NEWSದೇಶ-ವಿದೇಶಸಂಸ್ಕೃತಿ

ಪಿಂಚಣಿದಾರರ ಅನುಕೂಲಕ್ಕಾಗಿ ಹೊಸ ಮಾರ್ಗಸೂಚಿ ಬಿಡುಗಡೆ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ಹೊಸ ಬದಲಾವಣೆ ಮಾಡಿದ್ದು, ಆ ಮಾರ್ಗದರ್ಶಿ ಸೂತ್ರವನ್ನು ಬಿಡುಗಡೆ ಮಾಡಿದೆ. ಇದರಿಂದ 65 ಲಕ್ಷ ಜನರು ಪ್ರಯೋಜನ ಪಡೆಯಲಿದ್ದಾರೆ.

ಹೊಸ ಮಾರ್ಗದರ್ಶಿ ಹೀಗಿದೆ

  • ತಮ್ಮ ಮೊದಲ ಪಿಂಚಣಿ ಹಣ ಪಡೆಯಲು, ಬ್ಯಾಂಕ್‌ಗಳಿಗೆ ಹೋಗಲೇಬೇಕಾಗಿಲ್ಲ.  ಖಾತೆ ತೆರೆಯಲು, ಪಿಂಚಣಿದಾರನ ಉಪಸ್ಥಿತಿ ಬೇಕಿಲ್ಲ.
  • ಪಿಂಚಣಿದಾರ ಸಂಗಾತಿಯೊಂದಿಗೆ ಬ್ಯಾಂಕ್‌ನಲ್ಲಿ ಜಂಟಿ ಖಾತೆ ಹೊಂದಿದ್ದರೆ, ಅವರು ಮೃತಪಟ್ಟ ಅನಂತರ ಅವರ ಸಂಗಾತಿ ಬ್ಯಾಂಕ್‌ಗೆ ಫಾರ್ಮ್ 14 ಅನ್ನು ಸಲ್ಲಿಸುವ ಅಗತ್ಯವಿಲ್ಲ. ಬ್ಯಾಂಕ್‌ಗಳು ಹೊಸ ಖಾತೆ ತೆರೆಯಿರಿ ಎನ್ನುವಂತಿಲ್ಲ. ಸಂಗಾತಿ ಮರಣ ಪ್ರಮಾಣಪತ್ರ ಸಲ್ಲಿಸಿದರೆ ಸಾಕು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ  https://play.google.com/store/apps/detail

  • ಪಿಂಚಣಿದಾರರು ಮೃತಪಟ್ಟ ವೇಳೆ, ಬ್ಯಾಂಕ್‌ಗಳು ತಾವಾಗಿಯೇ ಪಿಂಚಣಿ ಯಾರಿಗೆ ಸಲ್ಲಬೇಕು ಎನ್ನುವುದನ್ನು ಗುರ್ತಿಸಬೇಕು. ಒಂದು ವೇಳೆ ಸಂಗಾತಿ ಹೊರತುಪಡಿಸಿ, ಸಂಬಂಧಿಕರಿಗೆ ಸಲ್ಲುವುದಾದರೆ, ತಾವು ಆರ್ಥಿಕ ಗಳಿಕೆ ಹೊಂದಿಲ್ಲ ಎಂಬ ಪ್ರಮಾಣಪತ್ರ ಸಲ್ಲಿಸಬೇಕು.
  • ಪಿಂಚಣಿ ಪಡೆಯುವ ಪ್ರತೀ ವ್ಯಕ್ತಿ, ಪ್ರತೀವರ್ಷ ನವೆಂಬರ್‌ನಲ್ಲಿ ತಮ್ಮ ಜೀವಿತ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಬ್ಯಾಂಕ್‌ಗಳು ಅಂತರ್ಜಾಲದ ಮೂಲಕ ಆಧಾರ್‌ ಆಧಾರಿತ ಜೀವನ್‌ ಪ್ರಮಾಣ್‌ ಅನ್ನು ಅಂಗೀಕರಿಸಬಹುದು. ಇನ್ನು ಬ್ಯಾಂಕ್‌ಗಳು ಪ್ರತೀವರ್ಷ ಅ.24, ನ.1, ನ.15, ನ. 25ಕ್ಕೆ ಎಲ್ಲ ಪಿಂಚಣಿದಾರರಿಗೆ ಎಸ್‌ಎಂಎಸ್‌, ಇಮೇಲ್‌ಗ‌ಳ ಮೂಲಕ ಜೀವಿತ ಪ್ರಮಾಣ ಪತ್ರ ಸಲ್ಲಿಸುವಂತೆ ಎಚ್ಚರಿಸಬೇಕು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ  https://play.google.com/store/apps/detail

  • ಒಂದು ವೇಳೆ ಪಿಂಚಣಿಯು ಶಾಶ್ವತ ಅಂಗವೈಕಲ್ಯ ಮಗುವಿಗೆ ಹೋಗುತ್ತಿದ್ದರೆ, ಆ ಮಗು ಇನ್ನು ಪ್ರತೀವರ್ಷ ಅಂಗವೈಕಲ್ಯ ಹೊಂದಿರುವ ಬಗ್ಗೆ ಹೊಸ ಪ್ರಮಾಣಪತ್ರ ಸಲ್ಲಿಸುವ ಅಗತ್ಯವಿಲ್ಲ. ಕೇವಲ ತಾನು ಗಳಿಕೆ ಮಾಡುತ್ತಿಲ್ಲ ಎಂಬ ಪ್ರಮಾಣಪತ್ರ ಸಲ್ಲಿಸಿದರೆ ಸಾಕು. ತಾತ್ಕಾಲಿಕ ವೈಕಲ್ಯ ಹೊಂದಿದ್ದರೆ, 5 ವರ್ಷಕ್ಕೊಮ್ಮೆ ಪೋಷಕರು ಪ್ರಮಾಣಪತ್ರ ಸಲ್ಲಿಸಬೇಕು.
  • ಇನ್ನು ಪ್ರತೀವರ್ಷ ಡಿ.1ರಂದು ಬ್ಯಾಂಕ್‌ಗಳು ಜೀವಿತ ಪ್ರಮಾಣಪತ್ರ ಸಲ್ಲಿಸದಿದ್ದವರ ಪಟ್ಟಿ ತಯಾರಿಸಬೇಕು. ಅವರಿಗೆ ಸಂದೇಶ ಕಳುಹಿಸಿ, ಪ್ರಮಾಣಪತ್ರವನ್ನು ಮನೆ ಬಾಗಿಲಿಗೆ ಬಂದು ಪಡೆದುಕೊಳ್ಳುತ್ತೇವೆ ಎಂದು ಮಾಹಿತಿ ನೀಡಬೇಕು.
  • ಪಿಂಚಣಿದಾರರ ಮರಣ ಬಳಿಕ‌ ಸಂಗಾತಿ ಪಿಂಚಣಿ ಪಡೆಯುತ್ತಿದ್ದ ಪಕ್ಷದಲ್ಲಿ, 6 ತಿಂಗಳಿಗೊಮ್ಮೆ, ತಾವು ಮರು ಮದುವೆಯಾಗಿಲ್ಲ ಎಂಬ ಪ್ರಮಾಣಪತ್ರ ಸಲ್ಲಿಸಬೇಕು. ಒಂದು ವೇಳೆ ಮದುವೆಯಾದರೆ ಪಿಂಚಣಿ ರದ್ದು ಮಾಡಲಾಗುವುದು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ  https://play.google.com/store/apps/detail

Leave a Reply

error: Content is protected !!
LATEST
ಆಟೋಟದಲ್ಲಿ ಕೂಟದ ಕಟ್ಟಾಳುಗಳು ಬ್ಯುಸಿ: ನೌಕರರು ನಂಬಿ 4ವರ್ಷ ಕಳೆದರೂ ಈಡೇರೇಯಿಲ್ಲ ಬೇಡಿಕೆ - ದಿಕ್ಕು ತಪ್ಪುತ್ತಿದೆಯೇ ... BMTC ಬಸ್‌-ಟ್ರಕ್‌-ಇನೋವಾ ಕಾರು ನಡುವೆ ಸರಣಿ ಅಪಘಾತ: ಇಬ್ಬರು ಮೃತ, ಬಸ್‌ ಚಾಲಕನ ಸ್ಥಿತಿ ಗಂಭೀರ KSRTC: ಕೂಟದ ಅಜೆಂಡ ದಿಕ್ಕು ತಪ್ಪುತ್ತಿದೆಯೇ - ಸರಿ ಸಮಾನ ವೇತನದ ಪಾಡೇನು? 8ಕಿಮೀ BMTC ಬಸ್‌ ಹಿಂಬಾಲಿಸಿಕೊಂಡು ಬಂದು ಚಾಲಕನ ಮೇಲೆ ಹಲ್ಲೆಮಾಡಿ ಪೊಲೀಸರ ಅತಿಥಿಯಾದ ಬೈಕ್‌ ಸವಾರ ಸರಿ ಸಮಾನ ವೇತನಕ್ಕೆ ಅಡ್ಡಗಾಲು ಹಾಕುವುದನ್ನು ಈಗಲಾದರೂ ಬಿಡಿ- ಸಾರಿಗೆ ಅಧಿಕಾರಿಗಳು-ನೌಕರರ ಆಗ್ರಹ ತೆರಿಗೆ ಬಾಕಿ ಉಳಿಸಿಕೊಂಡಿರುವ ವಸತಿಯೇತರ ಕಟ್ಟಡಗಳಿಗೆ ಬೀಗಹಾಕಿ ವಸೂಲಿ ಮಾಡಿ: ತುಷಾರ್ ಗಿರಿನಾಥ್ ಅಂಗನವಾಡಿ ನೌಕರರ ಸರ್ಕಾರಿ ನೌಕರರಾಗಿ ಪರಿಗಣಿಸಿ: ಹೈಕೋರ್ಟ್ ತೀರ್ಪಿನಿಂದ ಕರ್ನಾಟಕದ ಅಂಗನವಾಡಿ ನೌಕರರಿಗೂ ಬಲ ವೀರವನಿತೆ ಒನಕೆ ಓಬವ್ವ ಜಯಂತಿ: ಮಹಿಳೆಯರು ಶೌರ್ಯ, ಧೈರ್ಯ ಬೆಳೆಸಿಕೊಳ್ಳಿ-ಸಚಿವ ಮುನಿಯಪ್ಪ ಮೈಸೂರಿನಲ್ಲಿ ಸಚಿವರಿಗೆ ಕಪಾಳ ಮೋಕ್ಷ: ಎಚ್‌ಡಿಕೆ ಆರೋಪ ಸುಳ್ಳು ಎಂದ ಡಿಸಿಎಂ ಶಿವಕುಮಾರ್‌ ಮುಡಾ ಪ್ರಕರಣದ ಹೈಕೋರ್ಟ್‌ ತೀರ್ಪಿನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಸಚಿವ ಜಮೀರ್‌ ವಿರುದ್ಧ ಕ್ರಮಕ್ಕೆ ರಾಜ್ಯಾಪಾಲರ ಸೂಚನ...