ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಶತಕ ಬಾರಿಸುವುದನ್ನೇ ಮುಂದುವರಿಸಿದ್ದು, ಇಂದು ಕೂಡು 141 ಹೊಸ ಪ್ರಕರಣಗಳು ದೃಢಪಟ್ಟಿದ್ದು ಈ ಮೂಲಕ ರಾಜ್ಯದಲ್ಲಿ 2,922 ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಅದರಲ್ಲಿ ಮಹಿಳೆ ಒಬ್ಬರು ಮೃತಪಟ್ಟಿದ್ದಾರೆ.
ಬೀದರ್ನಲ್ಲಿ 47 ವರ್ಷದ ಮಹಿಳೆ ಸೋಂಕಿನಿಂದ ಇಂದು ಮೃತಪಟ್ಟಿದ್ದು ಈವರೆಗೆ ಕೊರೊನಾದಿಂದ ಅಸುನೀಗಿದವರ ಸಂಖ್ಯೆ 51ಕ್ಕೆ ಏರಿಕೆ ಆಗಿದೆ. (ಇದರಲ್ಲಿ ಎರಡು ಅನ್ಯಕಾರಣದಿಂದ ಬಲಿಯಾಗಿದ್ದಾರೆ).
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಇಂದು ದೃಢಪಟ್ಟಿರುವ 141ಪ್ರಕರಣಗಳ ಪೈಕಿ ಬಹುತೇಕರು ಅಂತಾರಾಜ್ಯ ಸಂಪರ್ಕ ಹೊಂದಿದ್ದಾರೆ. 90 ಜನ ಅಂತಾರಾಜ್ಯ ಪ್ರಯಾಣಿಕರಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಗರಿಷ್ಠ 33 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಯಾದಗಿರಿಯಲ್ಲಿ 18, ಕಲಬುರಗಿ 2, ಉಡುಪಿ 13, ಬೆಳಗಾವಿ 1, ದಾವಣಗೆರೆ 4, ಹಾಸನ 13, ಬೀದರ್ 10, ದಕ್ಷಿಣ ಕನ್ನಡ 14, ವಿಜಯಪುರ 11, ಮೈಸೂರು 2, ಉತ್ತರಕನ್ನಡ 2, ಧಾರವಾಡ 2, ಶಿವಮೊಗ್ಗ 6, ಚಿತ್ರದುರ್ಗದಲ್ಲಿ 1, ತುಮಕೂರು 1, ಕೋಲಾರ 3, ಬೆಂಗಳೂರು ಗ್ರಾಮೀಣ 1, ಹಾವೇರಿಯಲ್ಲಿ4 ಹೊಸ ಪ್ರಕರಣ ದೃಢಪಟ್ಟಿವೆ ಇಂದು ಸಂಜೆ ಆರೋಗ್ಯ ಇಲಾಖೆ ನೀಡಿದ ಬುಲೆಟಿನ್ನಲ್ಲಿ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಶನಿವಾರ ಒಂದೇ ದಿನ 103 ಮಂದಿ ಸೋಂಕಿತರು ಗುಣವಾಗಿದ್ದು, ಇವರು ಸೇರಿ ಇದುವರೆಗೆ 997ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. 1874 ಮಂದಿಯಲ್ಲಿ ಸಕ್ರಿಯವಾಗಿದೆ. ಪ್ರಸ್ತುತ 15 ಮಂದಿ ಕೊರೊನಾ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೇಶದಲ್ಲಿ 165,829 ಕ್ಕೇರಿದ ಸೋಂಕಿತರ ಸಂಖ್ಯೆ
ಇನ್ನು ದೇಶದಲ್ಲಿ ಈವರೆಗೆ 174,355 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. 4,982 ಮಂದಿ ಮೃತಪಟ್ಟಿದ್ದಾರೆ. 82,804 ಮಂದಿ ರೋಗಮುಕ್ತರಾಗಿದ್ದಾರೆ. ಪ್ರಪಂಚಾದ್ಯಂತ ಈವರೆಗೆ 6,058,922 ಜನರಲ್ಲಿ ಸೋಂಕು ಇರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ. ಇನ್ನು 367,402 ಜನರು ಮೃತಪಟ್ಟಿದ್ದಾರೆ 2,682,777 ಮಂದಿ ರೋಗದಿಂದ ಮುಕ್ತಗೊಂಡಿದ್ದಾರೆ. view by country
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail