತೀಯ ಹೋಮಿಯೋಪಥಿ ಅಸೋಸಿಯೇಷನ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕರಿಗೆ ಉಚಿತವಾಗಿ ಹೋಮಿಯೋಪಥಿ ಔಷಧಿಗಳನ್ನು ಗೃಹರಕ್ಷಕರಿಗೆ ವಿತರಣೆ ಮಾಡಲಾಯಿತು.
ಔಷಧ ವಿತರಣೆ ಮಾಡಿದ ಶಾಸಕ ವೇದವ್ಯಾಸ ಕಾಮತ್ ಮಾತನಾಡುತ್ತಾ ಸಮಾಜವನ್ನು ಮುಂದೆ ನಿಂತು ರಕ್ಷಿಸುವ ಗೃಹರಕ್ಷಕರ ಜವಾಬ್ದಾರಿ ಸಮಾಜಕ್ಕಿದೆ.ಗೃಹರಕ್ಷಕರ ಬೆನ್ನ ಹಿಂದೆ ಸಮಾಜಯಾವಾಗಲೂ ಗಟ್ಟಿಯಾಗಿ ನಿಲ್ಲಬೇಕು, ಅವರಿಗೆ ಕೋವಿಡ್-19 ಎದುರಿಸಲು ನೈತಿಕವಾದ ಧೈರ್ಯ ನೀಡಬೇಕು ಎಂದು ಕರೆ ನೀಡಿದರು.
ಮೇಯರ್ ದಿವಾಕರ್, ಜಿಲ್ಲಾ ಸಮಾದೇಷ್ಟಡಾ. ಮುರಲೀ ಮೋಹನ್‍ಚೂಂತಾರು, ಐಎಚ್‍ಎಂಎ ಅಧ್ಯಕ್ಷ ಡಾ. ಪ್ರವೀಣ್‍ಕುಮಾರ್, ಕಾರ್ಯದರ್ಶಿ ಡಾ. ಅವಿನಾಶ್.ವಿ.ಎಸ್. ಆಳ್ವಾಸ್ ಹೋಮಿಯೋಪಥಿಕ್ ಕಾಲೇಜಿನ ಪ್ರಾಂಶುಪಾಲ ಡಾ: ಪ್ರವೀಣ್‍ರಾಜ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು. 200 ಮಂದಿ ಗೃಹರಕ್ಷಕರಿಗೆ ಔಷಧಿಗಳನ್ನು ವಿತರಿಸಲಾಯಿತು.