ಬೆಂಗಳೂರು: ಪಾದರಾಯನಪುರದ ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾ ಅವರಿಗೆ ಕೊರೊನಾ ಪಾಸಿಟಿವ್ ಇರುವ ಹಿನ್ನೆಲೆಯಲ್ಲಿ ಕ್ವಾರಂಟೈನ್ ವಿಧಿಸಲು ಸರ್ಕಾರ ಮುಂದಾಗಿದೆ. ಆದರೆ ಇಮ್ರಾನ್ ಮಾತ್ರ ಮನೆಯಿಂದ ಹೊರಗೆ ಬಂದು ಕ್ವಾರಂಟೈನ್ ಆಗಲು ಒಪ್ಪಿಕೊಂಡಿಲ್ಲ.
ಇದರಿಂದ ಕಳೆದ 14 ಗಂಟೆಯಿಂದ ಆಬುಂಲೆನ್ಸ್ ಅನ್ನು ಇಮ್ರಾನ್ ಮನೆ ಮುಂದೆ ನಿಲ್ಲಿಸಿಕೊಂಡಿ ಆರೋಗ್ಯ ಅಧಿಕಾರಿಗಳು ಕಾಯುತ್ತಿದ್ದಾರೆ. ಆದರೆ ಇಮ್ರಾನ್ ಮನೆಯಿಂದ ಹೊರಗೆ ಬರದೆ ಅಧಿಕಾರಿಳಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಇನ್ನೊಂದೆಡೆ ಇಮ್ರಾನ್ ಅವರನ್ನು ಮನೆಯಿಂದ ಕರೆದುಕೊಂಡು ಹೋಗಲು ಅಧಿಕಾರಿಗಳು ಭಯಪಡುತ್ತಿದ್ದಾರೆ. ಕಾರಣ ಪಾದರಾಯನಪುರದಲ್ಲಿ ಗಲಾಟೆ ಆಗಬಹುದು ಎಂಬ ಭಯ. ಈ ಹಿನ್ನೆಲೆಯಲ್ಲಿ ಇಮ್ರಾನ್ ಯಾವಾಗ ಮನೆಯಿಂದ ಹೊರಗೆ ಬರುತ್ತಾರೋ ಆಗಲೇ ಕರೆದುಕೊಂಡು ಹೋಗೋಣ ಎಂದು ಕಾಯುತ್ತಿದ್ದಾರೆ.
ಆದರೆ, ಅಧಿಕಾರಿಗಳು 14 ತಾಸು ಕಾದರೂ ಮನೆಯಿಂಸ ಹೊರ ಬರದ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆಯೊಂದಿಗೆ ಕರೆದುಕೊಂಡು ಹೋಗಲು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಇಮ್ರಾನ್ ಪಾಷಾ ಅವರಿಗೂ ಆಯುಕ್ತರು ಎಚ್ಚರಿಕೆ ನೀಡಿದ್ದು, ನೀವು ಮನೆಯಿಂದ ಹೊರ ಬರದಿದ್ದರೆ ನಿಮ್ಮನ್ನು ಅರೆಸ್ಟ್ ಮಾಡಿಕೊಂಡು ಹೋಗಬೇಕಾಗುತ್ತದೆ. ಕಾರಣ ಕೊರೊನಾ ವಿಶ್ವಮಾರಿ ತುಂಬಾ ಆಪಾಯಕಾರಿ ಅಲ್ಲದಿದ್ದರು ಇದರ ಸೋಂಕು ಶೀಘ್ರೆದಲ್ಲೇ ಒಬ್ಬರಿಂದ ಒಬ್ಬರಿಗೆ ಹರಡಿ ಇನ್ನಷ್ಟು ಜನರನ್ನು ಆವರಿಸುವ ಆತಂಕ ಇದೆ ಎಂದು ತಿಳಿಸಿದ್ದಾರೆ.
ಆದರೂ, ಇಮ್ರಾನ್ ಪಾಷಾ ಅವರು ಮಾತ್ರ ಈಗ ಬರುತ್ತೇನೆ ಇರಿ ಸಾರ್ ಎಂದು ಅಧಿಕಾರಿಗಳಿಗೆ ಹೇಳುತ್ತಲೇ ಮನೆಯಿಂದ ಹೊರಬರುತ್ತಿಲ್ಲ. ಇದು ಆ ಪೊಲೀಸ್ ಅಧಿಕಾಋಿಗಳು ಮತ್ತು ಆರೋಗ್ಯ ಅಧಿಕಾರಿಗಳ ತಲೆ ಬಿಸಿಯನ್ನು ಹೆಚ್ಚಿಸುತ್ತಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail