ಚಿಕ್ಕಬಳ್ಳಾಪುರ: ಇಡೀ ವಿಶ್ವವೇ ಎದುರಿಸುತ್ತಿರುವ ಕೊರೊನಾ ವೈರಸ್‌ಗೆ ನಮ್ಮ ರಾಜ್ಯದಲ್ಲಿ ಉತ್ತಮ ರೀತಿಯಲ್ಲಿ ನಿಯಂತ್ರಣವೇರಲು ರಾತ್ರಿ ಹಗಲು ದುಡಿದಂತಹ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ, ಪೊಲೀಸ್ ಇಲಾಖೆ, ವೈದ್ಯರು, ನರ್ಸ್‌ಗಳು, ಪೊಲೀಸರು, ಪೌರಕಾರ್ಮಿಕರು, ಆಶಾಕಾರ್ಯಕರ್ತರು ಹಾಗೂ ಪ್ರತಿಯೊಬ್ಬ ನಾಗರಿಕನೂ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸುಧಾಕರ್ ತಿಳಿಸಿದರು.
ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಲಾಗಿದ್ದ ಚಿಕ್ಕಬಳ್ಳಾಪುರ ನಗರದ ನಾಗರಿಕರಿಂದ ಕೊರೊನಾ ವಾರಿಯರ್ಸ್‌ಗಳಿಗೆ ಕೃತಜ್ಞತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು..
ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ತಾಂಡದವಲಸೆ ಕಾರ್ಮಿಕರು ಮಹಾರಾಷ್ಟ್ರದಿಂದ 8 ಬಸ್ಸಿನ ಮೂಲಕ ಒಟ್ಟು 275 ಜನರನ್ನು ಬರಮಾಡಿಕೊಳ್ಳಲಾಗಿತ್ತು ಆದರೆ ಮಹಾರಾಷ್ಟç ಕಾರ್ಮಿಕರು ಹಾಗೂ ಜಿಲ್ಲೆಯ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 150 ದೃಢಪಟ್ಟಿದೆ. ಇವರೆಲ್ಲ ಅತೀ ಶೀಘ್ರದಲ್ಲೆ ಗುಣಮುಖರಾಗುತ್ತಾರೆ ಇನ್ನೂ ಕೆಲವು ದಿನಗಳಲ್ಲಿ ಜಿಲ್ಲೆಯನ್ನು ಕೊರೋನಾ ವೈರಸ್ ಮುಕ್ತ ಜಿಲ್ಲೆಯನ್ನಾಗಿ ನೋಡಬಹುದಾಗಿದೆ ಹಾಗೂ ಜಲ್ಲೆಯನ್ನು ಹಸಿರು ವಲಯದಲ್ಲಿ ಕಾಣಬಹುದಾಗಿದೆ ಎಂದರು.
ಪ್ರತಿಯೊಬ್ಬ ವಾರಿಯರ್ಸ್‌ಗಳ ಕೂಡ ದೇಶದ ಸೈನಿಕನಂತೆ ಕೊರೋನಾ ವೈರೆಸ್ ವಿರುದ್ದ ಹೋರಾಡಿದ್ದಾರೆ, ಸರ್ಕಾರವು 4 ತಿಂಗಳ ಲಾಕ್‌ಡೌನ್ ಪರಿಸ್ಥಿತಿಯಲ್ಲಿ ದೇಶ ರಾಜ್ಯ ಆರ್ಥಿಕ ಕಷ್ಟಕರ ಪರಿಸ್ಥಿತಿಯಲ್ಲಿ ಜನರಿಗೆ ಉಚಿತವಾಗಿ ಆಹಾರ ಧಾನ್ಯಗಳು ಹಾಗೂ ತರಕಾರಿಗಳನ್ನು ನೀಡಲಾಗಿದೆ. ಅದೇ ರೀತಿ ಹಲವಾರು ಸ್ವಯಂಸೇವಕರು ಸಂಘ ಸಂಸ್ಥೆಗಳು ಇಂತಹ ಕಷ್ಟಕರ ಸಮಯದಲ್ಲಿ ನಗರ ಗ್ರಾಮೀಣ ಪ್ರದೇಶಗಳಲ್ಲಿ ಉಚಿತವಾಗಿ ಆಹಾರ ಕೀಟ್‌ಗಳನ್ನು ನೀಡುತ್ತಿರುವವರಿಗೆ ಅಭಿನಂದಿಸಿದರು.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಜಿಲ್ಲಾಧಿಕಾರಿ ಆರ್. ಲತಾ ಮಾತನಾಡಿ ಜಿಲ್ಲೆಯಲ್ಲಿ ಮಾರ್ಚ್ 20 ರಂದು ಕೊರೋನಾ ಮೊದಲ ಪ್ರಕರಣವು ದಾಖಲಾಯಿತು ಮೂರು ತಿಂಗಳಲ್ಲಿ 150 ಪ್ರಕರಣಗಳು ಕಂಡು ಬಂದು 90 ಜನ ಚೇತರಿಸಿಕೊಂಡು ಮೂರು ಜನರು ಸಾವನ್ನಪ್ಪಿ ಉಳಿದ ಜನರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಎಲ್ಲಾ ಇಲಾಖೆಗಳಲ್ಲಿ ಸಮನ್ವಯತೆ ಇದೆ. ನಾವು ನಮ್ಮ ದಿನ ನಿತ್ಯದ ಜೀವನ ಶೈಲಿಯನ್ನು ಬದಲಾವಣೆಯನ್ನು ಮಾಡಿಕೊಳ್ಳಬೇಕು ನಮ್ಮ ಪೂರ್ವಿಕರು ಮಾಡುತ್ತಿದ್ದ ಪದ್ದತಿಗಳನ್ನು ನಾವು ಅನುಸರಿಸಬೇಕಾಗುತ್ತದೆ ಎಂದರು .
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail